ETV Bharat / state

ಧಾರವಾಡ: ಮಹಾಮಳೆಗೆ ನೆಲಕಚ್ಚಿದ ಬೆಳೆ, ಸಂಕಷ್ಟದಲ್ಲಿ ರೈತ

ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನೀರು ಪಾಲಾಗಿವೆ. ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದು, ಅದರಲ್ಲಿ 459 ಹೆಕ್ಟೇರ್​ ಬೆಳೆ ಹಾಳಾಗಿದೆ ಎನ್ನಲಾಗಿದೆ.

paddy-crop-loss
ಭತ್ತ ಹಾನಿಗೊಳಗಾಗಿರುವುದು
author img

By

Published : Nov 18, 2021, 9:20 PM IST

ಧಾರವಾಡ: ಕಳೆದ ಎರಡು ದಿನಗಳಿಂದ ‌ಜಿಲ್ಲೆಯಲ್ಲಿ‌ ಸುರಿದ ಮಳೆ (Heavy rain in Dharawada) ಬಹಳಷ್ಟು ಅವಾಂತರ ಸೃಷ್ಟಿಸಿದೆ.‌ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ (Devara Hubballi Village) ಭತ್ತ, ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿವೆ. ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದು, ಅದರಲ್ಲಿ 459 ಹೆಕ್ಟೇರ್ ಭತ್ತ ಹಾಳಾಗಿದೆ ಎನ್ನಲಾಗಿದೆ.

ನೀರಿನ ರಭಸಕ್ಕೆ ಭತ್ತ ಜಮೀನಿನಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ರೈತರು ಕಟಾವು ಮಾಡಿದ್ದ ಭತ್ತವನ್ನು ಎತ್ತಿಕೊಂಡು ಬದುವಿನಲ್ಲಿ ಹಾಕುತ್ತಿದ್ದಾರೆ. ಪರಿಣಾಮ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

'ಜಿಲ್ಲೆಯಲ್ಲಿ 2 ದಿನಗಳಿಂದ ಸುರಿದ ಮಳೆಯಿಂದಾಗಿ ಸಾಕಷ್ಟು ಅನಾನುಕೂಲವಾಗಿದೆ. ಗುಡ್ಡದ ನೀರೆಲ್ಲಾ ಗದ್ದೆಗೆ ಬಂದಿದೆ. ಪರಿಣಾಮ ವರ್ಷದ ಬೆಳೆಯಾದ ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ದಯವಿಟ್ಟು ಸರ್ಕಾರ ಇತ್ತ ಗಮನಹರಿಸಿ ರೈತರಿಗೆ ನೆರವಾಗಬೇಕು' ಎಂದು ದೇವರ ಹುಬ್ಬಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತವನಪ್ಪ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ: ಬೆಂಗಳೂರು ಗ್ರಾಮಾಂತರ ಶಾಲೆಗಳಿಗೆ 2 ದಿನ ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.