ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶವಸಂಸ್ಕಾರಕ್ಕೆ ಅಂತಾನೆ ಇಂತಿಷ್ಟು ಜಾಗ ಮೀಸಲಿಟ್ಟಿದ್ದಾರೆ. ಆದ್ರೇ ಆ ಜಾಗದ ಸದ್ಯದ ಪರಿಸ್ಥಿತಿ ನೋಡಿದರೆ ಎಲ್ಲರೂ ಅಚ್ಚರಿ ಪಡುವುದಂತು ಸತ್ಯ.
ಬಿಡ್ನಾಳ ಗ್ರಾಮದಲ್ಲಿರುವ ರುದ್ರಭೂಮಿಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಬಿಡ್ನಾಳ್, ಇಂದಿರಾ ನಗರದ ನಿವಾಸಿಗಳ ಅನುಕೂಲಕ್ಕಾಗಿ 7 ಎಕರೆ ವಿಸ್ತೀರ್ಣದಲ್ಲಿ ರುದ್ರಭೂಮಿ ನಿರ್ಮಾಣ ಮಾಡಲಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಅಲ್ಲಿ ಶವ ಸಂಸ್ಕಾರ ಮಾಡಲು ಸಹ ಭಯ ಪಡುವಂತಾಗಿದೆ. ಸ್ಥಳೀಯರು ಅದೆಷ್ಟೋ ಬಾರಿ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ರುದ್ರಭೂಮಿ ಸ್ವಚ್ಛ ಮಾಡುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಓದಿ: ದಾವಣಗೆರೆಯ ದೇಶದ ಅತಿದೊಡ್ಡ ಗಾಜಿನ ಮನೆ ನೋಡಿದಿರಾ?
ನಗರದ ಸುತ್ತಮುತ್ತಲಿನ ಪ್ರದೇಶಗಳಿಂದ ಶವ ಸಂಸ್ಕಾರಕ್ಕೆಂದು ಬರುವ ಸಾರ್ವಜನಿಕರು ಹಲವಾರು ಬಾರಿ ಇಲ್ಲಿನ ವ್ಯವಸ್ಥೆ ನೋಡಿ ಭಯ ಪಟ್ಟಿರುವ ಉದಾಹರಣೆಗಳಿವೆ. ಬೇರೆ ನಗರದಲ್ಲಿರುವ ರುದ್ರಭೂಮಿ ನೋಡಿದರೆ, ಇಲ್ಲಿನ ಪರಿಸ್ಥಿತಿ ನೋಡಿದರೆ ಬಹಳ ವ್ಯತ್ಯಾಸ ಇದೆ. ಎಲ್ಲಿ ನೋಡಿದರು ಗಿಡ-ಗಂಟಿಗಳಿಂದ ತುಂಬಿದೆ. ಶವ ಸಂಸ್ಕಾರಕ್ಕೆ ಬರುವವರಿಗೆ ಆಸನದ ವ್ಯವಸ್ಥೆ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯ ಇಲ್ಲದೇ ಇರುವುದರಿಂದ ಸಾರ್ವಜನಿಕರನ್ನು ಮತ್ತಷ್ಟು ಆತಂಕದಲ್ಲಿ ದೂಡಿದೆ.
ಅಷ್ಟೇ ಅಲ್ಲದೇ ಇಲ್ಲಿ ಅನೇಕ ಅನೈತಿಕ ಚಟುವಟಿಕೆಗಳು ಸಹ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಕೂಡಲೇ ಪಾಲಿಕೆ ಅಧಿಕಾರಿಗಳು ಉತ್ತಮ ಸುಸಜ್ಜಿತವಾದ ರುದ್ರಭೂಮಿ ನೀಡಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ, ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ರವಾನಿಸಿದ್ದಾರೆ.
ಒಟ್ಟಿನಲ್ಲಿ ಶವ ಸಂಸ್ಕಾರಕ್ಕಾಗಿ ನಿರ್ಮಾಣವಾದ ರುದ್ರಭೂಮಿ ಈಗ ಕಾಂಡಿನಂತಾಗಿದ್ದು, ಆದಷ್ಟು ಬೇಗ ಉತ್ತಮ ರುದ್ರಭೂಮಿ ನಿರ್ಮಿಸಿ ಸಮಸ್ಯೆ ಬಗೆಹರಿಸಲು ಪಾಲಿಕೆ ಮುಂದಾಗಬೇಕಾಗಿದೆ.