ETV Bharat / state

ಬೆಣ್ಣೆಹಳ್ಳದಲ್ಲಿ ಸ್ನಾನಕ್ಕೆ ಇಳಿದಾಗ ಫಿಟ್ಸ್ ಬಂದು ಯುವಕ ಸಾವು - ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ವ್ಯಕ್ತಿ ಧಾರವಾಡದಲ್ಲಿ ಸಾವು

ನವಲಗುಂದ ತಾಲೂಕಿನ ಯಮನೂರಿನಲ್ಲಿ‌ ಬೆಣ್ಣೆಹಳ್ಳದಲ್ಲಿ ಸ್ನಾನಕ್ಕೆ ಇಳಿದಾಗ ಫಿಟ್ಸ್ ಬಂದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

person-floated-in-in-water-at-bennehalla
ಬೆಣ್ಣೆಹಳ್ಳದಲ್ಲಿ ಸ್ನಾನಕ್ಕೆ ಇಳಿದಾಗ ಫಿಟ್ಸ್ ಬಂದು ವ್ಯಕ್ತಿ ನೀರುಪಾಲು
author img

By

Published : Jun 19, 2022, 4:52 PM IST

ಧಾರವಾಡ: ಸ್ನಾನಕ್ಕೆ ಬೆಣ್ಣೆಹಳ್ಳದಲ್ಲಿ ಇಳಿದಾಗ ಫಿಟ್ಸ್ ಬಂದು ಯುವಕಯೋರ್ವ ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ ಯಮನೂರಿನಲ್ಲಿ‌ ನಡೆದಿದೆ. ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ ವ್ಯಕ್ತಿ ಹಳ್ಳದಲ್ಲಿ ಇಳಿದಿದ್ದ ಎನ್ನಲಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ವಾಸಿಂ (22) ಮೃತ ವ್ಯಕ್ತಿಯಾಗಿದ್ದಾರೆ. ತಾಯಿ ಜೊತೆಗೆ ದುಡಿಯಲು ವಾಸಿಂ ಗೋವಾಕ್ಕೆ ಹೋಗಿದ್ದರು. ಗೋವಾದಿಂದ ಯಮನೂರ ಚಾಂಗದೇವ ದರ್ಶನಕ್ಕೆ ಕುಟುಂಬ ಬಂದಿತ್ತು. ಬೆಣ್ಣೆಹಳ್ಳಕ್ಕೆ ಸ್ನಾನ ಮಾಡಲು ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ದರ್ಶನಕ್ಕೂ ಮೊದಲು ಸ್ನಾನ ಮಾಡಲು ವಾಸೀಂ ಹಳ್ಳಕ್ಕೆ ಇಳಿದಿದ್ದರು. ಹಳ್ಳದಲ್ಲಿ ಸ್ವಲ್ಪ ದೂರ ಕೊಚ್ಚಿ ಹೋಗಿದ್ದು, ಬಳಿಕ ಕೆಸರಿನಲ್ಲಿ ಸಿಲುಕಿಕೊಂಡಿದ್ದ. ಮೃತದೇಹವನ್ನು ಪೊಲೀಸರು ನೀರಿನಿಂದ ಹೊರತೆಗೆದಿದ್ದಾರೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಕಿಮ್ಸ್‌ನಲ್ಲಿ ಮಗು ಕಳ್ಳತನ ನಾಟಕವಾಡಿದ ತಾಯಿ ಸೆರೆ; 14 ದಿನ ನ್ಯಾಯಾಂಗ ಬಂಧನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.