ETV Bharat / state

ಧಾರವಾಡ ಜಿಲ್ಲೆಯಲ್ಲಿ ಲೋಕಲ್​ ಫೈಟ್​ ಕೂಲ್​ ಕೂಲ್​...  31ಕ್ಕೆ ರಿಸಲ್ಟ್​​ - undefined

ಇಂದು ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದ್ದು, ಜಿಲ್ಲೆಯ ನವಲಗುಂದ ಪುರಸಭೆ, ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ಶಾಂತಿಯುತವಾಗಿ ಜರುಗಿತು. ಜಿಲ್ಲೆಯಲ್ಲಿ ಶೇ. 75 ಕ್ಕೂ ಹೆಚ್ಚು ಮತದಾನವಾಗಿದೆ.

dharwad district
author img

By

Published : May 29, 2019, 9:07 PM IST

ಧಾರವಾಡ: ಜಿಲ್ಲೆಯ ನವಲಗುಂದ ಪುರಸಭೆ, ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮೂರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೇ. 75 ಕ್ಕೂ ಹೆಚ್ಚು ಮತದಾನವಾಗಿದೆ.

ನವಲಗುಂದ ಪುರಸಭೆಯ 23 ವಾರ್ಡ್​ಗಳಿಗೆ ಜರುಗಿದ ಚುನಾವಣೆಯಲ್ಲಿ 87 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 19512 ಮತದಾರರ ಪೈಕಿ 14658 ಮತದಾರರು ಮತ ಚಲಾಯಿಸಿದ್ದು, ಶೇ.75.12 ರಷ್ಟು ಮತದಾನವಾಗಿದೆ.

ಶಾಂತಿಯುತವಾಗಿ ನಡೆದ ಲೋಕಲ್​ ಎಲೆಕ್ಷನ್

ಅಳ್ನಾವರ ಪಟ್ಟಣ ಪಂಚಾಯಿತಿಯ 18 ವಾರ್ಡ್​ಗಳಿಗೆ ಜರುಗಿದ ಚುನಾವಣೆಯಲ್ಲಿ 76 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 15249 ಮತದಾರರ ಪೈಕಿ 9918 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ.65.04 ರಷ್ಟು ಮತದಾನವಾಗಿದೆ.

dharwad district
ಶಾಂತಿಯುತವಾಗಿ ನಡೆದ ಲೋಕಲ್​ ಎಲೆಕ್ಷನ್

ಕಲಘಟಗಿ ಪಟ್ಟಣ ಪಂಚಾಯಿತಿಯ 17 ವಾರ್ಡ್​ಗಳ ಪೈಕಿ ವಾರ್ಡ ನಂ 16 ಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದ 16 ವಾರ್ಡ್​ಗಳಿಗೆ ಜರುಗಿದ ಚುನಾವಣೆಯಲ್ಲಿ 47 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 12919 ಮತದಾರರ ಪೈಕಿ 9494 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ. 77.87 ರಷ್ಟು ಮತದಾನವಾಗಿದೆ.

ಜಿಲ್ಲಾಧಿಕಾರಿಗಳ ಭೇಟಿ:
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಳ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 7ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಕಾರ್ಯ, ಮತಗಟ್ಟೆಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಅಳ್ನಾವರ ಚುನಾವಣಾಧಿಕಾರಿಯಾಗಿರುವ ಧಾರವಾಡ ತಹಶೀಲ್ದಾರ್​ ಪ್ರಕಾಶ್​ ಕುದರಿ ಹಾಗೂ ಅಳ್ನಾವರ ತಹಶೀಲ್ದಾರ್​ ಅಮರೇಶ ಪಮ್ಮಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಮೇ 31ರಂದು ಮತ ಎಣಿಕೆ:
ನವಲಗುಂದ ಪುರಸಭೆಗೆ ಜರುಗಿದ ಚುನಾವಣೆಯ ಮತ ಎಣಿಕೆಯು ನವಲಗುಂದ ಮಾಡೆಲ್ ಹೈಸ್ಕೂಲ್​ನಲ್ಲಿ, ಅಳ್ನಾವರ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಅಳ್ನಾವರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹಾಗೂ ಕಲಘಟಗಿ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಕಲಘಟಗಿ ತಹಶೀಲ್ದಾರ್​ ಕಚೇರಿಯಲ್ಲಿ ನಡೆಯಲಿವೆ. ಮೇ 31ರ ಮತ ಎಣಿಕೆ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

