ETV Bharat / state

ಸರ್ಕಾರ ಖಾಸಗಿ ಶಾಲಾ-ಕಾಲೇಜುಗಳ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ: ಕುಬೇರಪ್ಪ - latest news in hubli

ಕೊರೊನಾ ಮಹಾಮಾರಿಯಿಂದ ವಿದ್ಯಾರ್ಥಿಗಳ ಭವಿಷ್ಯ ನಲುಗಿ ಹೋಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಇಲ್ಲಿಯವರೆಗೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗಳು ನಡೆದಿಲ್ಲ. ಈ ಹಂತದಲ್ಲಿ ಶಿಕ್ಷಣ ಸಚಿವರು ದಿನಕ್ಕೆ ಒಂದೊಂದು ಹೇಳಿಕೆ ನೀಡುವುದು ಖಂಡನೀಯ ಎಂದು ಡಾ. ಆರ್.ಎಂ.ಕುಬೇರಪ್ಪ ಕಿಡಿಕಾರಿದರು.

r-m-kuberappa
ಡಾ. ಆರ್.ಎಮ್.ಕುಬೇರಪ್ಪ
author img

By

Published : Jun 6, 2020, 5:10 PM IST

ಹುಬ್ಬಳ್ಳಿ: ಶಾಲಾ-ಕಾಲೇಜುಗಳನ್ನು ಪ್ರಾರಂಭ ಮಾಡುವುದರಲ್ಲಿ ಸರ್ಕಾರ ಗೊಂದಲ ಸೃಷ್ಟಿ ಮಾಡುತ್ತಿದೆ. ಇದನ್ನು ನೋಡಿದರೆ ಸರ್ಕಾರ ಖಾಸಗಿ ಶಾಲಾ-ಕಾಲೇಜುಗಳ ಒತ್ತಡಕ್ಕೆ ಮಣಿಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಪಶ್ಚಿಮ ಪದವೀಧರರ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ.ಕುಬೇರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯಿಂದ ವಿದ್ಯಾರ್ಥಿಗಳ ಭವಿಷ್ಯ ನಲುಗಿ ಹೋಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಇಲ್ಲಿಯವರೆಗೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗಳು ನಡೆದಿಲ್ಲ. ಅಲ್ಲದೇ ಎಸ್​ಎಸ್​ಎಲ್​ಸಿ‌ ಪರೀಕ್ಷೆ ನಡೆದಿಲ್ಲ. ಪಿಯುಪಿ ದ್ವಿತೀಯ ವರ್ಷದ ಒಂದು ಪರೀಕ್ಷೆ ಕೂಡಾ ಬಾಕಿಯಿದೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜುಗಳ ಪ್ರಾರಂಭದ ಬಗ್ಗೆ ಶಿಕ್ಷಣ ಸಚಿವರು ದಿನಕ್ಕೆ ಒಂದೊಂದು ಹೇಳಿಕೆ ನೀಡುವುದು ಖಂಡನೀಯ ಎಂದರು.

ಶಾಲಾ ಶಿಕ್ಷಕರಿಗೆ ಶಾಲೆಗಳಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆ ಮೂಲಕ ಶಿಕ್ಷಕರೇ ಮಕ್ಕಳನ್ನು ಶಾಲೆಗಳತ್ತ ಕರೆ ತರಲು ತಿಳಿಸಲಾಗಿದೆ. ಇದರಿಂದ ಮುಂದೆ ಮಕ್ಕಳಿಗೆ ಏನಾದರು ತೊಂದರೆಯಾದರೆ ಶಿಕ್ಷಕರೇ ನೇರ ಹೊಣೆಗಾರರಾಗುವರು. ಅಲ್ಲದೇ ಇದೀಗ ಸರ್ಕಾರ ಆನ್​ಲೈನ್​ ಶಿಕ್ಷಣ ನಡೆಸಲು ತಿಳಿಸಿದ್ದು, ಇದು ಗ್ರಾಮೀಣ ಭಾಗವನ್ನು ಪರಿಗಣನೆಗೆ ತೆಗೆದುಕೊಂಡು ನೋಡಿದಾಗ ಅವೈಜ್ಞಾನಿಕವಾಗಿದೆ ಎಂದರು.

ಡಾ. ಆರ್.ಎಂ.ಕುಬೇರಪ್ಪ

ಪ್ರಾಥಮಿಕ ಹಂತದಿಂದ ಪದವಿವರೆಗೆ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗಿದೆ. ಅಲ್ಲದೆ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ದಿಸೆಯಲ್ಲಿ ಸರ್ಕಾರ ಶಿಕ್ಷಣ ತಜ್ಞರ ಸಲಹಾ ಸಮಿತಿ ರಚನೆ ಮಾಡಿ ಅವರು ನೀಡುವ ವರದಿ ಆಧಾರದ ಮೇಲೆ ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.