ETV Bharat / state

ಸಲೂನ್​​​ಗಳಿಗೆ ಸ್ವಂತ ಹಣದಲ್ಲಿ ಮಾಸ್ಕ್​​​, ಸ್ಯಾನಿಟೈಸರ್​​​​ ವಿತರಿಸುತ್ತಿರುವ ಪಾಲಿಕೆ ಸಿಬ್ಬಂದಿ

ಹುಬ್ಬಳ್ಳಿ-ಧಾರವಾಡದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪಾಲಿಕೆ ಸಿಬ್ಬಂದಿ ಮುಂದಾಗಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಸಲೂನ್​​ ಅಂಗಡಿಗಳಿಗೆ ಮಾಸ್ಕ್​​​, ಸ್ಯಾನಿಟೈಸರ್ ಮುಂತಾದ ಸಲಕರಣೆ ನೀಡಿ ನೆರವಾಗುವ ಕಾರ್ಯ ಮಾಡಿದ್ದಾರೆ.

Palike staff who provide covid protection items for salon from his own money
ಸಲೂನ್​​​ಗಳಿಗೆ ಸ್ವಂತ ಹಣದಲ್ಲಿ ಮಾಸ್ಕ್​​​, ಸ್ಯಾನಿಟೈಸರ್​​​​ ವಿತರಿಸುತ್ತಿರುವ ಪಾಲಿಕೆ ಸಿಬ್ಬಂದಿ
author img

By

Published : Jul 11, 2020, 7:42 PM IST

ಧಾರವಾಡ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಾಗೃತಿ ಕೆಲಸಗಳು ನಡೆಯುತ್ತಿವೆ. ಇದೀಗ ಹುಬ್ಬಳ್ಳಿ-ಧಾರವಾಡ ಪಾಲಿಕೆ ಸಿಬ್ಬಂದಿಯೊಬ್ಬರು ತಾವು ಕೆಲಸ ನಿರ್ವಹಿಸುವ ವ್ಯಾಪ್ತಿಯ ಸಲೂನ್​​​​ ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸಲೂನ್​​​ಗಳಿಗೆ ಸ್ವಂತ ಹಣದಲ್ಲಿ ಮಾಸ್ಕ್​​​, ಸ್ಯಾನಿಟೈಸರ್​​​​ ವಿತರಿಸುತ್ತಿರುವ ಪಾಲಿಕೆ ಸಿಬ್ಬಂದಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನದ ಚಾಲಕ ಮಲ್ಲಪ್ಪ ಯಮೋಜಿ ಇದೀಗ ಕೊರೊನಾ ಜಾಗೃತಿ ಕೆಲಸಗಳನ್ನು ಮಾಡಿ, ಕಲ್ಯಾಣನಗರದಲ್ಲಿ ಮನೆ ಮಾತಾಗಿದ್ದಾರೆ.

ಇದೀಗ ಕೊರೊನಾ ಆತಂಕ ಜಿಲ್ಲೆಯಲ್ಲಿ ಮನೆಮಾಡಿದೆ. ಇದರಿಂದ ತಾವು ಕೆಲಸ ಮಾಡುವ ವ್ಯಾಪ್ತಿಯಲ್ಲಿ ಸಲೂನ್​​ ಅಂಗಡಿಗಳಿಗೆ ಮಾಸ್ಕ್​​​​, ಸ್ಯಾನಿಟೈಸರ್ ಹಾಗೂ ಗ್ಲೌಸ್​​​​ಗಳನ್ನು ಸ್ವಂತ ಖರ್ಚಿನಲ್ಲಿ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಲೂನ್​​​ ಅಂಗಡಿಗಳ ಸಿಬ್ಬಂದಿಗೆ ಮನವಿ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.