ETV Bharat / state

'ಕಾಂಗ್ರೆಸ್​ ಹಿಂದೂ ವಿರೋಧಿ ಎಂದು ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ' - ಬಿಜೆಪಿ

ಅಧಿಕಾರಕ್ಕೆ ಬರಬೇಕೆಂದು ಬಿಜೆಪಿಯವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

Minister Santosh Lad
ಸಚಿವ ಸಂತೋಷ್​ ಲಾಡ್​
author img

By ETV Bharat Karnataka Team

Published : Jan 15, 2024, 2:16 PM IST

Updated : Jan 15, 2024, 2:35 PM IST

ಸಚಿವ ಸಂತೋಷ್ ಲಾಡ್ ಹೇಳಿಕೆ

ಹುಬ್ಬಳ್ಳಿ: ಕಾಂಗ್ರೆಸ್​ನವರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹರಿಹಾಯ್ದರು. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಿದೆ, ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಬಿಜೆಪಿಯವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ಹೋಗದೇ ಇರುವ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹಾಗೆ ಹೇಳಬಾರದೆಂಬ ಯಾವುದೇ ನಿಯಮವಿಲ್ಲ. ಬಿಜೆಪಿಯವರಿಗೆ ರಾಮಮಂದಿರ ಚುನಾವಣೆ ಮುಗಿಯುವವರೆಗೆ ಅಷ್ಟೇ ನೆನಪಾಗುತ್ತದೆ. ಈಗಾಗಲೇ ಶಂಕರಾಚಾರ್ಯರು ಬಾಯ್ಕಾಟ್ ಮಾಡಿದ್ದಾರೆ. ಅವರನ್ನು ಮೀರಿ ಬಿಜೆಪಿಯವರು ಇದ್ದಾರೆಯೇ?. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದರು.

ಮುಂದುವರೆದು, ಹಾವೇರಿ ಗ್ಯಾಂಗ್​​ ರೇಪ್ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ, ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಹೋಗಿದ್ದಾರೆ. ಅವರೇ ಉತ್ತರ ಕೊಡುತ್ತಾರೆ. ನನಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಬಿಜೆಪಿಯವರು ಯಾರ ಪರವಾಗಿ ಯಾವಾಗ ಬ್ಯಾಟಿಂಗ್​ ಮಾಡುತ್ತಾರೋ ಗೊತ್ತಿಲ್ಲ. ಇದು ಸೂಕ್ಷ್ಮ ವಿಚಾರ. ಇದಕ್ಕೆ ಸಿಎಂ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಅನುದಾನ ತಾರತಮ್ಯ ವಿಚಾರವಾಗಿ ಸಿಎಂ ಶ್ವೇತಪತ್ರ ಹೊರಡಿಸಬೇಕು ಎಂಬ ಸಿ.ಟಿ.ರವಿ ಹೇಳಿಕೆಗೆ, ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಸಿ.ಟಿ.ರವಿ ಹೇಳಿದರೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಹಾಗೆನಾ? ಈ ಬಗ್ಗೆ ಕೇಂದ್ರವೇ ಶ್ವೇತಪತ್ರ ಹೊರಡಿಸಲಿ ಎಂದರು.

ಇದನ್ನೂ ಓದಿ: ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಿಎಂ ಭೇಟಿಗೆ ಆಗಮಿಸಿದ ಸಂತ್ರಸ್ತೆಯ ಕುಟುಂಬ

Last Updated : Jan 15, 2024, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.