ETV Bharat / state

ವಿಶ್ವದ ಯಾವ ಶಕ್ತಿಯಿಂದಲೂ ಭಾರತದ ಪ್ರಜಾಪ್ರಭುತ್ವ ಪರಂಪರೆಗೆ ಹಾನಿಯಾಗಲ್ಲ: ಪ್ರಧಾನಿ ಮೋದಿ - ರಆಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ

ಧಾರವಾಡದಲ್ಲಿ ಐಐಟಿ ಕ್ಯಾಂಪಸ್, ಹುಬ್ಬಳ್ಳಿ ಸಿದ್ಧಾರೂಡ ಸ್ವಾಮೀಜಿ ರೈಲು ಪ್ಲಾಟ್‌ಫಾರ್ಮ್ ಉದ್ಘಾಟಿಸಿ ಪ್ರಧಾನಿ ಮೋದಿ ಭಾಷಣ. ರಾಹುಲ್ ಗಾಂಧಿ ಹೆಸರು ಹೇಳದೇ ಮೋದಿ ವಾಗ್ದಾಳಿ.

modi
ಮೋದಿ
author img

By

Published : Mar 12, 2023, 6:40 PM IST

Updated : Mar 12, 2023, 9:52 PM IST

ಪ್ರಧಾನಿ ಮೋದಿ ಭಾಷಣ

ಧಾರವಾಡ: ವಿಶ್ವಗುರು ಬಸವಣ್ಣ ಮತ್ತು ಅವರ ಅನುಭವ ಮಂಟಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ, ಕೆಲ ವರ್ಷಗಳ ಹಿಂದೆ ಲಂಡನ್​ನಲ್ಲಿ ಬಸವೇಶ್ವರರ ಪ್ರತಿಮೆ ಲೋಕಾರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿತ್ತು. ಆ ಮೂಲಕ ಅನುಭವ ಮಂಟಪದ ಮಹತ್ವ ಸಾರಲಾಯಿತು. ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ. ಆದ್ರೆ ದುರಂತವೆಂದ್ರೆ ಲಂಡನ್​ನಲ್ಲಿ ಕೆಲವರು ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನು ವಿಶ್ವದ ಯಾವ ಶಕ್ತಿಯೂ ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಪ್ರಶ್ನಿಸುವ ಮೂಲಕ ಬಸವಣ್ಣನವರಿಗೆ, ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಅವಮಾನಿಸಲಾಗಿದೆ. ಇಂತಹ ವ್ಯಕ್ತಿಗಳನ್ನು ಕನ್ನಡಿಗರು ದೂರವಿಡಬೇಕು ಎಂದು ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕ್ಯಾಂಪಸ್, ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್​ಫಾರ್ಮ್ ಆಗಿರುವ ಹುಬ್ಬಳ್ಳಿ ಸಿದ್ಧಾರೂಡ ಸ್ವಾಮೀಜಿ ರೈಲು ಪ್ಲಾಟ್‌ಫಾರ್ಮ್ ಉದ್ಘಾಟನೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪಿಸಿ ಪ್ರಧಾನಿ ಮೋದಿ ಮಾತನಾಡಿದರು.

ಭಗವಾನ್ ಬಸವೇಶ್ವರರಿಗೆ ನಮನಗಳನ್ನು ಸಲ್ಲಿಸುವ ಮೂಲಕ ಕನ್ನಡದಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಪ್ರಸಕ್ತ ವರ್ಷದ ಆರಂಭದಲ್ಲೇ ಹುಬ್ಬಳ್ಳಿಗೆ ಆಗಮಿಸುವ ಅವಕಾಶ ಸಿಕ್ಕಿತ್ತು. ಹುಬ್ಬಳ್ಳಿ ಜನರು ನೀಡಿರುವ ಪ್ರೀತಿ ಮತ್ತು ಆಶೀರ್ವಾದವನ್ನು ಎಂದೂ ಮರೆಯಲ್ಲ. ಕನ್ನಡಿಗರ ಸ್ನೇಹ ಮತ್ತು ಆಶೀರ್ವಾದ ನನಗೆ ಪ್ರೇರಣೆ ನೀಡಿದೆ. ಕರ್ನಾಟಕ ಜನರ ಸೇವೆ ಮಾಡಿ ಆ ಋಣ ತೀರಿಸುತ್ತೇನೆ. ಇಲ್ಲಿನ ಜನರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಯೋಜನೆಗಳಿಗೆ ಅಡಿಗಲ್ಲು ಹಾಕಿ ಮರೆತು ಬಿಡುವ ಕಾಲ ಹೋಗಿದೆ. ನಮ್ಮ ಸರ್ಕಾರವೇ ಶಂಕುಸ್ಥಾಪಿಸಿದ ಯೋಜನೆಗಳನ್ನು ಉದ್ಘಾಟಿಸುತ್ತಿದ್ದೇವೆ. 4 ವರ್ಷಗಳ ಹಿಂದೆ ಧಾರವಾಡ ಐಐಟಿಗೆ ಶಿಲಾನ್ಯಾಸ ನೆರವೇರಿಸಿದ್ದೆ. ಈಗ ಉದ್ಘಾಟಿಸುತ್ತಿದ್ದೇನೆ. ಇದು ಡಬಲ್​ ಇಂಜಿನ್ ಸರ್ಕಾರದ ಅಭಿವೃದ್ಧಿಯ ವೇಗ. ನಾವೇ ಶಿಲಾನ್ಯಾಸ ಮಾಡಿ, ನಾವೇ ಲೋಕಾರ್ಪಣೆಗೊಳಿಸುವುದು ನಮ್ಮ ಸರ್ಕಾರದ ಗುರಿ ಎಂದು ಮೋದಿ ತಿಳಿಸಿದರು.

