ETV Bharat / state

ಉತ್ಸಾಹ ಭರಿತವಾಗಿ ಕಾರ್ಯಕಾರಿಣಿ ಸಭೆ ನಡೆದಿದೆ: ಕೇಂದ್ರ ಸಚಿವ ಜೋಶಿ - ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಕುರಿತು ಪ್ರಹ್ಲಾದ್ ಜೋಶಿ ಹೇಳಿಕೆ

ಜಾರಕಿಹೊಳಿಯವರು ಕಾರ್ಯಕಾರಿಣಿಯಲ್ಲಿ ಇಲ್ಲ. ಸಂಪುಟ ವಿಸ್ತರಣೆಯ ಬಗ್ಗೆ ಇಲ್ಲಿ ಚರ್ಚೆ ಆಗಲ್ಲ. ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ಆ ಬಗ್ಗೆ ಸಿಎಂ ನಿರ್ಧಾರ ಮಾಡಲಿದ್ದಾರೆ. ಸಿಎಂ‌ ಬದಲಾವಣೆ ಬಗ್ಗೆ ಈಗಾಗಲೇ ಈಗಾಗಲೇ ಹಲವು ಬಾರಿ ಹೇಳಿದ್ದೇವೆ. 2023 ರ ಚುನಾವಣೆಯನ್ನು ಸಹ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

author img

By

Published : Dec 28, 2021, 7:38 PM IST

ಹುಬ್ಬಳ್ಳಿ : ಉತ್ಸಾಹ ಭರಿತವಾದ ವಾತಾವರಣದಲ್ಲಿ ಕಾರ್ಯಕಾರಿಣಿ ಸಭೆ ನಡೆದಿದೆ. ನಮ್ಮ ಯಶಸ್ವಿ ಮುಖ್ಯಮಂತ್ರಿ, ರಾಜ್ಯ ಉಸ್ತುವಾರಿ ಅರುಣ್​ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಅಂಶಗಳ ಬಗ್ಗೆ ಅಂಕಿ-ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ನಮ್ಮ ಸರ್ಕಾರ ಹಾಗೂ ಸಂಘಟನೆಯಿಂದ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಸೇವೆ ಮತ್ತು ಸಂಘಟನೆ ಒಟ್ಟಿಗೆ ನಡೆಯಬೇಕು. ಬರೀ ಆರೋಪ ಪ್ರತ್ಯಾರೋಪದ ಮೇಲೆ ನಡೆಯಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಡಿಮೆ ಸದಸ್ಯರ ಮೂಲಕ ಸಭೆ ನಡೆದಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾಹಿತಿ ಪಡೆದ ನಂತರ ಕೋರ್​​ ಕಮಿಟಿಯಲ್ಲಿ ಚರ್ಚೆ ನಡೆಯಲಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿದೇಶದಲ್ಲಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಸಂಸದರು, ಕೇಂದ್ರ ಸಚಿವರು ಇರಲ್ಲ. ರಾಜ್ಯ ಕಾರ್ಯಕಾರಿಣಿಯಲ್ಲಿ ಎಲ್ಲ ಸಚಿವರು ಶಾಸಕರು ಇರಲ್ಲ. ಈ ಸಭೆಯ ದಿನಾಂಕ ಮೊದಲೇ ನಿಗದಿಯಾಗಿತ್ತು. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಮನವಿ ಮಾಡಿದ್ರು.

ಮಾಜಿ ಸಚಿವ ರಮೇಶ್​ ಜಾರಕಿಹೊಳಿಯವರು ಕಾರ್ಯಕಾರಿಣಿಯಲ್ಲಿ ಇಲ್ಲ. ಸಂಪುಟ ವಿಸ್ತರಣೆಯ ಬಗ್ಗೆ ಇಲ್ಲಿ ಚರ್ಚೆ ಆಗಲ್ಲ. ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ಆ ಕುರಿತು ಸಿಎಂ ನಿರ್ಧಾರ ಮಾಡಲಿದ್ದಾರೆ. ಸಿಎಂ‌ ಬದಲಾವಣೆ ಬಗ್ಗೆ ಈಗಾಗಲೇ ಬಾರಿ ಹೇಳಿದ್ದೇವೆ. 2023 ರ ಚುನಾವಣೆಯನ್ನು ಸಹ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಸಚಿವ ಜೋಶಿ ಹೇಳಿದರು.

ಮತಾಂತರ ನಿಷೇಧ ಕಾನೂನು ಜಾರಿ ಮಾಡಿದ್ದಕ್ಕೆ ಸಿಎಂಗೆ ಇಂದಿನ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ್ದೇವೆ. ಮುಂದೆ ಪರಿಷತ್ ನಲ್ಲಿ ಜಾರಿ ಮಾಡಲಾಗುವುದು. ಈ ಕಾನೂನು ಎಲ್ಲ ಕಾನೂನಿನಂತೆ ಜಾರಿಯಾಗಲಿದೆ. ಕಠಿಣವಾಗಿ ಜಾರಿ ಆಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸಲಹೆ ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.