ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಜೋಧ್ಪುರಕ್ಕೆ ಮೊದಲ ಶ್ರಮಿಕ್ ಎಕ್ಸ್ಪ್ರೆಸ್ ರೈಲು ಪ್ರಯಾಣ ಬೆಳೆಸಿತು.
ಧಾರವಾಡ ಜಿಲ್ಲೆಯಿಂದ 1,452 ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳನ್ನು ಹೊತ್ತು ಅವರ ತವರೂರಿನತ್ತ ಪ್ರಯಾಣ ಬೆಳೆಸಿದ ರೈಲಿಗೆ ಅಧಿಕಾರಿಗಳು ಹಾಗೂ ಸಂಬಂಧಿಗಳು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಹುಬ್ಬಳ್ಳಿಯನ್ನು ಬಿಟ್ಟಿದ್ದು ನಾಳೆ ಮಧ್ಯಾಹ್ನ 2.30ಕ್ಕೆ ಜೋಧಪುರ ತಲುಪಲಿದೆ. ಮೀರಜ್, ಪುಣೆ, ವಾಸಾಯಿ ರೋಡ, ವಡೋದರಾ, ಪಾಲಂಪುರ ಮಾರ್ಗ ಮೂಲಕ ಸಂಚಾರ ಮಾಡಲಿದೆ.
ಹುಬ್ಬಳ್ಳಿಯಿಂದ ಜೋಧ್ಪುರಕ್ಕೆ ಶ್ರಮಿಕ್ ರೈಲು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಲು ಜಿಲ್ಲಾಡಳಿತದ ಬಳಿ 1,452 ಜನ ಹೆಸರು ನೋಂದಾಯಿಸಿದ್ದರು. ಬೆಳಗ್ಗೆ 6 ಗಂಟೆಯಿಂದ ಎಲ್ಲ ಶ್ರಮಿಕ ವರ್ಗದವರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿತ್ತು. 24 ಬೋಗಿ ಹೊಂದಿರುವ ಶ್ರಮಿಕ ಎಕ್ಸ್ಪ್ರೆಸ್ ರೈಲಿನಲ್ಲಿ 18 ಬೋಗಿಗಳಲ್ಲಿ ತಲಾ 72 ಜನರು ಪ್ರಯಾಣ ಬೆಳೆಸಿದ್ರೆ, ಉಳಿದ 4 ಬೋಗಿಗಳಲ್ಲಿ ತಲಾ 38 ಜನರು ಹಾಗೂ ರೈಲ್ವೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಪ್ರಯಾಣಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುವವರಿಗಿಂತಲೂ ಅವರನ್ನು ಕಳುಹಿಸಲು ಹೆಚ್ವಿನ ಸಂಖ್ಯೆಯ ಜನರು ಆಗಮಿಸಿದ್ದರು. ರೈಲುನಿಲ್ದಾಣದಲ್ಲಿ ಸಾಮಾಜಿಕ ಅಂತ ಮರೆತು ಜನರು ಸೇರಿದ್ದು ಕಂಡು ಬಂತು.