ETV Bharat / state

ಒಂದು ದೇಶ ಒಂದು ಚುನಾವಣೆಯಾದರೆ ಒಳ್ಳೆಯದು: ಆದರೆ ಅದು ಸಾಧ್ಯವಿಲ್ಲ - ಜಗದೀಶ್ ಶೆಟ್ಟರ್

author img

By ETV Bharat Karnataka Team

Published : Sep 7, 2023, 6:15 PM IST

Jagadish shettar Statement : ಬಿಜೆಪಿಗೆ ವಿರೋಧ ಪಕ್ಷಗಳ ಘಟಬಂಧನ ಒಗ್ಗಟ್ಟಿನ ಬಗ್ಗೆ ಭಯ ಹುಟ್ಟಿದೆ. ಅದಕ್ಕೆ ಇಂಡಿಯಾ ಹೆಸರು ಬದಲಿಸಲು ಹೊರಟಿದ್ದಾರೆ ಎಂದು ಜಗದೀಶ್​ ಶೆಟ್ಟರ್​ ಟೀಕಿಸಿದ್ದಾರೆ.

Former CM Jagadish Shettar
ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ಒಂದು ದೇಶ ಒಂದು ಚುನಾವಣೆ ನಡೆದರೇ ಒಳ್ಳೆಯದು. ಆದರೆ, ಭಾರತ ವಿಭಿನ್ನ ಸಂಸ್ಕೃತಿಯ ದೇಶ. ಹೀಗಾಗಿ ಇದು ಇಂಪ್ರ್ಯಾಕ್ಟಿಕಲ್ ಆಗಿದೆ ಎಂದು ಮಾಜಿ ಸಿಎಂ ಹಾಗೂ ವಿಪ ಸದಸ್ಯ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆಯೇ ಚುನಾವಣೆ ಆಗಬೇಕೆಂದರೇ ಸದ್ಯದ ರಾಜ್ಯ ಸರ್ಕಾರವನ್ನು ವಿಸರ್ಜಿಸಿಸಬೇಕಾ. ಹಾಗಾಗಿ ರಾಷ್ಟ್ರದಲ್ಲಿ ಒಂದು ದೇಶ ಒಂದು ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದರು.

ಇಂಡಿಯಾ ಭಾರತ ನಾಮಕರಣ ವಿಚಾರವಾಗಿ ಮಾತನಾಡಿ, ಭಾರತ ಎನ್ನುವುದು ಬಿಜೆಪಿಯವರಿಗೆ ಈಗ್ಯಾಕೆ ನೆನಪಾಯ್ತು. ಇಂಡಿಯಾ ವಿದೇಶದ್ದು ಎಂದು ಈಗ ಜ್ಞಾನೋದಯ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ಇದು ಎರಡನೇಯ ಅವಧಿ. ಈಗ ಹೊಸದಾಗಿ ಪ್ರೆಸಿಡೆಂಟ್ ಆಫ್ ಇಂಡಿಯಾ ಶುರುವಾಗಿದೆ. ನಾವೆಲ್ಲರೂ ಭಾರತೀಯರು ಅಂತಾನೇ ಹೇಳ್ತೀವಿ ಎಂದರು.

ಮೊನ್ನೆ ಜಿ20 ಶೃಂಗಸಭೆಯ ನಿಮಿತ್ತ ರಾಷ್ಟ್ರಪತಿ ಆಯೋಜಿಸಿದ್ದ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಪ್ರೆಸೆಡಿಂಟ್ ಆಫ್​ ಭಾರತ ಎಂದು ಬರೆದಿತ್ತು. ಇವಾಗ ಯಾಕೆ ಭಾರತ ನೆನಪಾಯ್ತು. ಇವತ್ತು ಹೊಸದಾಗಿ ಯಾಕೆ ಇದು ಶುರು ಆಯ್ತು. ನನ್ನ ಅಬ್ಜಕ್ಷನ್ ಏನೂ ಇಲ್ಲ, ಆದರೆ ನಾವೆಲ್ಲ ಭಾರತೀಯರು. ವೈಯಕ್ತಿಕವಾಗಿ ನಾನು ಭಾರತ ಎನ್ನುವುದನ್ನು ಸ್ವಾಗತ ಮಾಡುತ್ತೇನೆ. ಹೊಸದಾಗಿ ಡಿಬೇಟ್ ಶರು ಮಾಡಿದ್ದೇ ಬಿಜೆಪಿ ಸರ್ಕಾರ. ಇದಕ್ಕೆಲ್ಲ ಕಾರಣ ರಾಜಕಾರಣ. ವಿಪಕ್ಷಗಳು ಇಂಡಿಯಾ ಎನ್ನುವ ಹೆಸರು ಇಟ್ಟುಕೊಂಡಿದ್ದರಿಂದ 'ಇಂಡಿಯಾ' ಹೆಸರಿಗೆ ಕೇಂದ್ರ ಸರ್ಕಾರ ಹೆದರಿದೆ ಅನಿಸುತ್ತೆ ಎಂದರು.

