ETV Bharat / state

ಸಿದ್ಧರಾಮೇಶ್ವರ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ: ಬೋವಿ ಸಮಾಜದ ಪ್ರತಿಭಟನೆ - Sri Sadguru siddarameshwara

ಜನವರಿ 14 ರಂದು ಸದ್ಗುರು ಸಿದ್ಧರಾಮೇಶ್ವರ ಜಯಂತಿ ಹಿನ್ನಲೆಯಲ್ಲಿ ತಹಶೀಲ್ದಾರರ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಅಲ್ಲಿ ಸಿದ್ಧರಾಮೇಶ್ವರ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ವಡ್ಡರ, ಬೋವಿ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Siddarameshwara Community Avoided in Hubli
ಸಿದ್ಧರಾಮೇಶ್ವರ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ: ಬೋವಿ ಸಮಾಜದಿಂದ ಪ್ರತಿಭಟನೆ
author img

By

Published : Jan 9, 2020, 6:18 PM IST

ಹುಬ್ಬಳ್ಳಿ: ಜನವರಿ 14 ರಂದು ಸದ್ಗುರು ಸಿದ್ಧರಾಮೇಶ್ವರ ಜಯಂತಿ ಹಿನ್ನೆಲೆಯಲ್ಲಿ ತಹಶೀಲ್ದಾರರ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಅಲ್ಲಿ ಬೋವಿ ಸಮಾಜ ಅಂದರೆ ಸಿದ್ಧರಾಮೇಶ್ವರ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ವಡ್ಡರ, ಬೋವಿ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಡ್ಡರ, ಬೋವಿ ಸಮಾಜದ ಜನರು ಶ್ರೀ ಸದ್ಗುರು ಸಿದ್ಧರಾಮೇಶ್ವರರ ಅನುಯಾಯಿಗಳಾಗಿದ್ದು, ಈ ಹಿನ್ನಲೆಯಲ್ಲಿ ಅನೇಕ ಮಂದಿ ಶ್ರೀ ಸಿದ್ದರಾಮೇಶ್ವರ ಜಯಂತಿ ಪೂರ್ವಭಾವಿ ಸಭೆಗೆ ಹಾಜರಾಗಿದ್ದೆವು. ಆದರೆ ಅಧಿಕಾರಿಗಳು ಸಭೆಯನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟಸಿದರು.

ಸಿದ್ಧರಾಮೇಶ್ವರ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ: ಬೋವಿ ಸಮಾಜದಿಂದ ಪ್ರತಿಭಟನೆ

ಜಯಂತಿ ಆಚರಣೆಗೆ ಹದಿನೈದು ದಿನಗಳ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆಯಬೇಕೆಂದು ತಿಳಿಸಲಾಗಿದ್ದರೂ ಇಂದು ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ತಹಶೀಲ್ದಾರರನ್ನು ಹೊರತು ಪಡಿಸಿ ಯಾವೊಬ್ಬ ಇಲಾಖಾಧಿಕಾರಿಗಳು ಆಗಮಿಸಿರಲಿಲ್ಲ. ಇದರಿಂದಾಗಿ ಸಿದ್ದರಾಮೇಶ್ವರರನ್ನು ಹಾಗೂ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಮನೋಭಾವವನ್ನು ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದು ಈ ಹಿನ್ನಲೆಯಲ್ಲಿ ಸಭೆಯನ್ನು ಬಹಿಷ್ಕಾರ ಮಾಡಿ ಹೋರಾಟ ಮಾಡಲಾಗುತ್ತಿದೆ. ಮುಂದೆಯೂ ಕೂಡಾ ಇದೇ ಪ್ರವೃತ್ತಿ ಮುಂದುವರೆದರೆ ಜಯಂತಿ ದಿನದಂದೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Intro:HubliBody:ಸಿದ್ದರಾಮೇಶ್ವರ ಸಮೂದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಸಮಾಜದಿಂದ ಪ್ರತಿಭಟನೆ

