ಕಲಘಟಗಿ: ಎಂ.ಎಸ್.ಐ.ಎಲ್ ಲಿಕ್ಕರ್ ಶಾಪ್ ಬಾಗಿಲು ಮುಚ್ಚುವಂತೆ ಒತ್ತಾಯಿಸಿ ಕಲಘಟಗಿ ಪಟ್ಟಣದಲ್ಲಿ ಮಹಿಳೆಯರು ಹೋರಾಟ ನಡೆಸಿದರು.
ಬಾಗವಾನ್ ಓಣಿಯಲ್ಲಿ ತೆರೆಯಲಾಗಿರುವ ನೂತನ ಎಂ.ಎಸ್.ಐ.ಎಲ್ ಮದ್ಯದಂಗಡಿಯ ಸ್ಥಳದಲ್ಲಿ ಮಹಾಲಕ್ಷ್ಮೀ ದೇವಸ್ಥಾನ, ದರ್ಗಾ, ಶಾಲೆಗಳಿವೆ. ಮಹಿಳೆಯರು, ವಿದ್ಯಾರ್ಥಿಗಳು ಓಡಾಡುವ ಜಾಗದಲ್ಲಿ ಲಿಕ್ಕರ್ ಶಾಪ್ ತೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಅಬಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು, ಜನ ವಸತಿ ಪ್ರದೇಶದಲ್ಲಿರುವ ಮದ್ಯದಂಗಡಿಯನ್ನು ಕೂಡಲೇ ಬಂದ್ ಮಾಡುವಂತೆ ಆಗ್ರಹಿಸಿದರು. ಜೊತೆಗೆ ಅಬಕಾರಿ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.