ಇಂಡಿಯಾ ಡಿಬೇಟ್ ಶುರು ಮಾಡಿದ್ದು ಎನ್‌ಡಿಎ. ಇಂಡಿಯಾ ಘಟಬಂಧನದ ಒಗ್ಗಟ್ಟು ನೋಡಿ ಬಿಜೆಪಿಯವರು ಭಯಗೊಂಡಿದ್ದಾರೆ. ಇಂಡಿಯಾ ಪದ ಪ್ರಯೋಗ ಜಾಸ್ತಿ ಆದರೆ ವಿಪಕ್ಷಗಳಿಗೆ ಪ್ರಚಾರ ಸಿಗುತ್ತೆ ಎನ್ನುವ ಕಾರಣಕ್ಕೆ ಭಾರತ ಹೆಸರು ಪ್ರಸ್ತಾಪವಾಗಿದೆ. ಇಂಡಿಯಾ ಹೆಸರು ಜನಪ್ರಿಯತೆ ಪಡೆಯುತ್ತಿದೆ ಎಂದು ಗೊತ್ತಾಗಿ ಹೆಸರು ಬದಲಾಯಿಸಲು ಹೊರಟಿದ್ದಾರೆ. ಮೋದಿಯವರಿಗೆ ಒಂಬತ್ತು ವರ್ಷದ ಮೇಲೆ ಭಾರತ ನೆನಪಾಗಿದೆ. ಕೇವಲ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಹರಿಹಾಯ್ದರು.

ಉದಯನಿಧಿ ಹೇಳಿಕೆಗೆ ನೋ ಕಮೆಂಟ್​ ಎಂದ ಶೆಟ್ಟರ್​: ಸನಾತನ ಧರ್ಮದ ವಿಚಾರವಾಗಿ ಮಾತನಾಡಿ, ಭಾರತ ದೇಶದಲ್ಲಿರುವ ನಾವೆಲ್ಲಾ ಹಿಂದೂಗಳು. ನಾವೆಲ್ಲ ಹಿರಿಯರ ಮಾತಂತೆ ಎಲ್ಲಾ ಹಬ್ಬ ಹರಿದಿನಗಳನ್ನು ಮಾಡುತ್ತಿದ್ದೇವೆ. ಉದಯ ನಿಧಿ ಹೇಳಿಕೆ ವೈಯಕ್ತಿಕವಾದದ್ದು. ಅದರ ಬಗ್ಗೆ ಕಾಮೆಂಟ್‌ ಮಾಡಲ್ಲ. ಸನಾತನ ವಿಚಾರವನ್ನು ಗಟ್ಟಿಯಾಗಿ ಮಾತಾಡಲು ಮೋದಿಯವರೇ ಹೇಳಿದ್ದಾರೆ. ಹತ್ತು ವರ್ಷ ಸರ್ಕಾರ ಮಾಡಿದಾಗ ನಮ್ಮ ಕೆಲಸದ ಬಗ್ಗೆ ಹೇಳಬೇಕು. ಕೆಲಸ ಮಾಡದೇ ಇದ್ದಾಗ ಭಾವನಾತ್ಮಕ ವಿಷಯ ಮುನ್ನೆಲೆಗೆ ಬರುತ್ತೆ ಎಂದರು.

