ಧಾರವಾಡ: ಈಶ್ವರಪ್ಪ ರಾಷ್ಟ್ರ ಧ್ವಜ ಹೇಳಿಕೆ ವಿಚಾರ ಅವರು ಎರಡು ನೂರು ವರ್ಷಗಳ ನಂತರ ಕೇಸರಿ ಧ್ವಜ ಬರಬಹುದು ಎಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ನನ್ನ ಪ್ರಕಾರ ನಮ್ಮ ರಾಷ್ಟ್ರ ಧ್ವಜವನ್ನು 200 ವರ್ಷಗಳ ನಂತರ ಒಮ್ಮತದಿಂದ ಒಪ್ಪಿದ್ದೇವೆ. 75 ವರ್ಷದಲ್ಲಿ ತ್ರಿವರ್ಣ ಧ್ವಜದ ಜೊತೆ ನಮ್ಮ ಸಂಬಂಧ ಇದೆಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದು ಗೌರವದ ಪ್ರತೀಕ, ಅದೇ ಇರುತ್ತೆ ಇದನ್ನೇ ಇಟ್ಟುಕೊಂಡು ವಿಧಾನಸಭೆ ಹಾಗೂ ಪರಿಷತ್ ಕಲಾಪ ಹಾಳು ಮಾಡುವಂತಹದ್ದು ಸರಿ ಅಲ್ಲ. ಕಾಂಗ್ರೆಸ್ಗೆ ಏನಾಗಿದೆ ಅಂದ್ರೆ ಇದೊಂದೇ ನೆಪ ಅವರಿಗೆ ಸಿಕ್ಕಿದೆ ಎಂಬುದರ ಬಗ್ಗೆ ನನಗೆ ಖಚಿತ ಮಾಹಿತಿ ಇದೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ನಲ್ಲೇ ಎರಡು ಬಣಗಳಾಗಿವೆ. ಹಿಜಾಬ್ ಪರ ನಾವು ತೀರ್ಮಾನ ತೆಗೆದುಕೊಂಡರೆ ನಷ್ಟ ಹಾಗೂ ವಿರುದ್ಧ ತೀರ್ಮಾನ ತೆಗೆದುಕೊಂಡರೆ ಮುಸ್ಲಿಂ ಮತಗಳು ಕೈಜಾರಿ ಹೋಗುತ್ತವೆ ಎಂಬ ಚಿಂತೆ ಅವರಿಗೆ ಇದೆ ಎಂದು ಹರಿಹಾಯ್ದರು.
ಈ ಕಾರಣದಿಂದ ಈ ವಿಷಯ ಇಟ್ಟುಕೊಂಡು ಅಗತ್ಯಕ್ಕಿಂತ ಹೆಚ್ಚು ವಿವಾದ ಮಾಡಿ ಕಲಾಪ ಹಾಳು ಮಾಡುತ್ತಿದ್ದಾರೆ. ಜನರ ದುಡ್ಡು ಪೋಲಾಗುತ್ತಿದೆ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ನೀವು ಚರ್ಚೆಗೆ ಬನ್ನಿ, ನಿಮಗೆ ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಈಶ್ವರಪ್ಪ ಅವರ ಹೇಳಿಕೆ ನೆಪವಾಗಿ ಇಟ್ಟುಕೊಂಡಿದ್ದೀರಿ. ಇದು ಜನರಿಗೆ ಮಾಡುವ ದ್ರೋಹ. ಕೇಸರಿ ಧ್ವಜ ಅಥವಾ ಹಿಜಾಬ್ ಇರಬಹುದು. ಅವನ್ನು ಧರಿಸಕೊಂಡು ಬರುವುದು ಸರಿಯಲ್ಲ. ಇದರಿಂದ ಧರ್ಮದ ಸಮಸ್ಯೆ ಆರಂಭ ಆಗುತ್ತದೆ. ಶಾಲೆಗಳಲ್ಲಿ ಗುಂಪುಗಳು ಬೆಳೆಯುತ್ತವೆ. ಇಂತ ಅತ್ಯಂತ ಘನಘೋರ ತಪ್ಪನ್ನು ದುರುದ್ದೇಶದಿಂದ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರೋಧಿ ಸಂಘಟನೆಗಳು ಯಾವ ರೀತಿ ಪ್ರಚಾರ ಮಾಡುತ್ತಿವೆ. ಟ್ವೀಟ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲವೂ ಪ್ಲಾನ್ ಆಗಿ ದೇಶಕ್ಕೆ ಬದನಾಮ್ ಮಾಡಲು ಪ್ರಯತ್ನ ನಡೆದಿದೆ. ಇದಕ್ಕೆ ಕಾಂಗ್ರೆಸ್ನವರು ಮೋದಿ ಅಥವಾ ಬೊಮ್ಮಾಯಿ ವಿರೋಧದ ಭರದಲ್ಲಿ ದೇಶವನ್ನ ವಿರೋಧ ಮಾಡಬಾರದು ಎಂದು ಜೋಶಿ ಮನವಿ ಮಾಡಿದರು.
ಇದನ್ನೂ ಓದಿ: ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ: ಸಿದ್ದರಾಮಯ್ಯ