ETV Bharat / state

ಹುಬ್ಬಳ್ಳಿಯಲ್ಲೂ ಗಾಂಜಾ ಘಾಟು: ಕಾಲೇಜು ವಿದ್ಯಾರ್ಥಿಗಳ ಟಾರ್ಗೇಟ್ ಮಾಡಿ ಗಾಂಜಾ ಮಾರಾಟ!

author img

By

Published : Sep 3, 2020, 3:20 PM IST

ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ. ವಿದ್ಯಾರ್ಥಿಗಳಿಗೆ ಕೆಲವರು ಗಾಂಜಾ ಹಾಗೂ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಇಬ್ಬರು ಯುವಕರ ಬಂಧನ
ಇಬ್ಬರು ಯುವಕರ ಬಂಧನ

ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ದೇಶಪಾಂಡೆ ನಗರದ ಚರ್ಚ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗದಗ ಮೂಲದ ಮಾರುತಿ ಹರಣಕಾಶಿ, ಚಂದಪ್ಪ ಹರಣಕಾಶಿ ಬಂಧಿತ ಆರೋಪಿಗಳು. ಆರೋಪಿಗಳಿಂದ 5 ಕೆಜಿ 100 ಗ್ರಾಂ ಗಾಂಜಾ, ಒಂದು ಬೈಕ್ ವಶ ವಶಪಡಿಸಿಕೊಳ್ಳಲಾಗಿದೆ.

ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೇಟ್ ಮಾಡಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ‌ಎಂಬ ಆಘಾತಕಾರಿ ಮಾಹಿತಿಯನ್ನು ಡಿಸಿಪಿ‌ ಕೃಷ್ಣಕಾಂತ್ ಹೇಳಿದ್ದಾರೆ. ಇದರ ಮಾಹಿತಿ ಮೇರೆಗೆ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಪ್ರಕರಣ ಭೇದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೆಲವರು ಗಾಂಜಾ ಹಾಗೂ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಖಚಿತ ಆಧಾರದ ಮೇಲೆ ನಾವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಹು-ಧಾ ಮಹಾನಗರದಲ್ಲಿ ಎಲ್ಲಿಯಾದರೂ ಕೂಡ ಇಂತಹ ಕೃತ್ಯಗಳು ನಡೆಯುವುದು ಕಂಡುಬಂದರೇ ಕೂಡಲೇ 9480802005ಗೆ ಕರೆ ಮಾಡುವಂತೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.