ETV Bharat / state

ಅಯೋಧ್ಯೆಯಲ್ಲಿ ಮಂದಿರ,  ಮಸೀದಿ ಇಲ್ಲ, ಅಲ್ಲಿರುವುದು ಬೌದ್ಧ ವಿಹಾರ: ಬಿಳ್ಳಾರ ಪ್ರತಿಪಾದನೆ - ಜೈ ಭೀಮ ಸಂಘಟನೆಯ ಮುಖಂಡ ಪೀತಾಂಬ್ರಪ್ಪ ಬಿಳ್ಳಾರ

ಅಯೋಧ್ಯೆಯಲ್ಲಿರುವುದು ಬೌದ್ಧವಿಹಾರವೇ ಹೊರತು ರಾಮ ಮಂದಿರ ಹಾಗೂ ಬಾಬರಿ ಮಸೀದಿಯಲ್ಲ. ಆದ್ದರಿಂದ ಈ ಜಾಗವನ್ನು ಬೌದ್ದರಿಗೆ ನೀಡಬೇಕು ಎಂದು ಜೈ ಭೀಮ ಸಂಘಟನೆಯ ಮುಖಂಡ ಪೀತಾಂಬ್ರಪ್ಪ ಬಿಳ್ಳಾರ ಹೇಳಿದ್ದಾರೆ.

Billara
ಜೈ ಭೀಮ ಸಂಘಟನೆಯ ಮುಖಂಡ ಪೀತಾಂಬ್ರಪ್ಪ ಬಿಳ್ಳಾರ
author img

By

Published : May 28, 2020, 9:52 PM IST

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರವೂ ಇಲ್ಲ ಬಾಬರಿ ಮಸೀದಿಯೂ ಇಲ್ಲ. ಇರುವುದು ಬಾವರಿ ಬೌದ್ಧ ವಿಹಾರ. ಈ ಹಿನ್ನೆಲೆ, ಇದನ್ನು ಬೌದ್ಧರಿಗೆ ನೀಡಬೇಕು ಎಂದು ಜೈ ಭೀಮ ಸಂಘಟನೆಯ ಮುಖಂಡ ಪೀತಾಂಬ್ರಪ್ಪ ಬಿಳ್ಳಾರ ಆಗ್ರಹಿಸಿದರು.

ಜೈ ಭೀಮ ಸಂಘಟನೆಯ ಮುಖಂಡ ಪೀತಾಂಬ್ರಪ್ಪ ಬಿಳ್ಳಾರ

ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಯಾವುದೇ ರಾಮಮಂದಿರವಾಗಲಿ, ಬಾಬರಿ ಮಸೀದಿಯಾಗಲಿ ಇಲ್ಲ ಅಲ್ಲಿರುವುದು ಬಾವರಿ ಬೌದ್ದ ವಿಹಾರ. ಆದರೆ, ಸುಪ್ರೀಂಕೋರ್ಟ್​​​​​ಗೆ ಸುಳ್ಳು ದಾಖಲೆಗಳನ್ನು ನೀಡಿ ವಾಸ್ತವ ಸ್ಥಿತಿಯನ್ನು ಮರೆಮಾಚಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಉತ್ಖನನದ ವೇಳೆಯಲ್ಲಿ ರಾಮಮಂದಿರ ಹಾಗೂ ಮಸೀದಿಗೆ ಸಂಬಂಧಿಸಿದ ಯಾವುದೇ ಅವಶೇಷಗಳು ಲಭ್ಯವಾಗಿಲ್ಲ. ಲಭ್ಯವಾಗಿರುವುದು ಬೌದ್ಧ ಧರ್ಮದ ಅವಶೇಷಗಳು ಹಾಗೂ ದಾಖಲೆಗಳು. ಈ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಅಯೋಧ್ಯೆಯನ್ನ ಬೌದ್ಧ ಧರ್ಮಕ್ಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.