ETV Bharat / state

ರಾಜಸ್ಥಾನದ ಕೊಲೆ ಘಟನೆ ಅತ್ಯಂತ ನೀಚ ಕೃತ್ಯ: ಮುತಾಲಿಕ್ ಖಂಡನೆ

ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹಾಡಹಗಲೇ ನಡೆದ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣದ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Pramod Muthalik
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
author img

By

Published : Jun 29, 2022, 1:11 PM IST

ಧಾರವಾಡ: ರಾಜಸ್ಥಾನದಲ್ಲಿ ನಿನ್ನೆ ನಡೆದ ಕೊಲೆ ಪ್ರಕರಣವನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.‌ ಈ ಕುರಿತು ನಗರದಲ್ಲಿ ಮಾತನಾಡಿರುವ ಅವರು, ರಾಜಸ್ಥಾನದ ಈ ಘಟನೆ ಅತ್ಯಂತ ಹೇಯವಾದದ್ದಾಗಿದ್ದು, ಇದೊಂದು ನೀಚ ಕೃತ್ಯ ಇದನ್ನು ಸರ್ಕಾರ, ‌ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಇವರ ಮೇಲೆ ಕ್ರಮ ಕೈಗೊಳ್ಳದೇ ಇದ್ದರೆ ‌ಇದೇ‌ ಮಾನಸಿಕತೆ ಮುಂದುವರೆಯಲಿದೆ. ಪಿಎಂ ಮೋದಿ ಅವರನ್ನೂ ಕೂಡ ಇದೇ ಮಾದರಿಯಲ್ಲಿ ಕೊಲೆ ಮಾಡುತ್ತೇವೆ ಎಂದಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಲಿ. ಅವರ ಮೇಲೆ ಭಯೋತ್ಪಾದಕ ಸೆಕ್ಷನ್ ಹಾಕಬೇಕು. ಅವರು ಹೊರಗೆ ಬರಬಾರದು. ಅಷ್ಟೇ ಅಲ್ಲ ಒಂದೇ ತಿಂಗಳಲ್ಲಿ ವಾದ - ಪ್ರತಿವಾದ ಮುಗಿಸಿ ಗಲ್ಲು ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು. ‌

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ನಾವೇ ಕೊಲೆ ಮಾಡಿರುವುದು, ಇನ್ನೂ ಕೊಲೆಗಳಾಗುತ್ತವೆ ಅಂತಾ ಅವರೇ ಹೇಳಿದ್ದಾರೆ. ಇದೇ ಹೇಳಿಕೆ ಸಾಕು. ಇನ್ನು ತನಿಖೆ ಅವಶ್ಯಕತೆ ಇಲ್ಲ. ಅದೇ ಒಂದು ಆಧಾರ ಇಟ್ಟುಕೊಂಡು ಗಲ್ಲು ಶಿಕ್ಷೆ ಕೊಡಿ ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ: ಕೊಲೆಗಡುಕರನ್ನ ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು: ಆಂದೋಲ ಶ್ರೀ

ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್​ನವರು ಬಾಯಿ ಬಿಡಬೇಕು. ಕಲ್ಲಂಗಡಿ ಒಡೆದ ಸಂದರ್ಭದಲ್ಲಿ ಮುಸ್ಲಿಂ ಪರವಾಗಿ ನಿಂತಿದ್ದಿರಿ. ಆದರಿಂದು ರುಂಡ ಕತ್ತಿರಿಸಿದವರ ಬಗ್ಗೆ ಏನು ಹೇಳ್ತಿರಿ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.