ಧಾರವಾಡ: ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಶ್ರೀಗಂಧ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಶೀಗಿಗಟ್ಟಿ ತಾಂಡಾ ಹಾಗೂ ರಾಯಭಾಗ ತಾಲೂಕು ಕಣದಾಳ ಮೂಲದ ಪರಸಪ್ಪ ಭಜಂತ್ರಿ, ಮಾರುತಿ ಭಜಂತ್ರಿ, ಕಲ್ಲಪ್ಪ ಶಿಂಧೆ, ಮಹಾದೇವ ಮಾಂಗ, ರಾಜು ಭಜಂತ್ರಿ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಮೊಬೈಲ್, ಗೂಡ್ಸ್ ವಾಹನ, ಸ್ವಿಫ್ಟ್ ಕಾರು ಸೇರಿದಂತೆ 40 ಲಕ್ಷ ರೂ. ಮೌಲ್ಯದ 3 ಕ್ವಿಂಟಾಲ್ 70 ಕೆಜಿ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಶ್ರೀಗಂಧದ ಮರದ ತುಂಡುಗಳನ್ನು ಗೂಡ್ಸ್ ವಾಹನದ ತಳಭಾಗದಲ್ಲಿ ಯಾರಿಗೂ ತಿಳಿಯದಂತೆ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿಯಾಗಿದೆ.
ಧಾರವಾಡದಿಂದ ಬೆನ್ನತ್ತಿ ರಾಣೆಬೆನ್ನೂರು ತಾಲೂಕು ಚಳಗೇರಿ ಚೆಕ್ ಪೋಸ್ಟ್ ಬಳಿ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಬೆಂಗಳೂರಿಗೆ ಹೋಗುತ್ತಿದ್ದರು.