ETV Bharat / state

ಬ್ಲ್ಯಾಕ್ ಫಂಗಸ್ ರೋಗವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ: ಪ್ರಹ್ಲಾದ್ ‌ಜೋಶಿ - prahlad joshi talk on black fungus

ಇಡೀ ದೇಶದಲ್ಲಿ ಇದ್ದ 50 ರಿಂದ 60 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇದೀಗ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಹೇಳಿದರು.

prahlad joshi
ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ
author img

By

Published : May 21, 2021, 1:54 PM IST

ಹುಬ್ಬಳ್ಳಿ: ಇಂದು ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಔಷಧಿ ಪೂರೈಕೆಯಾಗುತ್ತದೆ. ಇಡೀ ದೇಶದಲ್ಲಿ ಇದ್ದ 50 ರಿಂದ 60 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇದೀಗ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ಬೇಕಾದಂತಹ ಔಷಧಿ ಇರಲಿಲ್ಲ. ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪ್ರಯತ್ನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ

ನಗರದಲ್ಲಿಂದು ಮಾತನಾಡಿದ ಅವರು, ಹಂತ ಹಂತವಾಗಿ ಎಲ್ಲ ರಾಜ್ಯಗಳಿಗೂ ಔಷಧಿ ಪೂರೈಕೆ ಮಾಡಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸದಾನಂದಗೌಡ, ಔಷಧಿ ಉಸ್ತುವಾರಿ ಮನ್ಸುಖ್ ಮಾಂಡವೆ ಅವರ ಜೊತೆ ಚರ್ಚೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಕರ್ನಾಟಕಕ್ಕೆ ಆಕ್ಸಿಜನ್ ಹಂಚಿಕೆ ವಿಚಾರದಲ್ಲಿ ವ್ಯತ್ಯಯವಾಗಿದೆ; ಕೇಂದ್ರ ಸಚಿವ ಸದಾನಂದಗೌಡ

ಸಿದ್ದರಾಮಯ್ಯ ಲೆಟರ್ ವಾರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರೇ ಈ ಹಿಂದೆ ಡಿಸಿಗಳ ಜತೆ ವಿಪಕ್ಷ ನಾಯಕರು ಸಭೆ ನಡೆಸಬಾರದು ಎಂಬ ಸುತ್ತೋಲೆ ಹೊರಡಿಸಿದ್ದರು. ಬಿಎಸ್​ವೈ ಹಾಗೂ ಜಗದೀಶ್​​ ಶೆಟ್ಟರ್ ವಿಪಕ್ಷ ನಾಯಕರಾಗಿದ್ದಾಗ ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ಈಗ ಅವರ ಸುತ್ತೋಲೆಯಂತೆ ಸಿದ್ದರಾಮಯ್ಯನವರು ನಡೆದುಕೊಳ್ಳಲಿ ಎಂದು ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.