ಹುಬ್ಬಳ್ಳಿ: ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ದೇವರಗುಡಿಹಾಳ ಕೆರೆಯಲ್ಲಿ ನಡೆದಿದೆ.
ದೇವರ ಗುಡಿಹಾಳ ಗ್ರಾಮದ ಅಸ್ಲಾಂ ಲಾಡಗಿ (27) ಮೃತಪಟ್ಟ ಯುವಕ. ಈತ ನಿನ್ನೆ ತನ್ನ ನಾಲ್ವರು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರೆಳಿದ್ದ. ಆಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ನಿನ್ನೆ ರಾತ್ರಿ ವಿಷಯ ತಿಳಿದಿದ್ದರಿಂದ ಹುಡುಕಲು ಹೋದವರಿಗೆ ಶವ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಪತ್ತೆಯಾಗಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.