ETV Bharat / state

ಇಲ್ನೋಡಿ, ಕೊರೊನಾ ವಿರುದ್ಧ 89ರ ವೃದ್ಧನ ದಿಗ್ವಿಜಯ.. ಸೋಂಕಿತರಾದ್ರೇ ಧೃತಿಗೆಡಬೇಡಿ.. - Mysore District Kovid Hospital Doctors

ಕೋವಿಡ್ ರೋಗಿ ಜೊತೆ ಕೇರ್ ಟೇಕರ್ ಆಗಿ ಇರಲು ಬಹುತೇಕರು ಒಪ್ಪಲ್ಲ. ಆದರೆ, ನಾಗರಾಜ್ ಅವರ ಮಗ 53 ವರ್ಷದ ವೆಂಕಟೇಶ್ ಮೂರ್ತಿ ಅವರು ತಂದೆಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು ಧೈರ್ಯ ತುಂಬಿದ್ದರು..

The 89-year-old flute player who escaped from Corona
ಕೊರೊನಾದಿಂದ ಪಾರಾಗಿ ದಿಗ್ವಿಜಯ ಸಾಧಿಸಿದ 89 ವರ್ಷದ ಕೊಳಲು ವಾದಕ
author img

By

Published : Sep 23, 2020, 5:07 PM IST

ಮೈಸೂರು : ಕೊರೊನಾ ಸೋಂಕಿಗೀಡಾಗಿದ್ದ 89 ವರ್ಷದ ವೃದ್ಧನನ್ನು ವೈದ್ಯರು ಗುಣಪಡಿಸಿದ್ದಾರೆ. ಈ ಮೂಲಕ ಯಾವುದೇ ವಯಸ್ಸಿನವರಿದ್ರೂ ಕೊರೊನಾ ವಿರುದ್ಧ ಜಯಗಳಿಸಬಹುದು ಎಂಬುದನ್ನು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕೊರೊನಾದಿಂದ ಗುಣಮುಖರಾದ 89ರ ಹರೆಯದ ಕೊಳಲು ವಾದಕ

ಹುಣಸೂರು ತಾಲೂಕು ಚಿಲ್ಕುಂದ ಗ್ರಾಮದ ಸಿ ಎಸ್ ನಾಗರಾಜು ಎಂಬ ವೃದ್ಧ ಗುಣಮುಖರಾದವರು. ವೃತ್ತಿಯಿಂದ ಕೃಷಿಕನಾಗಿ ಪ್ರವೃತ್ತಿಯಿಂದ ಕೊಳವಾದನ ಕಲಾವಿದರಾಗಿರುವ ನಾಗರಾಜು ಅವರು 1990ರ ದಶಕದವರೆಗೆ‌ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಆದರೆ, ಸೆಪ್ಟೆಂಬರ್ ಮೊದಲ ವಾರ ಇವರಿಗೆ ಜ್ವರ ಕಾಣಿಸಿತ್ತು. ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ್ರೂ ಗುಣವಾಗಿರಲಿಲ್ಲ. ಜ್ವರ ತೀವ್ರಗೊಂಡು ಮಾತನಾಡದ ಸ್ಥಿತಿಗೆ ಬಂದಾಗ ಇವರನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದ ಕೂಡಲೇ ಅಲ್ಲಿಂದ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.

ಸೆ.10ರಂದು ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭ ಅವರಿಗೆ ಪಾರ್ಕಿನ್ಸನ್ ಕಾಯಿಲೆ‌ ಇತ್ತು. ಜೊತೆಗೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲೂ ವೈದ್ಯರು, ನರ್ಸ್​ಗಳು, ಸಿಬ್ಬಂದಿ ಎಲ್ಲರೂ ಇವರನ್ನು ಅತ್ಯಂತ ಕಾಳಜಿಯಿಂದ ನೋಡಿದ್ದಾರೆ. ಕೋವಿಡ್ ರೋಗಿ ಜೊತೆ ಕೇರ್ ಟೇಕರ್ ಆಗಿ ಇರಲು ಬಹುತೇಕರು ಒಪ್ಪಲ್ಲ. ಆದರೆ, ನಾಗರಾಜ್ ಅವರ ಮಗ 53 ವರ್ಷದ ವೆಂಕಟೇಶ್ ಮೂರ್ತಿ ಅವರು ತಂದೆಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು ಧೈರ್ಯ ತುಂಬಿದ್ದರು.

ಇವರು ಗುಣವಾಗಿ ಸೆಪ್ಟೆಂಬರ್ 22ರಂದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಆಸ್ಪತ್ರೆಯಲ್ಲಿ ಎಲ್ಲರೂ ಸಂಭ್ರಮಿಸಿದ್ದಾರೆ. ಮನೆಗೆ ಬಂದ‌‌ ಮರುದಿನ ಅಂದರೆ ಸೆಪ್ಟೆಂಬರ್ 23ರಂದು ಅವರು ಸ್ವತಂತ್ರವಾಗಿ ಶೌಚಾಲಯಕ್ಕೆ ಹೋಗಿ ಬಂದಿದ್ದನ್ನು ನೋಡಿ ಅವರ ಕುಟುಂಬದವರೆಲ್ಲ ಸಂತೋಷಪಟ್ಟಿದ್ದಾರೆ ಎಂದು ಅವರ ಮಗ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ. ಕೋವಿಡ್ ಬಂದ ಕೂಡಲೇ ಧೃತಿಗೆಡದೆ ವೈದ್ಯರ ಮಾರ್ಗದರ್ಶನ ಹಾಗೂ ಚಿಕಿತ್ಸೆ ಪಡೆದು ಗುಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.