ದೇಶದಲ್ಲಿ ಕಳೆದ 9 ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿದ್ದು, 250 ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದೆ. ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ತಂತ್ರಜ್ಞಾನ ಮತ್ತು ಮೂಲಭೂತಸೌಕರ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಸಾಧಿಸಿದ್ದೇವೆ. ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೆದ್ದಾರಿ, ಶಿವಮೊಗ್ಗದಲ್ಲಿ ಕುವೆಂಪು ಏರ್​ಪೋರ್ಟ್, ಈಗ ಧಾರವಾಡ ಐಐಟಿ ಉದ್ಘಾಟಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.

ಇನ್ನು ಧಾರವಾಡದ ಬಗ್ಗೆ ಪ್ರಸ್ತಾಪಿಸಿದ ಮೋದಿ, ಧಾರವಾಡ ಭಾರತದ ಪ್ರತಿಬಿಂಬ. ಸಂಗೀತ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಪಂಡಿತ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ದ.ರಾ.ಬೇಂದ್ರ ಅವರನ್ನು ಸ್ಮರಿಸಿದರು. ಜೊತೆಗೆ ಧಾರವಾಡದ ಫೇಮಸ್ ಫೇಡಾ ಒಮ್ಮೆ ಸವಿದರೆ ಮತ್ತೊಮ್ಮೆ ಸವಿಯಬೇಕೆನಿಸುತ್ತದೆ ಎಂದರು.

  • ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿದ್ದರೇ, ಅದೇ ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಅಭ್ಯುದಯದ ಮೇಲಿರುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಒಬ್ಬ ಮುತ್ಸದ್ದಿಯಾಗಿದ್ದು ಧಾರವಾಡದಲ್ಲಿ ಐಐಟಿ ಆರಂಭಿಸುವ ಮೂಲಕ ಈ ಭಾಗದ ಭವಿಷ್ಯದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣಕ್ಕೆ ಉತ್ತಮ ಅವಕಾಶವನ್ನು ಕಲ್ಪಿಸಿದ್ದಾರೆ. pic.twitter.com/Sj7Y6sgKDg

    — Basavaraj S Bommai (@BSBommai) March 12, 2023 " class="align-text-top noRightClick twitterSection" data=" ">

ಧಾರವಾಡದ ಐಐಟಿ, ವಿಶ್ವದ ಅತಿ ದೊಡ್ಡ ಪ್ಲಾಟ್ ಫಾರಂಅನ್ನು ಮೋದಿ ಉದ್ಘಾಟಿಸಿದ್ದಾರೆ. ಐಐಟಿ ಮುಂದಿನ ಜನಾಂಗವನ್ನು ರೂಪಿಸುವ ಮತ್ತು ದೇಶ ಕಟ್ಟುವ ತಾಂತ್ರಿಕ ಸೇನೆ ತಯಾರು ಮಾಡುತ್ತದೆ. ಮಾತಿನಲ್ಲಿ ಅಭಿವೃದ್ಧಿಯಾಗಲ್ಲ ಅದನ್ನು ಮಾಡಿ ತೋರಿಸೋ ಛಾತಿ ಮೋದಿ ಅವರಲ್ಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ಕೊಟ್ಟಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕ್ಯಾಂಪಸ್, ಹುಬ್ಬಳ್ಳಿ ಸಿದ್ಧಾರೂಡ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್, ಹುಬ್ಬಳ್ಳಿ- ಹೊಸಪೇಟೆ- ತಿನೇಘಾಟ್ ವಿದ್ಯುದೀಕರಣ ಮತ್ತು ಉನ್ನತೀಕರಿಸಿದ ಹೊಸಪೇಟೆ ನಿಲ್ದಾಣ ಹಾಗೂ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಜೊತೆಗೆ ತುಪ್ಪರಿಹಳ್ಳ ಪ್ರವಾಹ ತಡೆಗೋಡೆ ನಿರ್ಮಾಣ ಯೋಜನೆ, ಹುಬ್ಬಳ್ಳಿಯಲ್ಲಿ‌ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ, ಧಾರವಾಡ ಜಿಲ್ಲೆಯ 144 ಗ್ರಾಪಂ‌ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ‌ ಜನಜೀವನ ಮಿಷನ್ ಯೋಜನೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ನನ್ನ ಸಮಾಧಿ ತೋಡುವ ಕನಸು ಕಾಣುತ್ತಿದೆ : ಮಂಡ್ಯದಲ್ಲಿ ಮೋದಿ ವಾಗ್ದಾಳಿ

Last Updated : Mar 12, 2023, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.