ETV Bharat / state

ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ - Pralhad Joshi reaction

ಕಾಂಗ್ರೆಸ್ ಎ ರಾಜಾ ಮತ್ತು ಉದಯ್ ಹೇಳಿಕೆ ಖಂಡಿಸುವ ಪ್ರಯತ್ನ ಮಾಡಿಲ್ಲ. ಘಮಂಡಿಯಾ ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ. ಆದರೆ ಇದು ಅರ್ಥವಿಲ್ಲದ ಘಟಬಂಧನ-ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ.

Union minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ
author img

By ETV Bharat Karnataka Team

Published : Sep 9, 2023, 7:14 AM IST

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಪ್ರತಿಕ್ರಿಯೆ

ಹುಬ್ಬಳ್ಳಿ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ 'ಮೈತ್ರಿ ಬಗ್ಗೆ ನನಗೇನು ಗೊತ್ತಿಲ್ಲ. ಈ ವಿಷಯದಲ್ಲಿ ಅಧಿಕೃತ ಮಾಹಿತಿ ಬರುವವರೆಗೆ ನಾನು ಏನು ಹೇಳುವುದಿಲ್ಲ' ಎಂದರು.

ಶುಕ್ರವಾರ (ನಿನ್ನೆ) ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಿಎಂಕೆ ನಾಯಕ ಎ ರಾಜಾ ಮತ್ತು ಸಚಿವ ಉದಯನಿಧಿ ಸ್ಟಾಲಿನ್​ ಹೇಳಿಕೆ ಖಂಡಿಸುವ ಪ್ರಯತ್ನ ಮಾಡಿಲ್ಲ. ಘಮಂಡಿಯಾ ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ. ಇದು ಅರ್ಥವಿಲ್ಲದ ಘಟಬಂಧನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ‌ ನಡೆಸಿದರು.

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಮ್ಯೂನಿಸ್ಟ್‌ ವಿರುದ್ಧ ಕಾಂಗ್ರೆಸ್ ಸಾಕಷ್ಟು ಕಡೆ ಸ್ಪರ್ಧೆ ಮಾಡಿದೆ. ಮುಂಬೈ, ಪಾಟ್ನಾ, ದೋಸ್ತಿ. ಕೇರಳದಲ್ಲಿ ಕುಸ್ತಿ. ಇದು ಅವರ ನೀತಿಯಾಗಿದೆ. ಮಮತಾ ಬ್ಯಾನರ್ಜಿಯವರು ಕಮ್ಯೂನಿಸ್ಟ್‌ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದಾರೆ. ಇದು ತುಷ್ಟೀಕರಣದ ಘಟಬಂಧನ. ಇದರಿಂದ ದೇಶದ ಸನಾತನ ಧರ್ಮ ಹಾಗೂ ಸಂಸ್ಕೃತಿಗಳನ್ನು ಹಿಯಾಳಿಸುವ ಕೆಲಸವಾಗಿದೆ ಎಂದು ಜೋಶಿ ಹರಿಹಾಯ್ದರು. ಕೇವಲ ವೋಟಗಾಗಿ‌ ಹಿಂದೂ ಧರ್ಮವನ್ನು ಹಿಯಾಳಿಸಲಾಗುತ್ತಿದೆ. ದೇಶದ ಜನರನ್ನು ಇವರು ಬೇಕೆಂದೇ ಹಿಯಾಳಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿದೆ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿ ಪೂಜೆ‌ ಮಾಡಿಸಿ ಡ್ರಾಮಾ ಮಾಡುತ್ತಾರೆ ಎಂದರು.

ಮೋದಿಯವರನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಟ್ವಿಟ್​​ಗೆ ಪ್ರತಿಕ್ರಿಯಿಸಿದ ಜೋಶಿ 'ಸಿದ್ದರಾಮಯ್ಯನವರೇ ಏನು ಮಾತನಾಡುತ್ತಿದ್ದಿರಿ?. ನೀವು ತುಷ್ಟೀಕರಣದಿಂದ ರಾಜ್ಯದಲ್ಲಿ ಗೆದ್ದಿರಬಹುದು. ಆದರೆ ನೀವು ದೇಶದ ಲೋಕಸಭೆಯಲ್ಲಿ ಕಳೆದ 10 ವರ್ಷಗಳಿಂದ ವಿರೋಧ ಪಕ್ಷದವರಾಗಿಲ್ಲ. ಕಳೆದ 45 ವರ್ಷದಿಂದ ದೇಶದಲ್ಲಿ ಸ್ವಂತ ತಾಕತ್ತಿನ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್​ನ ಮುತ್ತಜ್ಜ, ಅಜ್ಜ, ಮಗ ಇವರೇ ಆಡಳಿತ ನಡೆಸಿದ್ದರು. ಇವರ ಕೈಯಲ್ಲಿ ಸರ್ವಸ್ವವೂ ಇತ್ತು. ಆದರೆ ವಿಪಕ್ಷ ನಾಯಕ ಸ್ಥಾನ ಕಳೆದುಕೊಂಡಿದ್ದೀರಿ. ಬಹಳ ದುರಹಂಕಾರದಲ್ಲಿ ಮಾತನಾಡಬೇಡಿ'. ನಾನು ಕೂಡ ಆ ಸಭೆಯಲ್ಲಿ ಇದ್ದೆ. ಮೋದಿಯವರು ಆ ರೀತಿ ಹೇಳಿಲ್ಲ. ಮೋದಿಯವರ ಹೇಳಿಕೆ ವಿಡಿಯೋ ಯಾರೂ ನೋಡಿಲ್ಲ. ಸಂವಿಧಾನದ ಮೂಲಕ ವಿರೋಧ ವ್ಯಕ್ತಡಿಸಿ ಅಂತ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆಕಸ್ಮಾತ ಹೇಳಿದರೂ ಏನು ತಪ್ಪು?. ಯಾರು ಈ ಪ್ರಶ್ನೆ ಟ್ವೀಟ್​ ಮಾಡಿದ್ದಾರೆ ಅವರಿಗೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದರು.

ಇದನ್ನೂ ಓದಿ: 'ಲೋಕ' ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ... 'ದಳ'ಕ್ಕೆ ಸಿಗಲಿರುವ 4 ಕ್ಷೇತ್ರಗಳು ಯಾವುವು?

ಕಾಂಗ್ರೆಸ್ ಉದಯನಿಧಿ ಹೇಳಿಕೆ ಖಂಡಿಸಿಲ್ಲ: ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಅಚಾನಕ್ಕಾಗಿ ಅವರು ಆ ಹೇಳಿಕೆ ಕೊಟ್ಟಿಲ್ಲ. ಸನಾತನ ಧರ್ಮದ ವಿರುದ್ಧವಾಗಿಯೇ ಅಲ್ಲಿ ಕಾನ್ಫರೆನ್ಸ್ ಮಾಡಲಾಗಿತ್ತು. ಈ ಹೇಳಿಕೆ ಖಂಡಿಸಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಾಗಿಲ್ಲ. ಘಮಂಡಿಯಾ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ: ಘಮಂಡಿಯಾ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಉದಯನಿಧಿ ಹೇಳಿಕೆ ಖಂಡಿಸಿಲ್ಲ: ಪ್ರಹ್ಲಾದ್ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.