ಹುಬ್ಬಳ್ಳಿ: ನಗರದ ಇಸ್ಕಾನ್ ಮಂದಿರದಲ್ಲಿ ಜನವರಿ 6ರಂದು ನಡೆಯುವ ವೈಕುಂಠ ಏಕಾದಶಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಏಕಾದಶಿ ವೃತವನ್ನು ಭಗವಂತನ ನಾಮಸ್ಮರಣೆ, ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸಲಾಗುತ್ತಿದೆ. ಏಕಾದಶಿಯು, ಪೌರ್ಣಿಮೆ ಅಥವಾ ಅಮಾವಾಸ್ಯೆ ನಂತರ ಬರುವ ಹನ್ನೊಂದನೇ ದಿನವಾಗಿದೆ. ಹೀಗಾಗಿ ಮಹತ್ವ ಪೂರ್ಣವಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ ಎಂದರು.
ವೈಕುಂಠ ಏಕಾದಶಿ ಪ್ರಯುಕ್ತ ಬೆಳಿಗ್ಗೆ 8ಕ್ಕೆ ವೈಕುಂಠ ದ್ವಾರದ ಪೂಜೆ, 10ಕ್ಕೆ ಸಾರ್ವಜನಿಕ ಲಕ್ಷಾರ್ಚನೆ ಸೇವೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.