ಧಾರವಾಡ: ಅಕ್ರಮವಾಗಿ ನಿರ್ಮಿಸಿಕೊಂಡ ಲೇಔಟ್ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ತೆರವು ಕಾರ್ಯ ನಡೆಯುತ್ತಿದೆ.
ನಗರದ ಹೊಸಯಲ್ಲಾಪುರ ಗೋವನಕೊಪ್ಪ ರಸ್ತೆಯಲ್ಲಿ ಅಕ್ರಮ- ಸಕ್ರಮ ಲೇಔಟ್ಗಳ ತೆರವುಗೊಳಿಸಲಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಲಬುರ್ಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ಲೇಔಟ್ಗಳನ್ನು ಗುರುತಿಸಿಕೊಂಡು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿ- ಧಾರವಾಡದಲ್ಲಿ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಹುಡಾ ಅಕ್ರಮ ಲೇಔಟ್ಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
![Road encroachment clearrence operations in dharwad](https://etvbharatimages.akamaized.net/etvbharat/prod-images/10308237_thumbnail.jpg)
ಇದನ್ನೂ ಓದಿ:ಆಸ್ತಿ ವಿವಾದ ಹಿನ್ನೆಲೆ: ಬೆಳಗಾವಿಯಲ್ಲಿ 4 ವರ್ಷದ ಬಾಲಕನ ಕೊಲೆ