ETV Bharat / state

ಮಳೆ ತಂದ ಆಪತ್ತು: ಹಳ್ಳದಲ್ಲಿ ಸಿಲುಕಿದ ಯುವಕ ಸಾವು-ಬದುಕಿನ ನಡುವೆ ಹೋರಾಟ - flood 2019

ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅನಾಹುತಗಳು ಸಂಭವಿಸುತ್ತಿವೆ. ಹೊಲಕ್ಕೆ ತೆರಳಿದ್ದ ಯುವಕನೋರ್ವ ಹಳ್ಳದಲ್ಲಿ ಸಿಲುಕಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಹಳ್ಳದ ಮಧ್ಯ ಸಿಲುಕಿಕೊಂಡ ಯುವಕ; ರಕ್ಷಿಸಲು ಹರಸಾಹಸ
author img

By

Published : Aug 6, 2019, 10:53 PM IST

Updated : Aug 6, 2019, 11:28 PM IST

ಹುಬ್ಬಳ್ಳಿ/ಧಾರವಾಡ: ಹೊಲಕ್ಕೆ ಹೋಗಿದ್ದ ವೇಳೆ ಯುವಕನೊರ್ವ ಹಳ್ಳದಲ್ಲಿ ಸಿಲುಕಿಕೊಂಡು ಸಂಕಷ್ಟ ಎದುರಿಸುತ್ತಿರುವ ಘಟನೆ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.

ಹನಸಿ ಗ್ರಾಮದ ನಿವಾಸಿ ಬಸವರಾಜ ಹಳ್ಳದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿ. ಮೊದಲೇ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶಿರಕೋಳ ಮತ್ತು ಹನಸಿ ಗ್ರಾಮದ ತುಪ್ಪದ ಹಳ್ಳವು ತುಂಬಿ ರಭಸದಿಂದ ಹರಿಯುತ್ತಿದೆ. ಈ ಸಂದರ್ಭದಲ್ಲಿ ಹೊಲಕ್ಕೆ ಹೋದಾಗ ಅಚಾನಕ ಆಗಿ ಯುವಕ ಹಳ್ಳದಲ್ಲಿ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲು ಸ್ಥಳೀಯರು ಹರ ಸಾಹಸ ಮಾಡುತ್ತಿದ್ದಾರೆ.

ಹಳ್ಳದ ಮಧ್ಯ ಸಿಲುಕಿಕೊಂಡ ಯುವಕ; ರಕ್ಷಿಸಲು ಹರಸಾಹಸ

ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್..!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್(ಧೂಮೀಕರಣ) ಮಾಡಲಾಯಿತು. ಅವಳಿ ನಗರದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಇದರ ಜೊತೆಗೆ ಸಾಂಕ್ರಾಮಿಕ ರೋಗಗಳ ಹಾವಳಿ ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಾಮನಗಟ್ಟಿ, ಶಾಂತಿನಿಕೇತನ ಕಾಲೊನಿ, ಲಿಂಗರಾಜ ನಗರ, ವಿದ್ಯಾನಗರ, ರೇಣುಕಾ ನಗರ, ಗಾಂಧಿವಾಡ ಸ್ಲಂ ಹಾಗೂ ಸಿದ್ದಾರ್ಥ ಕಾಲೋನಿಯಲ್ಲಿ ಫಾಗಿಂಗ್ ಮಾಡಲಾಗಿದೆ.

rain
ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್

ಜಿಲ್ಲೆಯಲ್ಲಿ ಶುರುವಾಯ್ತು ಮೂರು ಪುನರ್ವಸತಿ ಕೇಂದ್ರಗಳು:

ಧಾರವಾಡ ನಗರದ ಗೌಡರ ಕಾಲೊನಿ ಹಾಗೂ ಭಾವಿಕಟ್ಟಿ ಪ್ಲಾಟ್ ಪ್ರದೇಶದಲ್ಲಿ ಒಂದು ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ನವಲಗುಂದ ತಾಲೂಕಿನ ಆರೇಕುರಹಟ್ಟಿ ಹಾಗೂ ಅಳ್ನಾವರ ಪಟ್ಟಣದ ಉಮಾ ಭವನದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಅಗತ್ಯವಿರುವೆಡೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಪರಿಹಾರ ಕಾರ್ಯಕ್ಕೆ ನೋಡಲ್ ಅಧಿಕಾರಿಗಳ ನೇಮಕ :

ಸತತವಾಗಿ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುತ್ತಿರುವ ಹಾನಿಯ ಪರಿಹಾರ ಕಾರ್ಯಾಚರಣೆಗೆ ಪ್ರತಿ ತಾಲೂಕಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಧಾರವಾಡ ತಾಲೂಕು- ಮಹ್ಮದ್ ಜುಬೇರ್ ಉಪವಿಭಾಗಾಧಿಕಾರಿಗಳು- 9448821093

