ಧಾರವಾಡ: 52 ಶಕ್ತಿ ಪೀಠಗಳಿಗೆ ಉಡಿ ತುಂಬಿದರೆ ಕೊರೊನಾ ವೈರಸ್ ಮಾಯವಾಗುತ್ತದೆ ಎಂದು ಶ್ರೀ ಮೈಲಾರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಆದಿಶಕ್ತಿ ಎಣ್ಣಿ ಹೊಳೆಮ್ಮದೇವಿ ಮಂದಿರದಲ್ಲಿ ಭವಿಷ್ಯ ನುಡಿದಿರುವ ಇವರು, ಕಡು ಬಡತನದ ಓರ್ವ ಪುತ್ರ-ಪುತ್ರಿಯಿಂದ ದೇಶದಲ್ಲಿರುವ 52 ಶಕ್ತಿ ಪೀಠಗಳಿಗೆ ಸರ್ಕಾರವೇ ಮುಂದೆ ನಿಂತು ಉಡಿ ತುಂಬಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೇ ಉಡಿ ತುಂಬಿದ ಮೂರೇ ದಿನಕ್ಕೆ ಕೊರೊನಾ ವೈರಸ್ ನಿರ್ಮೂಲನೆಯಾಗುತ್ತದೆ. ಇದು ಕಲಿಯುಗದ ಅಂತ್ಯವಲ್ಲ. ಅಂತ್ಯ ಎಂದು ನಾವು ಭಾವಿಸಿ, ಮೂಢನಂಬಿಕೆಗಳಿಂದ ಮೋಸ ಹೋಗಬಾರದು. ನಮ್ಮ ದೇಶದ ಆಚಾರ-ವಿಚಾರ ಕೈ ಬಿಟ್ಟಿದ್ದೇವೆ. ಅದಕ್ಕಾಗಿ ಇಂತಹ ಖಾಯಿಲೆಗಳನ್ನು ಅನುಭವಿಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಸೂಚನೆ: ಇದು ಸ್ವಾಮೀಜಿಯ ವೈಯಕ್ತಿಕ ವಿಚಾರ ಮತ್ತು ನಂಬಿಕೆಯಾಗಿದೆ. ಇದರಲ್ಲಿ ಯಾವುದೇ ವೈಜ್ಞಾನಿಕ ಅಂಶಗಳು ಇಲ್ಲದಿರುವುದು ಕಂಡುಬರುತ್ತದೆ. ಹಾಗಾಗಿ ಇದನ್ನು ಅನುಸರಿಸುವುದು ಅಥವಾ ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ.