ETV Bharat / state

ಕಳುವಾಗಿದ್ದ ಮೊಬೈಲ್ ಹುಡುಕಿಕೊಟ್ಟ ಪೊಲೀಸರು: ಪ್ರಹ್ಲಾದ್​ ಜೋಶಿ ಶ್ಲಾಘನೆ - ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಪ್ರಹ್ಲಾದ್ ಜೋಶಿ

ಕಳೆದುಹೋಗಿದ್ದ ಒಂದು ಕೋಟಿ ಮೌಲ್ಯದ 400 ಮೊಬೈಲ್​ ಅನ್ನು ಜನರಿಗೆ ಹಿಂದಿರುಗಿಸಿರುವ ಹುಬ್ಬಳ್ಳಿ-ಧಾರವಾಡದ ಪೊಲೀಸರ ಕಾರ್ಯಕ್ಕೆ ಟ್ವಿಟ್ಟರ್​​ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಳುವಾಗಿದ್ದ ಮೊಬೈಲ್ ಹುಡುಕಿಕೊಟ್ಟ ಪೊಲೀಸರು
ಕಳುವಾಗಿದ್ದ ಮೊಬೈಲ್ ಹುಡುಕಿಕೊಟ್ಟ ಪೊಲೀಸರು
author img

By

Published : Apr 7, 2023, 11:03 PM IST

ಹುಬ್ಬಳ್ಳಿ : ಕಳ್ಳತನವಾಗಿದ್ದ ಒಂದು ಕೋಟಿ ಮೌಲ್ಯದ ಮೊಬೈಲ್ ಫೋನ್​ಗಳನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಾರಸುದಾರರಿಗೆ ವಾಪಸ್ ಕೊಡಿಸಿರುವ ಪೊಲೀಸರ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕಾರ್ಯವನ್ನು ಜೋಶಿ ತಮ್ಮ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು, ಸಮಾಜಕ್ಕೆ ಪೊಲೀಸರ ಇಂಥ ಕಾರ್ಯ ಅಗತ್ಯವಾಗಿದೆ ಎಂದಿದ್ದಾರೆ. ಮೊಬೈಲ್ ಕಳೆದುಕೊಂಡವರು ಇ - ಸ್ಪಂದನ ಹಾಗೂ ಸಿಐಇಆರ್ ಮೂಲಕ ದೂರು ಸಲ್ಲಿಸಿದ್ದರು. ಅವಳಿ ನಗರದ ಡಿ ಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರ ಸಮ್ಮುಖದಲ್ಲಿ ವಾರಸುದಾರರು ಕಳೆದುಹೋದ ಫೋನ್​ಗಳನ್ನು ಪಡೆದುಕೊಂಡರು.

  • ಕಳ್ಳತನವಾಗಿದ್ದ ಹಾಗೂ ಕಳೆದು ಹೋಗಿದ್ದ ಒಂದು ಕೋಟಿ ಮೌಲ್ಯದ 400 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ ಅವುಗಳ ವಾರಸುದಾರರಿಗೆ ಹಿಂದುರಿಗಿಸುವುದರ ಮೂಲಕ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಶ್ಲಾಘನೀಯವಾದ ಕೆಲಸ ಮಾಡಿದ್ದಾರೆ. @DgpKarnataka @LokeshIPS_ @compolhdc (1/4) pic.twitter.com/7MicPp9PtG

    — Pralhad Joshi (@JoshiPralhad) April 7, 2023 " class="align-text-top noRightClick twitterSection" data=" ">

ಇ ಸ್ಪಂದನದ ಮೂಲಕ ದೂರು ಸಲ್ಲಿಸಿ: ಸಿಇಐಆರ್​ ಕೇಂದ್ರ ದೂರಸಂಪರ್ಕ ಇಲಾಖೆಯ ಒಂದು ಯೋಜನೆಯಾಗಿದ್ದು, ಕಳೆದು ಹೋದ ಮೊಬೈಲ್​ನ ಐಎಂಇಐ ಸಂಖ್ಯೆಯ ಸಹಾಯದಿಂದ ಅದನ್ನು ಪತ್ತೆ ಮಾಡಬಹುದಾಗಿದೆ. ಇ - ಸ್ಪಂದನದ ಮೂಲಕ ಸಾರ್ವಜನಿಕರು ತಮ್ಮ ದೂರು ಸಲ್ಲಿಸಬಹುದಾಗಿದ್ದು, ಶೀಘ್ರದಲ್ಲಿ ಅವುಗಳಿಗೆ ಸಮಾಧಾನ ಒದಗಿಸುವ ವ್ಯವಸ್ಥೆ ತರಲಾಗಿದೆ.

ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಿದ ಅವಳಿ ನಗರದ ಪೊಲೀಸರಿಗೆ ಅಭಿನಂದನೆ ಹೇಳಿರುವ ಜೋಶಿ, ಮೊಬೈಲ್ ಕಳೆದುಕೊಂಡ ಜನರು ಇ ಸ್ಪಂದನದ ಮೂಲಕ ದೂರು ಸಲ್ಲಿಸುವಂತೆ ಕರೆ ನೀಡಿದ್ದಾರೆ. CEIR ceir.gov.in ,02-8277952828 ಈ ಸಂಖ್ಯೆಗೆ "Hi" ಕಳುಹಿಸಿ ಸಾರ್ವಜನಿಕರು ದೂರು ದಾಖಲಿಸಬಹುದಾಗಿದೆ.

ರೈಲ್ವೇ ಸಿಬ್ಬಂದಿಗೆ ಸನ್ಮಾನ: ಇನ್ನೊಂದೆಡೆ ಕರ್ತವ್ಯದಲ್ಲಿ ಸಮಯ ಪ್ರಜ್ಞೆ ತೋರಿ ಅವಘಡ ತಪ್ಪಿಸಿದ ಮೂವರು ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ (ಏಪ್ರಿಲ್ 5-2023) ರೈಲ್ ಸೌಧದ ಕಛೇರಿಯಲ್ಲಿ ನಡೆದ ಸುರಕ್ಷತಾ ಸಭೆಯಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದರು.

ದಾವಣಗೆರೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿರುವ ಅನಿಲ್ ಕುಮಾರ್ ಸಿ.ಎಂ ಅವರು ಫೆಬ್ರವರಿ 12, 2023 ರಂದು ಕರ್ತವ್ಯದಲ್ಲಿದ್ದಾಗ ಗೂಡ್ಸ್ ರೈಲಿಗೆ ಸಿಗ್ನಲ್ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಬ್ರೇಕ್ ಬೈಂಡಿಂಗ್ ವೀಕ್ಷಿಸಿದ್ದರು. ತ್ವರಿತವಾಗಿ ಮಾಹಿತಿ ನೀಡಿದ ಪರಿಣಾಮ ಅಮರಾವತಿ ನಿಲ್ದಾಣದಲ್ಲಿ ರೈಲು ನಿಲ್ಲುವಂತೆ ಮಾಡುವ ಮೂಲಕ ಮುಂದಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದ ಭಾರಿ ಅನಾಹುತ ತಪ್ಪಿತ್ತು ಎಂಬುದು ತಿಳಿದುಬಂದಿದೆ.

ಕ್ಯಾಸಲ್ ರಾಕ್‌ನಲ್ಲಿ ಟೆಕ್ನಿಷಿಯನ್ ಆಗಿ ವಿಕಾಸ್ ಕುಮಾರ್ ಬರೋಡಿಯಾ ಅವರು ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಗೂಡ್ಸ್ ರೈಲು ತಪಾಸಣೆ ರೋಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ರೈಲಿನ ವ್ಯಾಗನ್‌ನಲ್ಲಿ ಕರ್ಕಶ ಶಬ್ದ ಕೇಳಿದ ತಕ್ಷಣ ರೈಲು ನಿಲ್ಲಿಸಲು ಸೂಚಿಸಿದ್ದರು. ಇದರ ಪರಿಣಾಮ ತಾಂತ್ರಿಕ ತಂಡವು ಅಗತ್ಯ ಪರೀಕ್ಷೆ ನಡೆಸಿ ಮುಂದಾಗುವ ಸಂಭವನೀಯ ಅವಘಡ ತಪ್ಪಿಸಿದ್ದರು.

ಇದನ್ನೂ ಓದಿ : ಸಮಯಪ್ರಜ್ಞೆ ತೋರಿ ಅವಘಡ ತಪ್ಪಿಸಿದ ಮೂವರು ರೈಲ್ವೇ ಸಿಬ್ಬಂದಿಗೆ ಸನ್ಮಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.