ಹುಬ್ಬಳ್ಳಿ: ಅಗತ್ಯ ವಸ್ತು ಖರೀದಿಸಲು ಎಟಿಎಮ್ಗೆ ಹಣ ತರಲು ಹೋದ ಯುವಕನಿಗೆ ಹಳೇ ಹುಬ್ಬಳ್ಳಿ ಪಿಎಸ್ಐ ಲಾಠಿಯಿಂದ ಥಳಿಸಿದ್ದಾರೆ ಎಂದು ಯುವಕನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪೋಲಿಸ್ ಇಲಾಖೆಗೆ ಅನಗತ್ಯ ಓಡಾಡುವ ಸಾರ್ವಜನಿಕರಿಗೆ ದಂಡ ಹಾಗೂ ತಿಳಿ ಹೇಳಬೇಕು ಎಂದು ಆದೇಶಿಸಿದೆ. ಆದರೆ, ಪಿಎಸ್ಐ ಸುಖಾನಂದ ಶಿಂಧೆ ಹಳೇ ಹುಬ್ಬಳ್ಳಿ ನಿವಾಸಿ ರೆಹಮತ್ ಉಲ್ಲಾ ಎಂಬಾತನಿಗೆ ಬೈಕ್ ನಿಲ್ಲಿಸಲಿಲ್ಲ ಎಂದು ಲಾಠಿಯಿಂದ ಹಿಗ್ಗಾ - ಮುಗ್ಗಾ ಥಳಿಸಿದ್ದಾರೆ.
ಇನ್ನೂ ಘಟನೆಯಲ್ಲಿ ಯುವಕನ ತಲೆಗೆ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವವಾಗಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿರುವ ಪಿಎಸ್ಐ ಸುಖಾನಂದ ಶಿಂಧೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
1000 ಅಲೋಪತಿ ಡಾಕ್ಟರ್ಗಳನ್ನ ಆಯುರ್ವೇದ ವೈದ್ಯರನ್ನಾಗಿ ಮಾಡುತ್ತೇವೆ: ಬಾಬಾ ರಾಮದೇವ್