ಧಾರವಾಡ: ಕೋವಿಡ್ ಹೆಚ್ಚಳ ಹಿನ್ನೆಲೆ ಜಿಲ್ಲೆಯಲ್ಲಿ ನೀಡಲಾಗಿದ್ದ ಶಾಲೆಗಳಿಗೆ ರಜೆ ಆದೇಶವನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಿಂಪಡೆದಿದ್ದಾರೆ. ಶಾಲೆಗಳ ಪುನಾರಂಭಕ್ಕೆ ಮಾರ್ಪಾಡುಗೊಂಡ ಆದೇಶವನ್ನು ಡಿಸಿ ಇಂದು ಹೊರಡಿಸಿದ್ದಾರೆ.
ಕಳೆದ ಜನವರಿ 13ರಿಂದ 1ರಿಂದ 8ನೇ ತರಗತಿವರೆಗೆ ಧಾರವಾಡ ಮತ್ತು ಹುಬ್ಬಳ್ಳಿ ತಾಲೂಕಿಗೆ ಅನ್ವಯಿಸಿ ರಜೆ ನೀಡಲಾಗಿತ್ತು. ಇದೀಗ ಈ ಆದೇಶ ಹಿಂಪಡೆಯಲಾಗಿದ್ದು, ಸೋಮವಾರದಿಂದ ಶಾಲೆಗಳು ಪುನಾರಂಭಗೊಳ್ಳಲಿವೆ.
ಇದನ್ನೂ ಓದಿ: ಕಾಪು ಕಾಂಗ್ರೆಸ್ ಮುಖಂಡೆ ರೀನಾ ಡಿಸೋಜಾರಿಗೆ ಚೂರಿಯಿಂದ ಇರಿತ
ಸೋಂಕಿನ ಪ್ರಮಾಣ ಆಧರಿಸಿ ಆಯಾ ಶಾಲೆಗೆ ಮಾತ್ರ ರಜೆ ನೀಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಪರಿಷ್ಕೃತ ಆದೇಶದ ಹಿನ್ನೆಲೆಯಲ್ಲಿ ಜನವರಿ 24ರಿಂದ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ, ಗ್ರಾಮೀಣ ಶಾಲೆಗಳು ಮತ್ತೆ ಆರಂಭವಾಗಲಿವೆ.
ರಾಜ್ಯಾದ್ಯಂತ ಶಾಲೆ ಪುನಾರಂಭದ ಬಗ್ಗೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ರಾಜ್ಯಾದ್ಯಂತ ಮತ್ತೆ ಶಾಲಾ-ಕಾಲೇಜುಗಳು ನಡೆಯಲಿವೆ ಎಂದು ಸಭೆ ಬಳಿಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