ETV Bharat / state

ಸ್ವೈಪಿಂಗ್​ ಯಂತ್ರಗಳಿಂದ ಹಣ ವರ್ಗಾವಣೆ ಪ್ರಕರಣ: ಓರ್ವನ ಬಂಧನ, ಮುಂದುವರಿದ ಶೋಧ - ಓರ್ವನ ಬಂಧನ

Online fraud case: ಸ್ವೈಪಿಂಗ್ ಯಂತ್ರಗಳಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಗೌಪ್ಯ ಮಾಹಿತಿ ಕದ್ದು ಹಣ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

hubli
ಹುಬ್ಬಳ್ಳಿ
author img

By ETV Bharat Karnataka Team

Published : Nov 30, 2023, 12:12 PM IST

ಹುಬ್ಬಳ್ಳಿ : ಸೈಬರ್ ಅಪರಾಧ ಕೃತ್ಯಕ್ಕೆ ಸ್ವೈಪಿಂಗ್​ ಮಷಿನ್​ಗಳನ್ನು ಪೂರೈಸುತ್ತಿದ್ದ ಆರೋಪದ ಮೇಲೆ ಹುಬ್ಬಳ್ಳಿ ಸೈಬರ್ ಠಾಣೆ ಪೊಲೀಸರು ಮಂಗಳೂರು ಮೂಲದ ಮಹ್ಮದ್ ಹಮೀದ್ ಎಂಬಾತನನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಈತನಿಂದ ಎರಡು ಭಾರತ್ ಪೇ ಸ್ವೈಪಿಂಗ್ ಯಂತ್ರ, ಮೊಬೈಲ್ ಫೋನ್ ಹಾಗೂ ಎಟಿಎಂ ವಶಪಡಿಸಿಕೊಳ್ಳಲಾಗಿದೆ.

ಸ್ವೈಪಿಂಗ್ ಯಂತ್ರಗಳಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಗೌಪ್ಯ ಮಾಹಿತಿ ಕದ್ದು ಹಣ ವರ್ಗಾವಣೆ ಮಾಡಿಕೊಂಡ ಕುರಿತು ಸೈಬ‌ರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್​ಪೆಕ್ಟರ್ ಬಿ.ಕೆ.ಪಾಟೀಲ ನೇತೃತ್ವದ ತಂಡ ಮಾಹಿತಿ ಸಂಗ್ರಹಿಸಿ ಮೈಸೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದೆ.

ಬಳಕೆ ಮಾಡದಿರುವ ಸ್ವೈಪಿಂಗ್ ಯಂತ್ರಗಳನ್ನು ಆರೋಪಿ ಸಂಗ್ರಹಿಸಿ ಅವುಗಳನ್ನು ಸೈಬರ್ ವಂಚಕರಿಗೆ ಪೂರೈಸುತ್ತಿದ್ದ. ವಂಚಕರು ಅವುಗಳನ್ನು ಬಳಸಿಕೊಂಡು ಗ್ರಾಹಕರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಗೌಪ್ಯ ಮಾಹಿತಿ ಹ್ಯಾಕ್ ಮಾಡುತ್ತಿದ್ದರು. ನಂತರ ನಕಲಿ ಕಾರ್ಡ್ ತಯಾರಿಸಿ ಶೋ ರೂಮ್‌ಗಳಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು.

ಇದನ್ನೂ ಓದಿ: ಸೈಬರ್ ಕ್ರೈಮ್ ಸುಳಿಯಲ್ಲಿ ಸಿಲುಕುವ ಜನ : ಮಾಯಾಜಾಲಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಉತ್ತರ ಕನ್ನಡಿಗರು

ಪ್ರಕರಣದ ಹಿನ್ನೆಲೆ: ಪಿಒಎಸ್ ಯಂತ್ರ ದುರ್ಬಳಕೆ ಮಾಡಿಕೊಂಡು 25 ಲಕ್ಷ ರೂ.‌ ವಂಚನೆ ಮಾಡಲಾಗಿದೆ ಎಂದು ಹಳೇ ಹುಬ್ಬಳ್ಳಿಯ ಇಂದ್ರಪ್ರಸ್ಥ ನಗರದ ವಾಸಿಂ ಅಹ್ಮದ್ ಖಾಜಿ ಎಂಬವರು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: 854 ಕೋಟಿ ರೂ ಸೈಬರ್ ಹೂಡಿಕೆ ವಂಚನೆ ಪ್ರಕರಣ. .. ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಆರೋಪಿಗಳು

ಭಾರತ್​ ಪೇ ಪಿಒಎಸ್ ಮಷಿನ್ ಫ್ಯಾಬ್ರಿಕೇಷನ್ ವ್ಯವಹಾರಕ್ಕೆ ಹಣ ಬೇಕಾಗಿದೆ‌, ಅದರ ಚಾರ್ಜ್ ಕೊಡುತ್ತೇವೆ ಎಂದು ನಂಬಿಸಿ ಯಂತ್ರ ದುರುಪಯೋಗ ಮಾಡಿಕೊಂಡು 25 ಲಕ್ಷಕ್ಕೂ ಅಧಿಕ ಅನಧಿಕೃತ ವ್ಯವಹಾರ ಮಾಡಿ ಮೋಸ ಮಾಡಲಾಗಿದೆ ಎಂದು ವಾಸಿಂ ಅಹ್ಮದ್ ಖಾಜಿ ದೂರಿನಲ್ಲಿ ಆರೋಪಿಸಿದ್ದರು. ವಿಶಾಲ ನಗರದ ಇಮ್ರಾನ್ ‌ಖಾನ್, ಹಳೆ ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್​ನ ಖಾಸಿಂ ಲಷ್ಕರ್, ಹಾವೇರಿ ತಡಸ ನಿವಾಸಿ ಅಲ್ತಾಫ್, ಗೋವಾದ ಜಾವೇದ್ ಅವರು ವಾಸಿಂ ಖಾಜಿಯವರನ್ನು ಸಂಪರ್ಕಿಸಿ ಫ್ಯಾಬ್ರಿಕೇಷನ್ ವ್ಯವಹಾರಕ್ಕೆ ಭಾರತ್ ಪೇ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರ ಪಡೆದುಕೊಂಡಿದ್ದರು. ಆ ಮೂಲಕ ನ.8 ರಿಂದ 20 ರವರೆಗೆ 25 ಲಕ್ಷಕ್ಕಿಂತಲೂ ಹೆಚ್ಚು ಅನಧಿಕೃತ ವ್ಯವಹಾರ ಮಾಡಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.‌ ಪ್ರಕರಣದ ತನಿಖೆ ನಡೆಸಿದಾಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಟೆಲಿಗ್ರಾಂನಲ್ಲಿ ವಂಚನೆ : ಸೈಬರ್ ಗ್ಯಾಂಗ್ ಬೇಧಿಸಿದ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.