ಹುಬ್ಬಳ್ಳಿ: ಅವರೆಲ್ಲ ಜೀವದ ಹಂಗು ತೊರೆದು ಕೋವಿಡ್-19 ರೋಗಿಗಳ ಚಿಕಿತ್ಸೆ ಮತ್ತು ಆರೈಕೆ ಮಾಡಿದ ಸಿಬ್ಬಂದಿ. ಆದರೆ ಈ ಸಿಬ್ಬಂದಿಗೆ ಸರ್ಕಾರ ನೀಡಿದ ಭರವಸೆ ಮಾತ್ರ ಈಡೇರಿಲ್ಲ. ಕೊರೊನಾ ವೈರಸ್ ವಿರುದ್ಧ ಶತಾಯ ಗತಾಯ ಹೋರಾಟ ನಡೆಸಿದ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ, ಅರೆ ವೈದ್ಯಕೀಯ, ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಸರ್ಕಾರ ಘೋಷಿಸಿದ್ದ 5 ಸಾವಿರ ಕೋವಿಡ್ ಭತ್ಯೆ ಇನ್ನೂ ಸಿಕ್ಕಿಲ್ಲ.
ಹೌದು.. ಕೆಇಎಯಿಂದ (ವೈದ್ಯಕೀಯ ಇಲಾಖೆ) ನೇಮಕವಾದ 149 ನರ್ಸಿಂಗ್ ಅಧಿಕಾರಿಗಳು, ಕಿಮ್ಸ್‌ನಿಂದ ನೇರವಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದ 79 ಸಿಬ್ಬಂದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 39, ಕ್ಯಾಟ್‌ಲಾಬ್‌ನ 20 ಹಾಗೂ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ (ಪಿಎಂಎಸ್‌ಎಸ್‌ವೈ) ನೇಮಕವಾಗಿದ್ದ 82 ಮಂದಿ ಸೇರಿದಂತೆ ಒಟ್ಟು 375 ಮಂದಿ ಕೋವಿಡ್ ಕರ್ತವ್ಯ ನಿರ್ವಹಿಸಿದ್ದರು, ಆದರೂ ಸರ್ಕಾರದಿಂದ ಬರಬೇಕಾದ ಭತ್ಯೆ ಮಾತ್ರ ಕೈ ಸೇರಿಲ್ಲ.
ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಸರ್ಕಾರ ಕಳೆದ ಜುಲೈನಲ್ಲಿ ಕೋವಿಡ್ ಭತ್ಯೆ ಘೋಷಿಸಿತ್ತು. ತಿಂಗಳಿಗೆ 5 ಸಾವಿರದಂತೆ ಆರು ತಿಂಗಳವರೆಗೆ ಭತ್ಯೆ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿತ್ತು. ಆದರೆ, ಕಿಮ್ಸ್‌ನಲ್ಲಿ 375 ಮಂದಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ.
ಓದಿ : ಭಾರತೀಯ ಜನಸಂಖ್ಯೆಯ ಶೇ 1 ಕ್ಕಿಂತಲೂ ಕಡಿಮೆ ಜನರಿಗೆ ಲಸಿಕೆ: ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಕಳವಳ
ಪಿಪಿಇ ಕಿಟ್ ಧರಿಸಿ ಕರ್ತವ್ಯದ ಅವಧಿ ಮುಗಿಯುವವರೆಗೆ ತೆಗೆದಿಲ್ಲ. ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿಗೆ ಸರ್ಕಾರ ನೀಡುವ ಭತ್ಯ ಮಾತ್ರ ಸಿಗದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ.