ETV Bharat / state

ಎನ್ಆ​ರ್​ಸಿ, ಸಿಎಎ ಅವಶ್ಯಕತೆ ನಮ್ಮಗಿಲ್ಲ : ಪ್ರಕಾಶ್​ ಅಂಬೇಡ್ಕರ್​ - ಪ್ರಕಾಶ ಅಂಬೇಡ್ಕರ್​ ಸುದ್ದಿ

ಧಾರವಾಡ, ಎನ್ಆ​ರ್​ಸಿ, ಸಿಎಎ ಹಾಗೂ ಎನ್​​ಪಿಆರ್‌ ಅವಶ್ಯಕತೆ ನಮಗಿಲ್ಲ, ಪ್ರತಿ 10 ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ, ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತದೆ. ದೇಶದಲ್ಲಿ ಹಲವು ಸಮಸ್ಯೆಗಳವೆ ಅದರ ಬಗ್ಗೆ ಗಮನ ಹರಿಸಲಿ ಎಂದು ಅಂಬೇಡ್ಕರ್​ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.

prakash-ambedkar-talking-against-to-caa-and-nrc
ಎನ್ಆ​ರ್​ಸಿ, ಸಿಎಎ ಅವಶ್ಯಕತೆ ನಮ್ಮಗಿಲ್ಲ
author img

By

Published : Jan 14, 2020, 5:00 PM IST

ಧಾರವಾಡ: ಎನ್ಆ​ರ್​ಸಿ, ಸಿಎಎ ಹಾಗೂ ಎನ್​​ಪಿಆರ್‌ ಅವಶ್ಯಕತೆ ನಮಗಿಲ್ಲ, ಪ್ರತಿ 10 ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ, ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತದೆ. ದೇಶದಲ್ಲಿ ಹಲವು ಸಮಸ್ಯೆಗಳವೆ ಅದರ ಬಗ್ಗೆ ಗಮನ ಹರಿಸಲಿ ಎಂದು ಅಂಬೇಡ್ಕರ್​ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಇದನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತಿದ್ದೇವೆ, ಜನ ಕೂಡಾ ಅರ್ಥಿಕತೆ ಬಗ್ಗೆ ಮಾತನಾಡುತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಇಂದು ಅವಶ್ಯಕ, ದೇಶದಲ್ಲಿ ಡಿಟೆನ್ಷನ್​ ಕ್ಯಾಂಪ್ ಮಾಡಲಾಗುತ್ತಿದೆ. ಡಿಟೆನ್ಷನ್​ ಕ್ಯಾಂಪ ಮಾಡುವುದರ ಉದ್ದೇಶ ಏನು ಎನ್ಆರ್​ಸಿ ತರುವುದಕ್ಕಾಗಿಯೇ ಅದನ್ನ ಮಾಡಲಾಗಿದೆ ಎಂದರು.

ಎನ್ಆ​ರ್​ಸಿ, ಸಿಎಎ ಅವಶ್ಯಕತೆ ನಮ್ಮಗಿಲ್ಲ

ಮೋದಿ‌ ಜನರ ದಾರಿ ತಪ್ಪಿಸುವ ಮಾತನಾಡಬಾರದು. ಸಂವಿಧಾನ‌ ಅಷ್ಟೇ ಅಲ್ಲ, ಈ ದೇಶದ ಜನರೇ ತೊಂದರೆಯಲ್ಲಿದ್ದಾರೆ ಆದರೆ ಸರ್ಕಾರ ಮಾತ್ರ ಮುಸ್ಲಿಂರ‌ ಮುಖ ತೊರಿಸುತ್ತಿದೆ, ಆದರೆ ನಿಜವಾಗಿ ಇದು ಹಿಂದೂ ‌ವಿರೋಧಿ ಸರ್ಕಾರ ಎಂದು ಆರೋಪವಿದೆ.

ಜೆಎನ್​ಯು ಕಾಲೇಜಿನಲ್ಲಿ, ಹಿಂದೂ ಸಂಘಟನೆ ಹೆಸರಿನಲ್ಲಿ ಅಲ್ಲಿ ಗೂಂಡಾಗಿರಿ ‌ನಡೆದಿದ್ದಕ್ಕೆ‌ ನಾನು ವಿರೋಧ ವ್ಯಕ್ತಪಡಿಸುತ್ತೇನೆ.ನಮ್ಮ ಮಾತು ಕೇಳದೆ‌‌ ಇದ್ರೆ ಹೊಡೆಯುತ್ತೇವೆ ಅನ್ನೊದೆ ಇದರ ಅರ್ಥ. ಸಂವಿಧಾನ ಸುಡುವ‌ ಮಾತನ್ನ ಪ್ರಸಾದ್​ ಎನ್ನುವವರು ಮಾತನಾಡಿದ್ದಾರೆ, ಆರ್​ಎಸ್​ಎಸ್ ಮುಖವೇ ಹಿಟ್ಲರಿಸಂ ಎಂದು‌ ದೂರಿದರು.

Intro:ಧಾರವಾಡ: ಎನ್.ಆರ್.ಸಿ, ಸಿಎಎ ಹಾಗೂ ಎನ್.ಪಿ.ಆರ್‌ ಅವಶ್ಯಕತೆ ಕೂಡಾ ನಮಗಿಲ್ಲ, ಪ್ರತಿ ೧೦ ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ, ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಫೆಬ್ರವರಿಗೆ ಹೊಸ ಬಜೆಟ್ ಬರಲಿದೆ, ಸರ್ಕಾರದ ಬಳಿ ೧೧ ಲಕ್ಷ ಕೋಟಿ ಹಣ ಇದೆ. ಸರ್ಕಾರ ನಡೆಸಲು ೧೩ ಲಕ್ಷ ಕೋಟಿ ಬೇಕು, ಅವರ ಬಳಿ ಅಷ್ಟು ಹಣ ಇಲ್ಲದ ಕಾರಣ ಸರ್ಕಾರ ಇಂಥದ್ದೆಲ್ಲ ಕೆಲಸ ಮಾಡುತಿದೆ ಎಂದು ಅಂಬೇಡ್ಕರ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಇದನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತಿದ್ದೇವೆ, ಜನ ಕೂಡಾ ಅರ್ಥಿಕತೆ ಬಗ್ಗೆ ಮಾತನಾಡುತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತವದು ಇಂದು ಅವಶ್ಯಕತೆಯಾಗಿದೆ. ದೇಶಗಳಲ್ಲಿ ಡಿಟೆನಷನ್ ಕ್ಯಾಂಪ್ ಮಾಡಲಾಗುತಿದೆ ಎಂದು ನಾವೇ ಹೇಳಿದ್ದೇವು. ಡಿಟೆನಷನ್ ಕ್ಯಾಂಪ ಮಾಡುವ ಅರ್ಥ ಏನು, ಎನ್ ಆರ್ ಸಿ ತರುವುದಕ್ಕಾಗಿಯೇ ಅದನ್ನ ಮಾಡಲಾಗಿದೆ. ಮೋದಿಯವರ ಬಳಿ ನಾವು ಇಷ್ಟೇ ಮನವಿ ಮಾಡೊದು ೭೦ ವರ್ಷದಲ್ಲಿ ಜನರು ಜಾಗೃತರಾಗಿದ್ದಾರೆ.‌ ರಾಜಕಾರಣಿಗಳು ನಿಜ ಹೇಳ್ತಾರೊ,‌ಸುಳ್ಳು ಹೇಳ್ತಾರೊ ‌ಜನರು ತಿಳಿಯುತಿದ್ದಾರೆ ಎಂದರು.

