ETV Bharat / state

ಕೊರೊನಾ ಕಡಿಮೆಯಾದ ಮೇಲೆ ಮೇಕೆದಾಟು ಪಾದಯಾತ್ರೆ ಮುಂದುವರೆಯುತ್ತೆ: ಸಿದ್ದರಾಮಯ್ಯ - ಧಾರವಾಡದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಮಹಾದಾಯಿ ಪಾದಯಾತ್ರೆ ವಿಚಾರವಾಗಿ ‌ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಪಾದಯಾತ್ರೆ ಅರ್ಧ ಆಗಿದೆ. ಕೊರೊನಾ ಹೆಚ್ಚಳ‌ ಹಿನ್ನೆಲೆ ಪಾದಯಾತ್ರೆ ನಿಲ್ಲಿಸಿದ್ದೇವೆ.‌ ಕಾನೂನಿಗೆ ಗೌರವ‌ ಕೊಟ್ಟು ಜನರ ಹಿತದೃಷ್ಟಿಯಿಂದ ನಿಲ್ಲಿಸಿದ್ದೇವೆ. ಕೊರೊನಾ ಕಡಿಮೆಯಾದ ಮೇಲೆ ಪಾದಯಾತ್ರೆ ಮುಂದುವರೆಯುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
author img

By

Published : Jan 23, 2022, 11:04 PM IST

ಧಾರವಾಡ: ಕುಮಾರಸ್ವಾಮಿ ಟ್ವೀಟ್​​​ನಲ್ಲಿ‌ ಸಿದ್ದರಾಮಯ್ಯನವರು ಸಂವಿಧಾನ ಪಂಡಿತರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಸಂವಿಧಾನ ಓದಿದ್ದೇನೆ. ಕುಮಾರಸ್ವಾಮಿ ಓದಿದ್ದಾರಾ, ನಾನು ಸಂವಿಧಾನದ ವಿದ್ಯಾರ್ಥಿ, ‌ಕುಮಾರಸ್ವಾಮಿ ಏನು ಓದಿದ್ದಾನೆ ಎಂದು ಏಕವಚನದಲ್ಲೇ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮಾಜಿ ಪ್ರಧಾನಿ ದೇವೇಗೌಡ ಸೇರಿ ಜೆಡಿಎಸ್ ಪಕ್ಷ ಕಟ್ಟಿದವರು. 1999ರಲ್ಲಿ ಜೆಡಿಯು ಜೆಡಿಎಸ್ ಆದಾಗ ರಾಜ್ಯಾಧ್ಯಕ್ಷ ಆದೆ. 6 ವರ್ಷಗಳ ಕಾಲ‌ ನಾನು ಅಧ್ಯಕ್ಷನಾಗಿದ್ದೆ. ನನ್ನನ್ನ ಪಕ್ಷದಿಂದ ತೆಗೆದು ಹಾಕಿದರು, ನಾನು ಪಕ್ಷ ಬಿಡಲಿಲ್ಲ. ನನ್ನನ್ನ ದೇವೇಗೌಡರೇ ತೆಗೆದು ಹಾಕಿದರು ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಆಗ ಕಾಂಗ್ರೆಸ್​​ನವರು ಕರೆದರು ಅಲ್ಲಿಗೆ ಹೋದೆ. 2008ರಲ್ಲಿ ಚುನಾವಣೆ ನಡೆದಾಗ ಜೆಡಿಎಸ್​​ನವರು ಎಷ್ಟು ಗೆದ್ದರು. 59 ಇದ್ದವರು ನಾವು ಬಿಟ್ಟ ಮೇಲೆ 28 ಸ್ಥಾನ ಗೆದ್ದರು. ನಾವು ಬಿಟ್ಟ ಮೇಲೆ ಜೆಡಿಎಸ್ ಜಾತ್ಯಾತಿತ ಪಕ್ಷವಾಗಿ ಉಳಿದಿಲ್ಲ. ನನ್ನ ಜೊತೆ ಆಗ ಸಿ ಎಂ ಇಬ್ರಾಹಿಂ, ಸತೀಶ್​​ ಜಾರಕಿಹೊಳಿ ಸೇರಿ ಬಹಳ ಜನ ಬಂದರು. ಈಗ ಅದು ಕುಟುಂಬದ ಪಾರ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಹಾದಾಯಿ ಪಾದಯಾತ್ರೆ ವಿಚಾರವಾಗಿ ‌ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಪಾದಯಾತ್ರೆ ಅರ್ಧ ಆಗಿದೆ. ಕೊರೊನಾ ಹೆಚ್ಚಳ‌ ಹಿನ್ನೆಲೆ ಪಾದಯಾತ್ರೆ ನಿಲ್ಲಿಸಿದ್ದೇವೆ.‌ ಕಾನೂನಿಗೆ ಗೌರವ‌ ಕೊಟ್ಟು ಜನರ ಹಿತದೃಷ್ಟಿಯಿಂದ ನಿಲ್ಲಿಸಿದ್ದೇವೆ. ಕೊರೊನಾ ಕಡಿಮೆಯಾದ ಮೇಲೆ ಪಾದಯಾತ್ರೆ ಮುಂದುವರೆಯುತ್ತೆ ಎಂದರು.