Intro:ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆ ಹಾಗೂ ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯತಿಗಳಿಗೆ ಇಂದು ಜರುಗಿದ ಚುನಾವಣೆ ಶಾಂತಿಯುತವಾಗಿ ನಡೆಯಿತು. ಮೂರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೇ. 75 ಕ್ಕೂ ಹೆಚ್ಚು ಮತದಾನವಾಗಿದೆ.

ನವಲಗುಂದ ಪುರಸಭೆಯ 23 ವಾರ್ಡಗಳಿಗೆ ಜರುಗಿದ ಚುನಾವಣೆಯಲ್ಲಿ 87 ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಒಟ್ಟು 19512 ಮತದಾರರ ಪೈಕಿ 14658 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ.75.12 ರಷ್ಟು ಮತದಾನವಾಗಿದೆ.

ಅಳ್ನಾವರ ಪಟ್ಟಣ ಪಂಚಾಯತಿಯ 18 ವಾರ್ಡಗಳಿಗೆ ಜರುಗಿದ ಚುನಾವಣೆಯಲ್ಲಿ 76 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 15249 ಮತದಾರ ರ ಪೈಕಿ 9918 ಮತದಾರರು ತಮ್ಮ ಮತ ಚಲಾಯಿಸಿದ್ದು ಶೇ.65.04 ರಷ್ಟು ಮತದಾನವಾಗಿದೆ.Body:ಕಲಘಟಗಿ ಪಟ್ಟಣ ಪಂಚಾಯತಿಯ 17 ವಾರ್ಡಗಳ ಪೈಕಿ ವಾರ್ಡ ನಂ 16 ಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದ 16 ವಾರ್ಡಗಳಿಗೆ ಜರುಗಿದ ಚುನಾವಣೆಯಲ್ಲಿ 47 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 12919 ಮತದಾರರ ಪೈಕಿ 9494 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ. 77.87 ರಷ್ಟು ಮತದಾನವಾಗಿದೆ.

ಜಿಲ್ಲಾಧಿಕಾರಿಗಳ ಭೇಟಿ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಳ್ನಾವರ ಪಟ್ಟಣ ಪಂಚಾಯತ ವ್ಯಾಪ್ತಿಯ ಏಳಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಕಾರ್ಯ, ಮತಗಟ್ಟೆಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಅಳ್ನಾವರ ಚುನಾವಣಾಧಿಕಾರಿಯಾಗಿರುವ ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ಹಾಗೂ ಅಳ್ನಾವರ ತಹಶೀಲ್ದಾರ ಅಮರೇಶ ಪಮ್ಮಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಮೇ 31ರಂದು ಮತ ಎಣಿಕೆ: ನವಲಗುಂದ ಪುರಸಭೆಗೆ ಜರುಗಿದ ಚುನಾವಣೆಯ ಮತ ಎಣಿಕೆಯು ನವಲಗುಂದ ಮಾಡೆಲ್ ಹೈಸ್ಕೂಲ್, ಅಳ್ನಾವರ ಪಟ್ಟಣ ಪಂಚಾಯತಿ ಚುನಾವಣೆಯ ಮತ ಎಣಿಕೆಯು ಅಳ್ನಾವರ ಪಟ್ಟಣ ಪಂಚಾಯತ ಕಚೇರಿಯಲ್ಲಿ ಹಾಗೂ ಕಲಘಟಗಿ ಪಟ್ಟಣ ಪಂಚಾಯತ ಚುನಾವಣೆಯ ಮತ ಎಣಿಕೆಯು ಕಲಘಟಗಿ ತಹಶೀಲ್ದಾರ ಕಚೇರಿಯಲ್ಲಿ ನಡೆಯಲಿವೆ.
ಮೇ 31ರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ತಿಳಿಸಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.