ETV Bharat / state

ಬಂಧನ ಭೀತಿಯಿಂದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ - ಹುಬ್ಬಳ್ಳಿ

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧನ ಭೀತಿಯಿಂದ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಭಾನುವಾರ ಸಾಯಂಕಾಲ ನಡೆದಿದೆ.

ಕೊಲೆಯಾದ ಶಾಂತಬಾಯಿ ಗಂಗಾಧರಪ್ಪ ಮಾಳವಾದೆ
author img

By

Published : Aug 19, 2019, 1:07 PM IST

Updated : Aug 19, 2019, 2:11 PM IST

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಭಾನುವಾರ ಸಾಯಂಕಾಲ ನಡೆದಿದೆ.

ಶಿಗ್ಗಾಂವ್ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದ ಕೊಲೆ

ದಂಪತಿಯಾದ ರವೀಂದ್ರ ಮಾಳವಾದೆ (65), ಸುಧಾ ಮಾಳವಾದೆ(60) ಹಾಗೂ ಇವರ ಪುತ್ರಿ ದಿವ್ಯಾ ಮಾಳವಾದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಭಾನುವಾರ ಸಾಯಂಕಾಲ ನಡೆದಿದೆ.

ಶಿಗ್ಗಾಂವ್ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದ ಕೊಲೆ

ದಂಪತಿಯಾದ ರವೀಂದ್ರ ಮಾಳವಾದೆ (65), ಸುಧಾ ಮಾಳವಾದೆ(60) ಹಾಗೂ ಇವರ ಪುತ್ರಿ ದಿವ್ಯಾ ಮಾಳವಾದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Intro:ಹುಬ್ಬಳ್ಳಿ-02
ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧನ ಭೀತಿಯಿಂದ ಹುಬ್ಬಳ್ಳಿ ಉಣಕಲ್ ಕೆರೆ ಬಳಿ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಭಾನುವಾರ ಸಾಯಂಕಾಲ ನಡೆದಿದೆ.

ದಂಪತಿಯಾದ ರವೀಂದ್ರ ಮಾಳವಾದೆ(65), ಸುಧಾ ಮಾಳವಾದೆ(60) ಹಾಗೂ ಇವರ ಪುತ್ರಿ ದಿವ್ಯಾ ಮಾಳವಾದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆಗಸ್ಟ್ 16ರಂದು ರಾತ್ರಿ ಶಿಗ್ಗಾಂವ್ ಪಟ್ಟಣದಲ್ಲಿ ಶಾಂತಬಾಯಿ ಗಂಗಾಧರಪ್ಪ ಮಾಳವಾದೆ(68) ಎಂಬವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಪ್ರಕರಣ ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರಿಗೆ ಕೊಲೆಯಾದ ಶಾಂತಾಬಾಯಿ ಅವರ ಮನೆಯಲ್ಲಿ ಆಸ್ತಿಗಾಗಿ ಕೌಟುಂಬಿಕ ಜಗಳ ನಡೆದಿರುವ ಮಾಹಿತಿ ದೊರಕಿತ್ತು. ಅವರ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದಾಗ, ರವೀಂದ್ರ ದಂಪತಿ ಅವರೇ ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿತ್ತು ಎನ್ನಲಾಗಿದೆ.

ವಿಷಯ ತಿಳಿದ ದಂಪತಿ ಬಂಧನ ಭೀತಿಯಿಂದ ಮಗಳ ಜತೆ ಹುಬ್ಬಳ್ಳಿ ಉಣಕಲ್ ಕೆರೆಗೆ ಬಂದು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅವರು ವಿಷ ಸೇವನೆ ಮಾಡಿರುವುದನ್ನು ನೋಡಿ ಮಗಳು ದಿವ್ಯಾ ಸಹ ವಿಷ ಕುಡಿದಿದ್ದಾಳೆ.

ಇದೇ ವೇಳೆ ದಂಪತಿಯನ್ನು ಪತ್ತೆ ಮಾಡಲು ಪೊಲೀಸರು ಮೊಬೈಲ್ ಲೊಕೇಶನ್ ಪರಿಶೀಲನೆ ಮಾಡಿದಾಗ ಉಣಕಲ್ ಕೆರೆ ಬಳಿ ಇರುವುದು ಪತ್ತೆಯಾಗಿದೆ. ಅಲ್ಲಿ ಹೋಗುವಷ್ಟರಲ್ಲಿ ಮೂವರು ಸಾವು ಬದುಕಿನ ನಡುವೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು.

ಕೂಡಲೇ ಅವರನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಮೂವರ ಸ್ಥಿತಿಯೂ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.Body:H B GaddadConclusion:Etv hubli
Last Updated : Aug 19, 2019, 2:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.