ಹುಬ್ಬಳ್ಳಿ : ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಗಾಂಧೀಜಿ ಒಬ್ಬರೇ ಅಲ್ಲ. ಅವರೊಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರ ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ. ಆದರೆ ಕೆಲವು ಇತಿಹಾಸಕಾರರು ಸತ್ಯವನ್ನು ಹೇಳಲೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವರಾಜ್ 75 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014 ಬರಬೇಕಾಯಿತು. ವಾಮ ಪಂಥೀಯರಿಂದಲೇ ಈ ದೇಶ ಹಾಳಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಕೊಡುಗೆ ನೆನಪಿಸದಿದ್ದರೆ ನರಕಕ್ಕೆ ಹೋಗ್ತೀರಾ ಎಂದರು.
ಭಾರತ್ ಮಾತಾಕಿ, ವಂದೇ ಮಾತರಂ ಘೋಷಣೆ ಹಾಕಿದರೆ ಆರ್ಎಸ್ಎಸ್ನವರು ಇದ್ದಾರೆ, ಸಭೆ ಮಾಡುತ್ತಿದ್ದಾರೆ ಅಂತಾರೆ. ಇದೊಂದು ವಿಕೃತಿ. ಆರ್ಎಸ್ಎಸ್, ಎಬಿವಿಪಿ ಘೋಷಣೆಗಳ ಪೆಟೆಂಟ್ ತಗೊಂಡಿಲ್ಲ. ಗಾಂಧೀಜಿ ಹೋರಾಟದ ಬಗ್ಗೆ ನಮಗೆ ಶ್ರದ್ಧೆ ಇದೆ, ಅದರೆ ಉಳಿದವರನ್ನೂ ನಾವು ನೆನಪಿಟ್ಟುಕೊಳ್ಳಬೇಕು. ಎಡಪಂಥೀಯರಿಂದ ಈ ದೇಶಕ್ಕೆ ಆಗಿರುವ ಅನ್ಯಾಯ ಬೇರೆ ಯಾವ ದೇಶಕ್ಕೂ ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ: ನನ್ನ ಜಾತಿ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದ ಪ್ರಧಾನಿ ಮೋದಿ