ಹುಬ್ಬಳ್ಳಿ: ಜಿಲ್ಲೆಯಲ್ಲಿ ಇಂದು ಒಂದೇ ಕುಟುಂಬದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ರೋಗಿ ನಂ-236ರ ಸಂಪರ್ಕದಿಂದ 30 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಇವರಿಬ್ಬರು ಒಂದೇ ಕುಟುಂಬದವರಾಗಿದ್ದು, ಮಾ.17ರಂದು ರೋಗಿ ನಂ-236ರ ಮನೆಗೆ ತೆರಳಿದ್ದರು. ಈ ವೇಳೆ ಅವರ ಸಂಪರ್ಕದಿಂದ, ಕಿರಿಯ ಸಹೋದರಿ ಮತ್ತು ಹಿರಿಯ ಸಹೋದರಿ ಪುತ್ರಿಗೆ ಸೋಂಕು ತಗುಲಿದೆ.
ಈ ಸಂಬಂಧ ಕೇಶ್ವಾಪುರದ ಸುತ್ತಮತ್ತಲಿನ ಆಜಾದ್ ನಗರ, ರಮೇಶ ಭವನ, ಬಾರಾಕೊಟ್ರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ಸೋಂಕಿತರ ಪ್ರದೇಶಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.