ಹುಬ್ಬಳ್ಳಿ ತಾಲ್ಲೂಕು- ಅಬೀದ್ ಎಸ್. ಎಸ್. ಜಂಟಿ ಕೃಷಿ ನಿರ್ದೇಶಕರು- 8277931270

ಹುಬ್ಬಳ್ಳಿ ನಗರ- ರಮೇಶ ದೇಸಾಯಿ, ಜನರಲ್ ಮ್ಯಾನೇಜರ್ ಹೆಸ್ಕಾಂ -9480881000,

ನವಲಗುಂದ ತಾಲೂಕು- ಸದಾಶಿವ ಮರ್ಜಿ, ಜಂಟಿ ನಿರ್ದೇಶಕರು,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ-9448992028

ಕುಂದಗೋಳ ತಾಲೂಕು- ಎಸ್. ಜಿ.ಕೊರವರ, ಉಪಕಾರ್ಯದರ್ಶಿ, ಜಿ.ಪಂ-9480864001

ಕಲಘಟಗಿ ತಾಲೂಕು- ಮಂಜುನಾಥ ಡೊಂಬರ್, ವಿಶೇಷ ಭೂಸ್ವಾಧೀನಾಧಿಕಾರಿ ,ಎನ್.ಹೆಚ್. 9880297387

ಅಳ್ನಾವರ ತಾಲೂಕು- ವಿನಾಯಕ ಪಾಲನಕರ್, ಯೋಜನಾ ನಿರ್ದೇಶಕ, ಡಿಯುಡಿಸಿ, 9886594289

ಅಣ್ಣಿಗೇರಿ ತಾಲೂಕು- ಶಾರದಾ ಕೋಲಕಾರ , ವಿಶೇಷ ಭೂಸ್ವಾಧೀನಾಧಿಕಾರಿ, ಎನ್ ಹೆಚ್- 9449973463

ಈ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕುಗಳಲ್ಲಿ ಜನ, ಜಾನುವಾರು ರಕ್ಷಣೆ, ವಸತಿ ಪರಿಹಾರಗಳ ಕಾರ್ಯ ಕೆರೆ, ಹಳ್ಳಗಳ ಭರ್ತಿ ಮೊದಲಾದ ಕಾರ್ಯಾಚರಣೆಯ ಮೇಲ್ವಿಚಾರಣೆ ಕೈಗೊಂಡು, ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಲಕಾಲಕ್ಕೆ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಹಳ್ಳದ ಮಧ್ಯ ಸಿಲುಕಿಕೊಂಡಿರುವ ಯುವಕ....

ಹುಬ್ಬಳ್ಳಿ:- ಹೊಲಕ್ಕೆ ಹೋದ ಸಂದರ್ಭದಲ್ಲಿ ಯುವಕನೊರ್ವ ಹಳದಲ್ಲಿ ಸಿಲುಕಿಕೊಂಡು ಸಾವು ಬದುಕಿ ಮಧ್ಯೆ ಹೋರಾಟ ಮಾಡುತ್ತಿರುವ ಘಟನೆ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.ಹನಸಿ ಗ್ರಾಮದ ನಿವಾಸಿ ಬಸವರಾಜ ನ್ನೇ ಹಳ್ಳದಲ್ಲಿ ಸಿಲುಕಿಕೊಂಡ ವ್ಯಕ್ತಿಯಾಗಿದ್ದು, ಮೊದಲೇ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶಿರಕೋಳ ಮತ್ತು ಹನಸಿ ಗ್ರಾಮದ ತುಪ್ಪದ ಹಳ್ಳವು ತುಂಬಿ ರಭಸದಿಂದ ಹರಿಯುತ್ತಿದ್ದು, ಈ ಸಂದರ್ಭದಲ್ಲಿ ಹೊಲಕ್ಕೆ ಹೋದಾಗ ಅಚಾನಕ ಆಗಿ ಕಳ್ಳದಲ್ಲಿ ಸಿಲುಕಿಕೊಂಡಿದ್ದಾನೆ. ಪರಿಣಾಮ ಸಾವು ಬದುಕಿನ ಮಧ್ಯೆ ಹೋರಾಟ ಮಾಡುವಂತಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಆದರೂ ನೀರಿನ ರಬ್ಬಸಕ್ಕೆ ಬಸವರಾಜನ್ನ ರಕ್ಷಣೆಗೆ ಹರಸಾಹಸ ಪಡುವಂತಾಯಿತು....

________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ಕುಂದಗೊಳ
Last Updated : Aug 6, 2019, 11:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.