ಧಾರವಾಡ: ಖಾವಿ ವೇಷಧಾರಿ ಓರ್ವನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಮರಾಠಾ ಕಾಲೋನಿಯಲ್ಲಿ ನಡೆದಿದೆ. ಕಳೆದ ರಾತ್ರಿ ಈ ಸ್ವಾಮಿಜಿ ವೇಷಧಾರಿಯೊಬ್ಬ ನಗರದ ದುರ್ಗಾ ದೇವಿ ದೇವಸ್ಥಾನದ ಮೇಲೆ ಕುಳಿತು ತ್ರಿಶೂಲವನ್ನ ತಿರುಗಿಸುತ್ತಿದ್ದ. ಇದನ್ನ ನೋಡಿದ ಕೆಲವರು ಆಗಲೇ ಆತನನ್ನ ಹೊಡೆದು ಕಳಿಸಲು ಯತ್ನಿಸಿದ್ದರು.
ಆತ ರಾತ್ರಿ ಅಲ್ಲಿಂದ ಹೋದರೂ ಮಧ್ಯಾಹ್ನ ಮತ್ತೆ ಮರಳಿ ಬಂದಿದ್ದಾನೆ. ಮಕ್ಕಳ ಕಳ್ಳ ಎಂದು ವದಂತಿ ಹಬ್ಬಿದ ಹಿನ್ನೆಲೆ ಸ್ಥಳೀಯರು ಸ್ವಾಮಿಜಿ ವೇಷಧಾರಿಯನ್ನು ಹಿಡಿದು ಗೂಸಾ ಕೊಟ್ಟಿದ್ದಾರೆ. ಆದರೆ ಆತ ಮರಳಿ ಹೋಗಲು ಒಪ್ಪದೇ ಇದ್ದಾಗ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಸ್ವಾಮಿ ವೇಷಧಾರಿ ಬಳಿ ಉಪನಗರ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ವಾಪಾಸ್ ಆ ಸ್ಥಳಕ್ಕೆ ಹೋಗದಂತೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.