ETV Bharat / state

‘ಫುಡ್​ಕಿಟ್ ಕೊಟ್ಟು ಫೋಟೋ ತೆಗೆಸಿಕೊಳ್ಳೋಕೆ ಬೇಸರವಾಗ್ತಿದೆ’.. ವೇದಿಕೆಯಲ್ಲೇ ಸಂತೋಷ್ ಲಾಡ್ ಕಣ್ಣೀರು - ಬಡವರಿಗೆ ಆಹಾರ ಕಿಟ್ ವಿತರಣೆ

ಕೊರೊನಾ ಹಿನ್ನೆಲೆ ಬಡವರಿಗೆ ಆಹಾರ ಕಿಟ್ ನೀಡಿ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವ ವೇಳೆ ಮಾಜಿ ಸಚಿವ ಸಂತೋಷ್​ ಲಾಡ್ ಭಾವುಕಾರಗಿ ಕಣ್ಣೀರಿಟ್ಟಿದ್ದಾರೆ. ಕಿಟ್ ವಿತರಿಸಿ ಫೋಟೋ ತೆಗೆಸಿಕೊಳ್ಳುವುದು ಬೇಸರ ಎನಿಸುತ್ತಿದೆ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ವೇದಿಕೆಯಲ್ಲೇ ಸಂತೋಷ್ ಲಾಡ್ ಕಣ್ಣೀರು
ವೇದಿಕೆಯಲ್ಲೇ ಸಂತೋಷ್ ಲಾಡ್ ಕಣ್ಣೀರು
author img

By

Published : Jul 3, 2021, 2:06 PM IST

ಹುಬ್ಬಳ್ಳಿ: ಇವತ್ತೀನ ಚೀಪ್ ಪಾಲಿಟಿಕ್ಸ್​​ನಲ್ಲಿ ನಾನು ಸಿಕ್ಕಾಕ್ಕೊಂಡಿದ್ದೀನಿ. ಇದು ಇಂದಿನ ರಾಜಕೀಯ ಅನಿವಾರ್ಯತೆಗೆ ಹಿಡಿದ ಕನ್ನಡಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಕೂಡಲ್ಗಿ ಗ್ರಾಮದಲ್ಲಿ ಬಡವರಿಗೆ ಫುಡ್​​ಕಿಟ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುವಾಗ ಭಾವುಕರಾಗಿದ್ದಾರೆ.

ವೇದಿಕೆಯಲ್ಲೇ ಸಂತೋಷ್ ಲಾಡ್ ಕಣ್ಣೀರು

ಕಿಟ್ ಕೊಡುವಾಗ ಬಡವರ ಜತೆ ಫೋಟೋ ತೆಗೆಸಿಕೊಳ್ಳೋದು ಬೇಸರವಾಗುತ್ತಿದೆ. ಫುಡ್​ಕಿಟ್ ಕೊಟ್ಟು ಫೋಟೋ ತೆಗೆಸಿಕೊಳ್ಳೋದು ನನಗೆ ನಾಚಿಕೆಯಾಗುತ್ತಿದೆ ಎಂದು ನೊಂದು ನುಡಿದರು.

ಕಲಘಟಗಿಯಲ್ಲಿ ಕ್ಯಾಟೀನ್ ತೆರೆಯಲಾಗಿದೆ. ದಿನಕ್ಕೆ ಸಾವಿರಕ್ಕೂ ಅಧಿಕ ಬಡವರಿಗೆ ಅನ್ನಹಾರ ನೀಡಲಾಗುತ್ತಿದೆ. ಇದು ನನಗೆ ಸಮಾಧಾನ ತರಿಸುತ್ತಿದೆ. ಆದರೆ ಇಂದು ಸಹಾಯ ಮಾಡಿರುವುದನ್ನ ಹೇಳಿಕೊಳ್ಳಬೇಕು ಅಂದ್ರೆ ಮುಜುಗರ ಉಂಟಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.