ಧಾರವಾಡ: ಸಿಸಿಬಿ ಹಾಗೂ ಉಪನಗರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಘಟನೆ ನೆಹರು ನಗರದಲ್ಲಿ ನಡೆದಿದೆ.
ಮನೆಯೊಂದರ ಮೇಲೆ ದಾಳಿ ನಡೆಸಿದ ವೇಳೆ ನಾಲ್ವರು ಯುವತಿಯರು ಹಾಗೂ ಐವರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ.
ಯುವತಿಯರು ಅಸ್ಸೋಂ ಮೂಲದವರಾಗಿದ್ದು, ಬಂಧಿತ ಪುರುಷರು ಸ್ಥಳೀಯರು ಎನ್ನಲಾಗಿದೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.