ಹುಬ್ಬಳ್ಳಿ : ಕೋವಿಡ್ ಸಂದರ್ಭದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಶ್ರಮ ಹಾಕಲಾಗಿತ್ತು. ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ನಗದು ರಹಿತ ವ್ಯವಹಾರಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪೇಟಿಎಂನತ್ತ ಮುಖ ಮಾಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಹತ್ತಿರ ಸ್ಮಾರ್ಟ್ ಫೋನ್‌ಗಳು ಇವೆ. ಹಣ ವರ್ಗಾವಣೆ ಮಾಡುವಂತಹ ಆ್ಯಪ್ಗಳು ಇದ್ದೇ ಇರುತ್ತವೆ. ಅಷ್ಟೇ ಅಲ್ಲ, ಚಿಲ್ಲರೆ ಇಲ್ಲದ ಕಾರಣದಿಂದ ಅದೆಷ್ಟೋ ಜಗಳಗಳು ನಡೆದಿವೆ. ಇದನ್ನೆಲ್ಲ ಜನರಿಗೆ ಹಾಗೂ ಸಂಸ್ಥೆಗೆ ಸರಳವಾಗಲಿ ಎಂಬ ದೃಷ್ಟಿಯಿಂದ ಪೇಟಿಎಂ ಬಾರ್ ಕೋಡ್ ಅಳವಡಿಸಿದೆ.
ಈಗಾಗಲೇ ಬಿಆರ್‌ಟಿಎಸ್ ಟೀಕೆಗೆ ಕೌಂಟರ್‌ಗಳಲ್ಲಿ ಬಾರ್ ಕೋಡ್ ಅನ್ನು ಅಳವಡಿಸಿದೆ. ಮುಂದಿನ ಕೆಲ ದಿನಗಳ ನಂತರ ಗ್ರಾಮಾಂತರ ಬಸ್, ವೇಗದೂತ ಬಸ್‌ಗಳಲ್ಲೂ ಅಳವಡಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆ ವ್ಯವಸ್ಥಾಪಕರಾದ ಗುರುದತ್ತ ಹೆಗಡೆ ಹೇಳಿದರು.
ವಾಕರಸಾ ಸಂಸ್ಥೆ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಹಾಗೂ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ವ್ಯವಸ್ಥೆಯ ಅನುಷ್ಠಾನಕ್ಕಾಗಿ ಪೇಟಿಎಂ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಪ್ರಯಾಣಿಕರಿಗೆ ತುಂಬ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ಸಂಸ್ಥೆ ಹೊಂದಿದೆ.
ಪ್ರಯಾಣಿಕರು ಕೆಲವೊಮ್ಮೆ ಚಿಲ್ಲರೆ ಇಲ್ಲದೆ ಸಾಲಿನಲ್ಲೇ ನಿಲ್ಲಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಇದಕ್ಕಾಗಿ ಸಿಬ್ಬಂದಿ ಬೇಕಿಲ್ಲ ಜತೆಗೆ ವೆಚ್ಚದಾಯಕವೂ ಅಲ್ಲ. ಇರುವ ವ್ಯವಸ್ಥೆ ಕೌಂಟರ್‌ಗಳಲ್ಲಿ ಇದನ್ನು ಸಾಕಾರಗೊಳಿಸಲು ಸಂಸ್ಥೆ ಮುಂದಾಗಿದೆ.
ಓದಿ: ಹಿಂದುತ್ವ ಅಂದರೆ ಕೇಸರಿ ಶಾಲೂ, ಟೋಪಿ ಎರಡರ ಸಮಾಗಮ : ಸಿ ಟಿ ರವಿ ವ್ಯಾಖ್ಯಾನ