ಮೋದಿ‌ ಅವರು ಜನರ ದಾರಿ ತಪ್ಪಿಸುವ ಮಾತು ಹೇಳಬಾರದು. ಸಂವಿಧಾನ‌ ಅಷ್ಟೇ ಅಲ್ಲ, ಈ ದೇಶದ ಜನರೇ ತೊಂದರೆಯಲ್ಲಿದೆ. ಸರ್ಕಾರ ಮುಸ್ಲಿಂರ‌ ಮುಖ ತೊರಿಸುತಿದೆ, ಆದರೆ ನಿಜವಾಗಿ ಇದು ಹಿಂದೂ ‌ವಿರೋಧಿ ಸರ್ಕಾರ ಎಂದು ಆರೋಪಯಿದೆ. ಆಸ್ಸಾಂನಲ್ಲಿ ೫ ಲಕ್ಷ ಮುಸ್ಲಿಂ ಹಾಗೂ ೧೪ ಲಕ್ಷ ಜನರು ಇದ್ದಾರೆ. ೬ ಕೋಟಿ ಜನಸಂಖ್ಯೆ ಇರುವ ರಾಜ್ಯದ ಸ್ಥಿತಿ ಏನಾಗಬಹುದು ‌ವಿಚಾರ‌ ಮಾಡಿ ಎಂದು ಪ್ರಶ್ನಿಸಿದ್ದಾರೆ.

ಜೆಎನ್ಯು ಒಳಗಿನ ವಿಷಯ ಅದು, ಆದರೆ ಹಿಂದೂ ಸಂಘಟನೆ ಹೆಸರಿನಲ್ಲಿ ಅಲ್ಲಿ ಗೂಂಡಾಗಿರಿ ‌ನಡೆದಿದ್ದಕ್ಕೆ‌ ನಾನು ವಿರೋಧ ವ್ಯಕ್ತಪಡಿಸುತ್ತೇನೆ. ಆರ್ ಎಸ್ ಎಸ್ ಮುಖ ಇದು, ನಮ್ಮ ಮಾತು ಕೇಳದೆ‌‌ ಇದ್ರೆ ಹೊಡೆಯುತ್ತೇವೆ ಅನ್ನೊದೆ ಇದರ ಅರ್ಥ. ಸಂವಿಧಾನ ಸುಡುವ‌ ಮಾತನ್ನ ಪ್ರಸಾದ ಎನ್ನುವವರು ಮಾತನಾಡಿದ್ದಾರೆ, ಆರ್ ಎಸ್ ಎಸ್ ಮುಖವೇ ಹಿಟ್ಲರಿಸಂ ಎಂದು‌ ದೂರಿದರು.Body:ಮುಸಲಿನ್ ಹಾಗೂ ಹಿಟ್ಲರ್ ಕೂಡಾ ಇದೇ ಹೇಳುತಿದ್ದರು, ನಮ್ಮ ಜೊತೆ ಬರದೆ ಇದ್ರೆ ಹೊಡೆಯುತ್ತೆವೆ ಅಂತಾ, ಅದನ್ನೇ ಆರ್ ಎಸ್ ಎಸ್ ಮಾಡುತಿದೆ ೨೦೨೪ ಕ್ಕೆ ಚುನಾವಣೆ ಇದೆ, ಅಲ್ಲಿವರೆಗೆ ಇವರು ಸರ್ಕಾರ ತೆಗೆದುಕೊಂಡು ಹೋಗಬೇಕಿದೆ, ಅದಕ್ಕೆ ಎನ್ ಆರ್ ಸಿ ತಂದಿದ್ದಾರೆ. ಇದರಿಂದಲೇ ಅವರು ತುರ್ತು ಪರಿಸ್ಥಿತಿಯನ್ನ ತಂದು‌ ಜನರನ್ನ ಒತ್ತಿ‌ ಇಡುವ ಕೆಲಸ ಮಾಡುತಿದ್ದಾರೆ. ಯುಪಿಯಲ್ಲಿ ಅವರು ಸಿಎಎ ತರಲು‌ ಮುಂದಾಗಿದ್ದಾರೆ. ಈ ಹಿಂದೆ ಅನಂತ ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವ‌ ಮಾತನ್ನು ಹೇಳಿದ್ರು,‌ ಅದು ಅವರು ಆರ್ ಎಸ್ ಎಸ್ ಮನಸ್ಸಿನ ಮಾತನ್ನ ಹೇಳಿದ್ರು ಎಂದಿದ್ದಾರೆ...Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.