ಧಾರವಾಡ: ಸಿದ್ದರಾಮಯ್ಯ ಕೇವಲ ರಾಜಕೀಯ ಲಾಭಕ್ಕೋಸ್ಕರ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕೆಲಸದ ಬಗ್ಗೆಯೂ ಅವರು ಹೇಳಬೇಕಾಗುತ್ತದೆ. ಟೀಕೆ ಮಾಡುವುದೇ ಆದ್ರೆ ಸಿದ್ದರಾಮಯ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ಟೀಕಿಸುತ್ತಲೇ ಇರುತ್ತಾರೆ. ನೀವು ಕೇವಲ ರಾಜಕಾರಣ ಮಾಡುತ್ತೀದ್ದೀರಿ ಅಷ್ಟೇ ಎಂದು ಸಿದ್ದರಾಮಯ್ಯ ಅವರಿಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.
ಕೇಂದ್ರದ ಪರಿಹಾರವನ್ನು ದೂಪಕ್ಕೆ ಹೋಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು ಪರಿಹಾರ ಧನ ವಿತರಣೆ ಬಗ್ಗೆ ಚರ್ಚಿಸಿದ್ದಾರೆ. ಎನ್.ಡಿ.ಆರ್.ಎಫ್ ರೂಲ್ಸ್ಗಿಂತ ಡಬಲ್ ಪರಿಹಾರ ಕೊಡೋ ಬಗ್ಗೆ ಘೋಷಿಸಿದ್ದಾರೆ. ಸಂಪೂರ್ಣ ಮನೆ ಹಾನಿಗೊಳಗಾದವರಿಗೆ 45 ಸಾವಿರ ರೂ ಮನೆ ಕಟ್ಟಲು ಹಣ ಕೊಡುವ ಕೆಲಸವಾಗುತ್ತಿದೆ ಎಂದರು.
ಮಾಧ್ಯಮ ಹೊರಗಿಟ್ಟು ಅಧಿವೇಶನ ಮಾಡಿದ ವಿಚಾರಕ್ಕೆ ಸ್ಪೀಕರ್ ಕಾಗೇರಿ ಪರ ಶೆಟ್ಟರ್ ಬ್ಯಾಟ್ ಬೀಸಿದ್ರು. ಲೋಕಸಭೆ, ರಾಜ್ಯಸಭೆಯಲ್ಲಿ ಈ ರೀತಿಯ ವ್ಯವಸ್ಥೆ ಇದೆ. ಪ್ರಾಯೋಗಿಕವಾಗಿ ಇಲ್ಲಿ ಇದನ್ನು ಜಾರಿಗೆ ಮಾಡಲಾಗಿದೆ ಎಂದು ಹೇಳಿದ್ರು.