ಧಾರವಾಡ: ನಗರದದ ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಕುರ್ಚಿಗಾಗಿ ಈಗ ಇಬ್ಬರು ಅಧಿಕಾರಿಗಳ ಮಧ್ಯೆ ಕಾದಾಟ ಶುರುವಾಗಿದೆ.
ಧಾರವಾಡ ಹೊರವಲಯದ ಈ ಪೊಲೀಸ್ ತರಬೇತಿ ಶಾಲೆಗೆ ವಿಜಯಪುರದ ಎನ್.ಬಿ. ಜಾಧವ್ ಎಂಬುವವರನ್ನು ಎಸ್ಪಿಯನ್ನಾಗಿ ವರ್ಗಾಯಿಸಿದೆ. ಆದರೆ, ಸದ್ಯ ಇಲ್ಲಿರುವ ಎಸ್ಪಿ ಪಾರಶೆಟ್ಟಿ ಹಿಡಿದ ಕುರ್ಚಿ ಬಿಡೋಕೆ ಸಿದ್ದರಿಲ್ಲ. ಅಧಿಕಾರ ವಹಿಸಿಕೊಳ್ಳೋಕೆ ಅಂತ ನೂತನ ಎಸ್ಪಿ ಜಾಧವ್ ಮಧ್ಯಾಹ್ನ 12ರಿಂದಲೇ ಕಾಯುತ್ತ ಕುಳಿತರೂ ಪಾರಶೆಟ್ಟಿ ಮಾತ್ರ ಕುರ್ಚಿ ಬಿಟ್ಟು ಕೊಡಲಿಲ್ಲವಂತೆ.

ಪೊಲೀಸ್ ಮಹಾನಿರ್ದೇಶಕಿ ನಿಲಮಣಿ ರಾಜುರವರ ಆದೇಶದ ಪ್ರತಿಯನ್ನು ತೆಗೆದುಕೊಂಡು ಬಂದರೂ ಕೂಡ ಕ್ಯಾರೆ ಎನ್ನದ ಪಾರಶೆಟ್ಟಿ, ನಾನು ನಿವೃತ್ತಿ ಹಂತದಲ್ಲಿ ಇರುವೆ. ನಾನು ಅಧಿಕಾರ ಬಿಟ್ಟು ಕೊಡುವುದಿಲ್ಲ ಅಂತಾ ಸಂಜೆಯವರೆಗೂ ಕುರ್ಚಿ ಮೇಲೆ ಕುಳಿತು ಬಿಟ್ಟಿದ್ದಾರೆ. ಇದರಿಂದಾಗಿ ಈಗ ನನಗೆ ದಯಮಾಡಿ ನ್ಯಾಯ ಒದಗಿಸಿಕೊಡಿ ಎಂದು ನೂತನವಾಗಿ ವರ್ಗವಾಣೆಯಾಗಿ ಬಂದಿರುವ ಎಸ್ಪಿ ಅಳಲು ತೋಡಿಕೊಳ್ಳುವಂತಾಗಿದ್ದು, ಮೇಲಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲವಾ? ಎನ್ನುವ ಪ್ರಶ್ನೆ ಮೂಡಿದೆ.