ಹುಬ್ಬಳ್ಳಿ:- ಜ.14 ರಂದು ಸದ್ಗುರು ಸಿದ್ದರಾಮೇಶ್ವರ ಜಯಂತಿ ಹಿನ್ನಲೆಯಲ್ಲಿ ತಹಶಿಲ್ದಾರರ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ವಡ್ಡರ, ಬೋವಿ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕಾರ ಮಾಡಿ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಡ್ಡರ, ಬೋವಿ ಸಮಾಜದ ಜನರು ಶ್ರೀ ಸದ್ಗುರು ಸಿದ್ದರಾಮೇಶ್ವರರ ಅನುಯಾಯಿಗಳಾಗಿದ್ದು, ಈ ಹಿನ್ನಲೆಯಲ್ಲಿ ಸಮಾಜದ ಜನರು ಬಹಳ ಸಂಖ್ಯೆಯಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಪೂರ್ವಭಾವಿ ಸಭೆಗೆ ಹಾಜರಾಗಿದ್ದೇವು. ಆದರೆ ದುರ್ದೈವ ಸರ್ಕಾರದ ಅಧಿಕಾರಿಗಳು ಸಭೆಯನ್ನು ಕಾಟಾಚಾರಕ್ಕೆ ಮಾಡಿದಂತೆ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನೂ ಸಿದ್ದರಾಮೇಶ್ವರ ಜಯಂತಿಯನ್ನು ಅದ್ದೂರಿ ಯಾಗಿ ಆಚರಿಸುವ ಹಿನ್ನಲೆಯಲ್ಲಿ ಈ ಹಿಂದೆಯೇ ಸಭೆಯನ್ನು ನಡೆಸಿದಾಗ ಅಧಿಕಾರಿಗಳಿಗೆ ಪೂರ್ವಭಾವಿ ಸಭೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಮುಖಂಡರು ಭಾಗವಹಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಅಲ್ಲದೇ ಜಯಂತಿ ದಿನದ ಹದಿನೈದು ದಿನಗಳ ಮುಂಚೆಯೇ ಪೂರ್ವಭಾವಿ ಸಭೆ ಕರೆಯಬೇಕೆಂದು ತಿಳಿಸಲಾಯಿತು. ಆದರೂ ಸಹಿತ ಇಂದು ನಡೆದ ಸಭೆಯಲ್ಲಿ ತಹಶಿಲ್ದಾರ ಅವರನ್ನು ಬಿಟ್ಟರೇ ಯಾವೊಬ್ಬ ಇಲಾಖಾ ಅಧಿಕಾರಿಗಳು ಇರಲಿಲ್ಲ. ಇದರಿಂದಾಗಿ ಬಸವಣ್ಣನವರಷ್ಟೇ ಶ್ರೇಷ್ಠತೆಯನ್ನು ಹೊಂದಿರುವ ಸಿದ್ದರಾಮೇಶ್ವರ ಅವರನ್ನು ಹಾಗೂ ಸಮಾಜವನ್ನು ನಿರ್ಲಕ್ಷ್ಯ ಮಾಡಿದರ ಜೊತೆಗೆ ಅವಮಾನಿಸಲಾಗಿದೆ. ಇದನ್ನು ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದು ಈ ಹಿನ್ನಲೆಯಲ್ಲಿ ಸಭೆಯನ್ನು ಬಹಿಷ್ಕಾರ ಮಾಡಿ ಹೋರಾಟ ಮಾಡಲಾಗುತ್ತಿದೆ. ಮುಂದೆಯೂ ಕೂಡಾ ಇದೆ ಮುಂದುವರೆದರೇ ಜಯಂತಿ ದಿನದಂದೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ತಹಶಿಲ್ದಾರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಬೈಟ್:-ಲಕ್ಷ್ಮಣ್ ಬಿಳಗಿ.ಸಿದ್ದರಾಮಯ್ಯಶ್ವರ ಸಮುದಾಯದ ಮುಖಂಡ
Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.