ETV Bharat / state

ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಕೆಲವರು ದುರ್ಬಳಕೆ ಮಾಡಿದ್ದಾರೆ: ಸಚಿವೆ ಶೋಭಾ ಕರಂದ್ಲಾಜೆ

author img

By

Published : Jun 19, 2022, 3:30 PM IST

Updated : Jun 19, 2022, 7:00 PM IST

ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಊಟಿ ಮತ್ತು ಚೆನ್ನೈನಲ್ಲಿ ಕೆಲವರು ದುರ್ಬಳಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಊಟಿ ಮತ್ತು ಚೆನೈನಲ್ಲಿ ಕೆಲವರು ದುರ್ಬಳಕೆ ಮಾಡಿದ್ದಾರೆ: ಕರಂದ್ಲಾಜೆ

ಧಾರವಾಡ: ಊಟಿ ಮತ್ತು ಚೆನೈನಲ್ಲಿ ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಕೆಲವರು ದುರ್ಬಳಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಯಾರೋ ವ್ಯಕ್ತಿ ಕರೆ ಮಾಡಿ ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗಿ ಹೇಳಿದ್ದಾರೆ.

ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಊಟಿ ಮತ್ತು ಚೆನ್ನೈನಲ್ಲಿ ಕೆಲವರು ದುರ್ಬಳಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ

ಈ ಸಂಬಂಧ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ತಕ್ಷಣ ಅದನ್ನು ಸಿಸಿಬಿಗೆ ವರ್ಗಾಯಿಸಿ ಯಾರು ಊಟಿ ಮತ್ತು ಚೆನ್ನೈನಲ್ಲಿ ಹೆಸರು ದುರ್ಬಳಕೆ ಮಾಡುತ್ತಿದ್ದಾರೋ ಅವರನ್ನು ಬಂಧಿಸಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ಮಾಡಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವೆ ಕರಂದ್ಲಾಜೆ ತಿಳಿಸಿದರು.

ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಎರಡ್ಮೂರು ರಾಜ್ಯಕ್ಕೆ ಮಾತ್ರ ಕಾಂಗ್ರೆಸ್ ಸೀಮಿತವಾಗಿದೆ. ಅದಕ್ಕಾಗಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನೋ ಸುದ್ದಿ ಬರುತ್ತಿದೆ ಎಂದರು. ಕಾಶ್ಮೀರ ಗಲಭೆ ಇರಬಹುದು, ಪಾಕ್‌ಗೆ ಹೋಗಿ ಕೈ ನಾಯಕರು ಹೇಳಿಕೆ ನೀಡಿರೋದು ಇರಬಹುದು, ಚೀನಾಕ್ಕೆ ಹೋಗಿ ಅಲ್ಲಿನ ಮುಖಂಡರ ಜೊತೆಗಿನ ಮಾತುಕತೆ ನಡೆಸಿರುವುದು, ಇಲ್ಲಿರುವ ದೇಶ ವಿರೋಧಿ ಸಂಘಟನೆಗಳ ಜೊತೆಗೂ ಕಾಂಗ್ರೆಸ್​ನವರ ಸಂಪರ್ಕ ಇದೆ. ಬಿಜೆಪಿ ಸರ್ಕಾರ ಮಣಿಸುವುದಕ್ಕಾಗಿಯೇ ಇದೆಲ್ಲ ಮಾಡುತ್ತಿದ್ದಾರೆ. ಸಮಾಜ ದ್ರೋಹಿಗಳ‌ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇಶಾದ್ಯಂತ ಈಗ ಗಲಭೆ ನಡೆಯುತ್ತಿದ್ದು, ಇದೆಲ್ಲದರ ಹಿಂದೆ ಷಡ್ಯಂತ್ರ ಇದೆ. ಸಾರ್ವಜನಿಕ ಆಸ್ತಿ ಹಾಳು ಮಾಡಲು ಯಾರಿಗೂ ಅಧಿಕಾರ ಇಲ್ಲ. ಪ್ರತಿಪಕ್ಷಗಳು ತಮ್ಮ ಪಕ್ಷದ ಕೆಲಸ ಮಾಡಲು ಅವಕಾಶವಿದೆ.‌ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ಕಾನೂನು ಕೈಗೆ ತಗೊಂಡ್ರೆ ಅದೇ ಕಾನೂನು ದಂಡಿಸುತ್ತೆ ಎಂದು ಎಚ್ಚರಿಸಿದರು. ಗಲಭೆಗಳ ಹಿಂದೆ ಬಿಜೆಪಿ ಕೈವಾಡ ಎಂಬ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಆ ಆರೋಪಕ್ಕೆ ಉತ್ತರಿಸೋ ಅಗತ್ಯವಿಲ್ಲ. ಅಸ್ತಿತ್ವ ಕಳೆದುಕೊಂಡ ಪಕ್ಷಗಳು ಈ ಆರೋಪ ಮಾಡುತ್ತಿವೆ ಎಂದು ಟೀಕಿಸಿದರು.

ಓದಿ : ಪಠ್ಯ ಪರಿಷ್ಕರಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ, ಬದಲಾವಣೆಗೆ ಮುಕ್ತವಾಗಿದ್ದೇವೆ: ಸಿಎಂ

Last Updated : Jun 19, 2022, 7:00 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.