ಧಾರವಾಡ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಧಾರಾಕಾರ ಮಳೆಗೆ ಆಲೂಗಡ್ಡೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಮಳೆ ಇಲ್ಲದ ಕಾರಣ ತಾಲೂಕಿನ ಲಕಮಾಪುರ ಗ್ರಾಮದ ಗಿರೀಶ್ ಕಡ್ಡಿಕೊಪ್ಪ ಎಂಬ ರೈತ ಜಮೀನಿನಲ್ಲಿ ಆಲೂಗಡ್ಡೆ ತೆಗೆದಿಟ್ಟಿದ್ದರು. ಆದರೆ ಏಕಾಎಕಿ ಸುರಿದ ಮಳೆಯಿಂದಾಗಿ 6 ಎಕರೆ ಜಮೀನಿನಲ್ಲಿನ ಆಲೂಗಡ್ಡೆ ಹಳ್ಳದ ಪಾಲಾಗಿದೆ.
ರಭಸವಾಗಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಆಲೂಗಡ್ಡೆ ಕೊಚ್ಚಿಕೊಂಡು ಹೋಗಿದ್ದು, ರೈತ ಕಂಗಲಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ರೈತ ತನ್ನ ಗೋಳನ್ನು ಹೇಳಿಕೊಂಡಿರುವ ವಿಡಿಯೋ ಹರಿಬಿಟ್ಟಿದ್ದಾನೆ.