ಮೋದಿ ಅವರು ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳ ದಿನದಿಂದ ಹೇಳುತ್ತಿದ್ದಾರೆ. ಒಂದೇ ಚುನಾವಣೆ ಒಳ್ಳೆಯದು. ಹಿಂದೆ ವಿಧಾನಸಭೆ ಲೋಕಸಭೆ ಚುನಾವಣೆ ಒಂದೇ ಸಮಯದಲ್ಲಿ ನಡೆದಿವೆ. ಮೇಯಲ್ಲಿ ಲೋಕಸಭೆ ಚುನಾವಣೆ ನಡಿಬೇಕು‌. ಒಂದೇ ಕಾಲಕ್ಕೆ ಚುನಾವಣೆ ಅಂದ್ರೆ ಕೆಲ ರಾಜ್ಯಗಳ ಚುನಾವಣೆ ಮುಂದೆ ಹಾಕಬೇಕು. ಇದೀಗ ನಾಲ್ಕೈದು ರಾಜ್ಯಗಳ ಚುನಾವಣೆ ಇದೆ. ಕರ್ನಾಟಕದಲ್ಲಿ ಮೊನ್ನೆ ಚುನಾವಣೆ ಆಗಿದೆ. ನಮ್ಮ ಸರ್ಕಾರ ವಿಸರ್ಜನೆ ಮಾಡ್ತೀರಾ, ಇದನ್ನು ಯಾರು ಒಪ್ಪುತ್ತಾರೆ ಎಂದರು.

ಸದ್ಯ ಬಿಜೆಪಿಯಲ್ಲಿ ಹೇಳುವವರು ಕೇಳುವವರು ಇಲ್ಲವಾಗಿದೆ. ಒಳಗೆ ಕುದಿಯುತ್ತಿದೆ, ಬಹಳ ಬೇಗುದಿಯಿದೆ. ನಿಮಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ನನಗೆ ಬಹಳ ಮುಖಂಡರು ಹೇಳುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಜಗದೀಶ ಶೆಟ್ಟರ್ ಬಕೆಟ್ ರಾಜಕಾರಣಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಯಿಸಿ, ಈ ಬಗ್ಗೆ ನಾನು ಮಾತಾಡಲ್ಲ. ಈಶ್ವರಪ್ಪ ಅವರ ವ್ಯಕ್ತಿತ್ವ ಹಾಗಿದೆ. ಅದಕ್ಕೆ ಹಾಗೆ ಮಾತನಾಡಿದ್ದಾರೆ. ನನ್ನ‌ನ್ನು ಒತ್ತಾಯ ಪೂರ್ವಕವಾಗಿ ಬಿಜೆಪಿಯಿಂದ ಹೊರಗೆ ಹಾಕಿದ್ರು. ಈಶ್ವರಪ್ಪ ಅವರ ಮಟ್ಟಕ್ಕೆ ನಾನು ಇಳಿಯಲ್ಲ. ಪ್ರದೀಪ ಶೆಟ್ಟರ್ ಬಗ್ಗೆ ನಾನು ಮಾತಾಡಲ್ಲ. ಪ್ರದೀಪ್ ಶೆಟ್ಟರ್​ಗೆ ಅಸಮಾಧಾನ ಮೊದಲೇ ಇತ್ತು. ಅದು ಇವಾಗ ಹೊರಗೆ ಬಂದಿದೆ. ಮೊನ್ನೆಯ ವಿಧಾನಸಭೆ ಚುನಾವಣೆಯೇ ಇದಕ್ಕೆ ಉದಾಹರಣೆ, ನಾನು ಯಾರಿಗೂ ಗಾಳ ಹಾಕಿಲ್ಲ. ಅವರೇ ನನಗೆ ಫೋನ್‌ ಮಾಡ್ತಾರೆ, ನನ್ನ ಮನೆಗೆ ಬರ್ತಾರೆ. ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದು ಸಮಸ್ಯೆ ಆಗಿದೆ ಎಂದು ಕೆಲವರು ಹೇಳ್ತಾರೆ. ಬಿಜೆಪಿಯಲ್ಲಿ ಕೆಲವರು ಕುದಿಯುತ್ತಿದ್ದಾರೆ. ಪಕ್ಷದ ಸ್ಥಿತಿ ಏನಾಗಿದೆ, ನನಗೆ ಕರೆ ಮಾಡಿ ದುಃಖ ತೋಡಿಕೊಳ್ಳುತ್ತಿದ್ದಾರೆ. ಇದು ಕೇವಲ ಧಾರವಾಡದ ಸ್ಥಿತಿ ಅಲ್ಲ. ಎಲ್ಲ ಜಿಲ್ಲೆಯಲ್ಲಿ ಹೀಗೆ ಇದೆ ಎಂದರು.

ಇದನ್ನೂ ಓದಿ : ಪರಮೇಶ್ವರ್ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು: ಕ್ಷಮೆ ಕೇಳುವಂತೆ ಈಶ್ವರಪ್ಪ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.