ETV Bharat / state

ಆರ್ಥಿಕ ನಷ್ಟದಲ್ಲಿ ಎನ್​ಡಬ್ಲೂಕೆಎಸ್​​ಆರ್​ಟಿಸಿ: ಸಾಲಕ್ಕಾಗಿ ಮತ್ತೆ ಅರ್ಜಿ

ಈಗಾಗಲೇ ನೂರಾರು ಕೋಟಿ ರೂಪಾಯಿ ಸಾಲ ಹಾಗೂ ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿರುವ ವಾಯುವ್ಯ ಸಾರಿಗೆ ಸಂಸ್ಥೆ ಇದೀಗ ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಸಂಸ್ಥೆಯ ನೌಕರರಲ್ಲಿ ಆತಂಕ ಮೂಡಿಸಿದೆ‌.

Northwest Karnataka Transport
ವಾಯುವ್ಯ ಕರ್ನಾಟಕ ಸಾರಿಗೆ
author img

By

Published : Feb 4, 2021, 10:28 AM IST

ಹುಬ್ಬಳ್ಳಿ : ಒಂದೆಡೆ ಸಾರಿಗೆ ಸಂಸ್ಥೆ ನೌಕರರಿಗೆ ಸಂಬಳ ಸಿಗ್ತಾ ಇಲ್ಲ. ಇನ್ನೊಂದೆಡೆ ಸಾರಿಗೆ ಸಂಸ್ಥೆ ನೌಕಕರಿಗೆ ಗ್ರ್ಯಾಚುಟಿ ಹಣ ನೀಡ್ತಾ ಇಲ್ಲ. ಸಿಬ್ಬಂದಿ ಕೇಳಿದ್ರೆ ಹಣ ಇಲ್ಲ ಅಂತಾರೆ. ಇದರ ಮಧ್ಯೆ ವಾಯುವ್ಯ ಸಾರಿಗೆ ಸಂಸ್ಥೆ ಇದೀಗ ಮತ್ತೆ 200 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಹಾಕಿದೆ. ಹಾಗಾದ್ರೆ ಸಾರಿಗೆ ಸಂಸ್ಥೆಯ ಆದಾಯ ಏನಾಗುತ್ತಿದೆ? ಸಾಲಕ್ಯಾಕ್ಕೆ ಅರ್ಜಿ ಹಾಕಿದ್ದಾರೆ ಅನ್ನೋ ಸ್ಟೋರಿ ಇಲ್ಲಿದೆ ನೋಡಿ.

ಕೊರೊನಾ ಸಾಕಷ್ಟು ಹೊಡೆತ ನೀಡಿದೆ. ಇದಕ್ಕೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕೂಡ ಹೊರತಾಗಿಲ್ಲ. ಲಾಕ್ ಡೌನ್ ನಿಂದ ಸಂಸ್ಥೆ ಇನ್ನಿಲ್ಲದ ನಷ್ಟಕ್ಕೆ ತುತ್ತಾಗಿದೆ. ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲದಂತಹ ದುಸ್ಥಿತಿ ಬಂದಿದೆ. ಇದರ ಮಧ್ಯೆ ನಿವೃತ್ತ ನೌಕಕರಿಗೆ ಗ್ರ್ಯಾಚುಟಿ ಹಣ ನೀಡಲು ನಿಗಮದ ಬಳಿ ಬಿಡಿಗಾಸು ಹಣವಿಲ್ಲದಾಗಿದೆ. ಹೀಗಾಗಿ ಈಗಾಗಲೇ ನಷ್ಟ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಸಂಸ್ಥೆ ಇದೀಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ನಿರ್ಧಾರಕ್ಕೆ ತೆಗೆದುಕೊಂಡಿದೆ. ವಾಯುವ್ಯ ಸಾರಿಗೆ ಸಂಸ್ಥೆ ಸಾಕಷ್ಟು ಸಾಲ ಹಾಗೂ ನಷ್ಟದಲ್ಲಿದ್ರು ಇದೀಗ ಮತ್ತೆ 200 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಹಾಕಿದೆ ಎನ್ನಲಾಗ್ತಿದೆ.

ಆರ್ಥಿಕ ನಷ್ಟದಲ್ಲಿ ಎನ್​ಡಬ್ಲೂಕೆಎಸ್​​ಆರ್​ಟಿಸಿ

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳಿಂದ 200 ಕೋಟಿ ರೂಪಾಯಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದೆ. 2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿ ನ್ಯಾಸ ಮಂಡಳಿಯ ಬಾಕಿ ಮೊತ್ತ ಪಾವತಿಸಲು 200 ರೂ. ಕೋಟಿ ರೂಪಾಯಿ ದೀರ್ಘಾವದಿ ಸಾಲವನ್ನು, 7 ವರ್ಷಗಳ ಅವಧಿಗೆ ಸಂಸ್ಥೆ ಪಡೆಯಲು ಮುಂದಾಗಿದೆ.

ಈಗಾಗಲೇ ನೂರಾರು ಕೋಟಿ ರೂಪಾಯಿ ಸಾಲ ಹಾಗೂ ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿರುವ ವಾಯುವ್ಯ ಸಾರಿಗೆ ಸಂಸ್ಥೆ ಇದೀಗ ಮತ್ತೆ ಸಾಲಕ್ಕೆ ಅರ್ಜಿ ಹಾಕಿರುವುದು ವಾಯುವ್ಯ ಸಾರಿಗೆ ಸಂಸ್ಥೆಯ ನೌಕರರಲ್ಲಿ ಆತಂಕ ಮೂಡಿಸಿದೆ‌. ನಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿರುವ ಸಾರಿಗೆ ಸಂಸ್ಥೆ ಸಾಲಕ್ಕೆ ಅರ್ಜಿ ಹಾಕುವ ಬದಲು ಸರ್ಕಾರದಿಂದ ನೆರವು ಪಡೆದು ನಷ್ಟವನ್ನ ಸರಿದೂಗಿಸಬೇಕಾಗಿತ್ತು ಅಂತಾರೆ ಸಂಸ್ಥೆಯ ಮಾಜಿ ಅಧ್ಯಕ್ಷ.‌

ವಾಯುವ್ಯ ಸಾರಿಗೆ ಸಂಸ್ಥೆ ಈಗಾಗಲೇ ನಷ್ಟಕ್ಕೆ ಸಿಲುಕಿ ಸಂಕಷ್ಟದ ಸುಳಿಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಸಹಾಯದ ಹಸ್ತ ಚಾಚಬೇಕಿದ್ದ ಸರ್ಕಾರ ವಾಯುವ್ಯ ಸಾರಿಗೆ ಸಂಸ್ಥೆ ಮೂಲಕ ಸಾಲಕ್ಕೆ ಅರ್ಜಿ ಹಾಕಿಸಿರುವುದು ನಿಜಕ್ಕೂ ನೌಕರರಲ್ಲಿ ಆತಂಕ ಮೂಡಿಸಿದೆ. ನಷ್ಟದಲ್ಲಿರುವ ಸಂಸ್ಥೆಗೆ ನೆರವು ನೀಡಿ ವಾಯುವ್ಯ ಸಾರಿಗೆ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ಮುಂದಾಗಲಿ ಅನ್ನೋದು ಉತ್ತರ ಕರ್ನಾಟಕದ ಜನರ ಆಶಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.