ಅವರು ಕರ್ಫ್ಯೂ ಹಾಕಿದ್ದೇ ನಮ್ಮ ಪಾದಯಾತ್ರೆ ನಿಲ್ಲಿಸಲು, ಪಾದಯಾತ್ರೆ ಮಾಡಬಾರದು ಎನ್ನುವುದೇ ಅವರ ಉದ್ದೇಶ. ಸರ್ಕಾರದಲ್ಲಿ ಕಾಲ‌ಕಾಲಕ್ಕೆ ದುಡ್ಡು ಬಿಡುಗಡೆ ಆಗಲ್ಲ. ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇವರ ಹತ್ತಿರ ದುಡ್ಡಿಲ್ಲ ಹಾಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೇಲಸಗಳು ನಡೆಯುತ್ತಿಲ್ಲ. ಸಾಲದ‌ ಮೇಲೆ ಎಷ್ಟು ದಿನ ಸರ್ಕಾರ ನಡೆಸಬಹುದು, ಎದ್ವಾ ತದ್ವಾ ಸಾಲಾ ಮಾಡೊಕೆ ಆಗುತ್ತಾ. ಸಾಲಾ‌ ಮಾಡಿ ಹೋಳಿಗೆ ತಿನ್ನೊಕೆ ಆಗುತ್ತಾ ಎಂದು‌ ಸರ್ಕಾರದ ವಿರುದ್ಧ ವಾಗ್ದಾಳಿ‌ ನಡೆಸಿದರು.

ಕೊರೊನಾ ಬಂದಿದೆ‌ ಎಂದು ಹೇಳುತ್ತಾರೆ. ಕೊರೊನಾಗೆ ಖರ್ಚು ಮಾಡಿದ್ದು 5 ರಿಂದ 6 ಸಾವಿರ ಕೋಟಿ. ಅವರ ಸರ್ಕಾರ ಎಷ್ಟು‌ ಕಮಿಷನ್ ಪಡೆಯುತ್ತೆ ಎಂದು ಮೋದಿ ಹೇಳಬೇಕು. ಗುತ್ತಿಗೆದಾರರು ಅವರಿಗೆ ಪತ್ರ ಬರೆದಿದ್ದಾರೆ. ಈಗ ಅವರು ಹೇಳಬೇಕು, ನಾ ಖಾವುಂಗಾ, ನಾ ಖಾನೆ‌ದುಂಗಾ ಅಂತಿದ್ರು, ಈಗ ಹೇಳಲಿ ಈ ತತ್ವ ಎಂದರು.

