ETV Bharat / state

ಸತ್ಯವನ್ನು ಮುಚ್ಚಿಡೋಕೆ ಸಾಧ್ಯವಿಲ್ಲ, ಅದನ್ನು ಕಾಂಗ್ರೆಸ್‌ನವರೇ ಸಾಬೀತುಪಡಿಸಿದ್ದಾರೆ : ಸಚಿವ ಮುನೇನಕೊಪ್ಪ

ನಾನು ಬೇರೆ ಪಕ್ಷದಿಂದ ಮಂತ್ರಿಯಾದವನು. ಹೀಗಾಗಿ, ನಾನು ಮಾತನಾಡುವುದು ಸೂಕ್ತವಲ್ಲ. ಅವರ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಏನು ನಡೆದಿದೆ ಅನ್ನೋದನ್ನು ಅವರ ಪಕ್ಷದವರೇ ಹೇಳಿದ್ದಾರೆ. ಜನ ಕೂಡ ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ..

shankara-patil-munenakoppa
ಸಚಿವ ಮುನೇನಕೊಪ್ಪ
author img

By

Published : Oct 13, 2021, 3:32 PM IST

ಧಾರವಾಡ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುರಿತು ಕೆಪಿಸಿಸಿ ಮಾಧ್ಯಮ‌ ಸಮನ್ವಯಕಾರ ಸಲೀಂ ಹೇಳಿಕೆ ವಿಚಾರವಾಗಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಕ್ರಿಯಿಸಿದ್ದಾರೆ. ಅವರು ಸತ್ಯವನ್ನೇ ಹೇಳಿದ್ದಾರೆ. ಸತ್ಯವನ್ನು ಮುಚ್ಚಿಡೋಕೆ ಸಾಧ್ಯವಿಲ್ಲ. ಅದನ್ನು ಕಾಂಗ್ರೆಸ್‌ನವರೇ ಸಾಬೀತುಪಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಉಗ್ರಪ್ಪ-ಸಲೀಂ ಸಂಭಾಷಣೆ ಕುರಿತಂತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿರುವುದು..

ಈ‌ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಅವರ ಪಕ್ಷದವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡಿಕೆಶಿ ಕಲೆಕ್ಷನ್ ಗಿರಾಕಿ ಅಂದಿರುವ ವಿಚಾರ ಈ ಬಗ್ಗೆ ಅವರ ಪಕ್ಷದವರೇ ಮಾತಾಡಿದ್ದಾರೆ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡೋದು ಸೂಕ್ತವಲ್ಲ‌ ಎಂದರು.

ನಾನು ಬೇರೆ ಪಕ್ಷದಿಂದ ಮಂತ್ರಿಯಾದವನು. ಹೀಗಾಗಿ, ನಾನು ಮಾತನಾಡುವುದು ಸೂಕ್ತವಲ್ಲ. ಅವರ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಏನು ನಡೆದಿದೆ ಅನ್ನೋದನ್ನು ಅವರ ಪಕ್ಷದವರೇ ಹೇಳಿದ್ದಾರೆ. ಜನ ಕೂಡ ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಓದಿ: ಕೆಪಿಸಿಸಿ ಮಾಧ್ಯಮ‌ ಸಮನ್ವಯಕಾರ ಸಲೀಂ ತಲೆದಂಡ; ಪ್ರಾಥಮಿಕ ಸದಸ್ಯತ್ವದಿಂದ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.