ETV Bharat / state

ಅಯೋರ್ಟಿಕ್ ಅನ್ಯೂರಿಸಮನ್ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಸುಚಿರಾಯು ಆಸ್ಪತ್ರೆ ವೈದ್ಯರ ಸಾಧನೆ! - ಉದರದ ಅಯೋರ್ಟಿಕ್ ಅನ್ಯೂರಿಸಮನ್ ಕಾಯಿಲೆ

ವಿಪರೀತ ಹೊಟ್ಟೆನೋವಿನಿಂದ ಅಯೋರ್ಟಿಕ್‌ ಅನ್ಯೂರಿಸಮ್ ಕಾಯಿಲೆಗೆ ತುತ್ತಾಗಿದ್ದ ಅಧ್ಯಾಪಕರೊಬ್ಬರಿಗೆ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಅವರನ್ನು ಗುಣಮುಖರನ್ನಾಗಿ ಮಾಡಿದ್ದಾರೆ.

suchiraya hospital
ಡಾ. ಷಣ್ಮುಖ ಹೀರೆಮಠ ಸುದ್ದಿಗೋಷ್ಟಿ
author img

By

Published : Apr 9, 2021, 2:46 PM IST

ಹುಬ್ಬಳ್ಳಿ: ಉದರದ ಅಯೋರ್ಟಿಕ್ ಅನ್ಯೂರಿಸಮನ್ ಕಾಯಿಲೆಯಿಂದ ಬಳಲುತ್ತಿದ್ದ ಅಧ್ಯಾಪಕರೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡಲಾಗಿದೆ ಎಂದು ಡಾ. ಷಣ್ಮುಖ ಹೀರೆಮಠ ಹೇಳಿದರು.

ಡಾ. ಷಣ್ಮುಖ ಹೀರೆಮಠ ಸುದ್ದಿಗೋಷ್ಠಿ

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 52 ವರ್ಷದ ಶಾಲಾ ಅಧ್ಯಾಪಕರೊಬ್ಬರು ವಿಪರೀತ ಹೊಟ್ಟೆ ನೋವಿನಿಂದ ಬಳಲಿ, ಅನೇಕ ವೈದ್ಯರ ಬಳಿ ಪರಿಹಾರ ಕೇಳಿ, ಕೊನೆಗೆ ಸುಚಿರಾಯು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿದಾಗ ಅಯೋರ್ಟಿಕ್‌ ಅನ್ಯೂರಿಸಮ್ ಕಾಯಿಲೆ ಇರುವುದು ಗೊತ್ತಾಗಿದೆ. ಈ ಕಾಯಿಲೆ ಮುಖ್ಯ ಲಕ್ಷಣ ಎಂದರೆ ಉದರಲ್ಲಿರುವ ರಕ್ತನಾಳ ಉಬ್ಬಿ ಸ್ಪೋಟಗೊಂಡು ವಿಪರೀತ ರಕ್ತಸ್ರಾವವಾಗುವುದು. ಅನ್ಯೂರಿಸಮ್ 6cm ಗಾತ್ರವಾಗಿದ್ದು,15 cm ರಕ್ತಸ್ರಾವವಾಗುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗೆ ಮೂತ್ರಪಿಂಡ ವೈಫಲ್ಯದಿಂದ ಮೂತ್ರವೇ ಸ್ಥಗಿತವಾಗಿತ್ತು. ರಕ್ತ ಸಂಚಾರವಿಲ್ಲದಿದ್ದರೆ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ಆದ್ದರಿಂದ ವೈದ್ಯ ತಂಡ ಈ ಖಾಯಿಲೆಯನ್ನು ಚಾಲೆಂಜ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿ ಖಾಯಿಲೆ ಗುಣಪಡಿಸಿರುವುದಾಗಿ ಹೇಳಿದರು. ಇನ್ನೂ ಈ ಶಸ್ತ್ರಚಿಕಿತ್ಸೆ ಮಾಡಲು 8 ಗಂಟೆ ತಗುಲಿದೆ ಹಾಗೂ 24 ದಿನ ಆಸ್ಪತ್ರೆಯಲ್ಲಿ, ಮತ್ತು ಒಂದು ವಾರ ರೋಗಿಯನ್ನು ICU ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ರೋಗಿಯು ಇವಾಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದರು.

suchiraya hospital
ಅಯೋರ್ಟಿಕ್‌ ಅನ್ಯೂರಿಸಮ್ ಕಾಯಿಲೆ
suchiraya hospital
ರಕ್ತ ಸಂಚಾರವಿಲ್ಲದಿದ್ದರೆ ಕಿಡ್ನಿ ವೈಫಲ್ಯ ಉಂಟಾಗುತ್ತದೆ

ಕೆಲವರಿಗೆ ಈ ಕಾಯಿಲೆ ಬಗ್ಗೆ ಗೊತ್ತಿಲ್ಲದೇ ಸಾವನ್ನಪ್ಪುತ್ತಾರೆ. ಹೀಗಾಗಿ ಈ ಕಾಯಿಲೆ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ಬಂದು ವೈದ್ಯರ ಸಲಹೆ ಪಡೆದು ಅಕಾಲಿಕ ಸಾವಿನಿಂದ ಪಾರಾಗಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ಶರಣು ಹಳ್ಳದ,ಶ್ರಿಶೈಲ್ ಚಿನಿವಾಲರ್,ಚೇತನ ಮುದುರಬೆಟ್ಟ, ಇನ್ನಿತರರು ಇದ್ದರು.

suchiraya hospital
ಅಯೋರ್ಟಿಕ್ ಅನ್ಯೂರಿಸಮನ್
suchiraya hospital
ಅಯೋರ್ಟಿಕ್ ಅನ್ಯೂರಿಸಮನ್ ರೋಗಿಗೆ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.