ಮೇಕೆದಾಟುಗಾಗಿ ಸಿಎಂ ಬೊಮ್ಮಾಯಿ ಸರ್ವಪಕ್ಷ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನೋಟಿಸ್ ಬಂದ ಮೇಲೆ ಸಭೆಗೆ ಹೋಗಬೇಕೊ ಬೇಡವೋ ಎಂಬ ತಿರ್ಮಾನ ಮಾಡುತ್ತೇವೆ. ಮೇಕೆದಾಟು ಪ್ರಾಜೆಕ್ಟ್ ಆರಂಭ‌ ಮಾಡಿದ್ದ ನಾವು‌, ಡಿಪಿಆರ್ ಮಾಡಿದ್ದು, ಸಿಪಿಸಿ ಕೊಟ್ಟಿದ್ದು ನಮ್ಮ ಕಾಲದಲ್ಲಿ.

ಇವತ್ತು ಅದು ಪೆಂಡಿಂಗ್ ಇರುವುದು ಅರಣ್ಯ ಹಾಗೂ ಪರಿಸರದ ಅನುಮತಿ ಸಿಗದೇ ಇರುವುದಕ್ಕೆ. ಅದನ್ನ ಈ ಸರ್ಕಾರ ಮಾಡಿಲ್ಲ, ಇವರು ಸರ್ಕಾರದಲ್ಲಿ ಇದಾರೆ.‌ ಎರಡೂ ಕಡೆ ಇವರ ಸರ್ಕಾರನೇ ಇದೆ, ಇವರು ಡಬಲ್ ಇಂಜನ್ ಸರ್ಕಾರ ಅಂತಾರೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ತೊಡಕು ಇಲ್ಲ, ತಮಿಳುನಾಡಿಗೆ ಅಡ್ಡಿ ಪಡಿಸಲು ರೈಟ್ ಸಹ ಇಲ್ಲ ಎಂದರು.

ಪರಿಸರ ಇಲಾಖೆ ಕ್ಲಿಯರೆನ್ಸ್ ಕೊಟ್ಟರೆ ಕೆಲಸ ಆರಂಭ ಮಾಡಬಹುದು. ಇವರು ಅಲ್ಲಿ ಗಟ್ಟಿಯಾಗಿ ಕೇಳಿ ತಗೊಂಡಿಲ್ಲ, ಅವರು ಕೊಟ್ಟಿಲ್ಲ ಎಂದು ಕೇಂದ್ರ ಸಚಿವರು ರಾಜಕೀಯ ಮಾಡುತ್ತಿದ್ದಾರೆ‌. ತಮಿಳುನಾಡಿನಲ್ಲಿ ಅವರ ಶಕ್ತಿ ವೃದ್ಧಿ ಮಾಡಿಕೊಳ್ಳಲು ಕೊಡ್ತಾ ಇಲ್ಲ. ಇವರು ಬಾಯಿ‌ ಮುಚಕೊಂಡು ಸುಮ್ಮನಿದ್ದಾರೆ.

ಇದು ಕುಡಿಯುವ‌ ನೀರಿನ ಪ್ರಾಜೆಕ್ಟ್, ಸುಪ್ರಿಂ‌ ಕೋರ್ಟ್​ನವರು ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ಎಂದಿದ್ದಾರೆ. ಯಾಕೆ ಇವರು ಅರಣ್ಯ ಕ್ಲಿಯರೆನ್ಸ್ ವಿಳಂಬ ಮಾಡುತ್ತಿದ್ದಾರೆ‌. 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು, ಕೈಗಾರಿಕಾ ಬೆಳವಣಿಗೆಗೆ ಸಹಕಾರ ಎಂಬುದು ನಮ್ಮ ವಾದ. ಇದರಿಂದ ಬೆಂಗಳೂರು ಸುತ್ತಮುತ್ತ, ಕೋಲಾರ, ರಾಮನಗರ ಸೇರಿ ಹಲವು ಜಿಲ್ಲೆಗಳಿಗೆ ನೀರು ಸಿಗುತ್ತೆ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.