ಧಾರವಾಡ : ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. 29 ಸ್ಥಾನ ಇದ್ದಾಗಲೇ ನಮಗೆ ಸಿಗಲಿಲ್ಲ. ಈಗ ಉಳಿದಿರುವ ನಾಲ್ಕರಲ್ಲಿ ಆಸೆ ಪಡುವುದು ತಪ್ಪು ಎಂದು ಶಾಸಕ ರಾಜುಗೌಡ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಪಟ್ಟಿದ್ದು ನಿಜ. ಆದರೆ, ಆಗಲೇ ಸಿಗಲಿಲ್ಲ. ಹೀಗಿರುವಾಗ ನಾಲ್ವರಲ್ಲಿ ಆಸೆ ಪಡುವುದು ಸರಿಯಲ್ಲ. ಮುಂದೆ ಪಕ್ಷ ಗುರುತಿಸಿ ಕೊಡುವವರೆಗೂ ಕಾಯುವೆ ಎಂದರು.
ನಮ್ಮದು ಸಮ್ಮಿಶ್ರ ಸರ್ಕಾರ ಇದ್ದ ಹಾಗೆ. ಸಂಪೂರ್ಣವಾಗಿ 113 ಸ್ಥಾನ ಮೊದಲೇ ಬಂದಿದ್ದರೆ ನಾವು ಮಂತ್ರಿ ಆಗುತ್ತಿದ್ದೆವು. ಆದರೆ, ನಮಗೆ 104-105ಕ್ಕೆ ಸ್ಥಾನಗಳು ಸ್ಥಗಿತ ಆಗಿತ್ತು. ಹೀಗಾಗಿ, ಒಂದು ರೀತಿ ಸಮ್ಮಿಶ್ರ ಸರ್ಕಾರವಾಗಿದೆ. ಬಂದವರಿಗೆಲ್ಲ ಸಚಿವ ಸ್ಥಾನ ಕೊಡಬೇಕಾಗಿದೆ. ರಾಮುಲು ಅವರಿಗೆ ನಮ್ಮ ಸಮಾಜದ ಪರ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿಯವರಿಗೆ ಕೊಡಬೇಕಿತ್ತು. ಆದರೆ, ಅವರ ಬದಲಿ ಯಾರಿಗೂ ಸಿಕ್ಕಿಲ್ಲ. 17 ಜನ ಬಂದಿದ್ದಕ್ಕೆ ನಮ್ಮ ಸರ್ಕಾರ ಆಗಿದೆ. ಜೆಡಿಎಸ್ 3, ಕಾಂಗ್ರೆಸ್‌ನಿಂದ 14 ಜನ ಬಂದಿದ್ದಾರೆ. ನಾನು ಹೇಳಿದ್ದು ಸಮ್ಮಿಶ್ರ ಸರ್ಕಾರದ ರೀತಿ ಅಂತಾ ಮಾತ್ರ ಹೇಳುತ್ತಿದ್ದೇನೆ. ಸಮ್ಮಿಶ್ರ ಸರ್ಕಾರ ಅಂತಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ನಷ್ಟದ ಸುಳಿಯಲ್ಲಿ BMTC: ಶಾಂತಿನಗರ ಟಿಟಿಎಂಸಿ ಕಟ್ಟಡ ಬ್ಯಾಂಕ್ನಲ್ಲಿ ಅಡ!