ETV Bharat / state

ಕಿಮ್ಸ್ ಆಸ್ಪತ್ರೆಗೆ ಕೊರೊನಾ ಕಂಟಕ: ನಾನ್​ ಕೋವಿಡ್​ ರೋಗಿಗಳಿಗೆ ಸಿಗುತ್ತಿಲ್ಲ ಸರಿಯಾದ ಚಿಕಿತ್ಸೆ - ಕೊರೊನಾದಿಂದಾಗಿ ಒಪಿಡಿ ಸೇವೆಯಲ್ಲಿ ಕೊರತೆ

ಕೊರೊನಾ ಕಿಮ್ಸ್ ಆಸ್ಪತ್ರೆಗೆ ದೊಡ್ಡ ಹೊರೆಯಾಗಿದೆ. ಕಿಲ್ಲರ್ ಕೊರೊನಾ ನಿಯಂತ್ರಿಸಲು ಬೇರೆ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕೊರೊನಾ ಕಾರಣಕ್ಕೆ ನಾನ್​ ಕೋವಿಡ್​ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

kims hospital
ಕಿಮ್ಸ್ ಆಸ್ಪತ್ರೆ
author img

By

Published : May 2, 2021, 1:05 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ವಾಣಿಜ್ಯ ನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್​​ನಿಂದಾಗಿ ಒಪಿಡಿಗೆ ಬರುವ ಬೇರೆ ರೋಗಿಗಳ ಸಮಸ್ಯೆಯನ್ನು ಆಲಿಸುವವರೇ ಇಲ್ಲದಂತಾಗಿದೆ.

ಕಿಮ್ಸ್ ಆಸ್ಪತ್ರೆಗೆ ಕೊರೊನಾ ಕಂಟಕ

ಹೀಗಾಗಿ ಒಪಿಡಿ(ಹೊರರೋಗಿಗಳ ಚಿಕಿತ್ಸೆ ವಿಭಾಗ) ರೋಗಿಗಳ ಸಂಖ್ಯೆ ಶೇ. 50 ಇಳಿಕೆಯಾಗಿದ್ದು, ಕೋವಿಡ್​ನಿಂದ ಇತರೆ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಕೋವಿಡ್ ಹಾಗೂ ನಾನ್ ಕೋವಿಡ್ ಕೆಲಸದ ಒತ್ತಡಕ್ಕೆ ವೈದ್ಯರು ಹೈರಾಣಾಗಿದ್ದಾರೆ. ಕೋವಿಡ್ ಹಿನ್ನೆಲೆ ಈಗಾಗಲೇ ನಿಗದಿಯಾಗಿದ್ದ ಬಹುತೇಕ ತುರ್ತು ಅಲ್ಲದೆ ಇರುವ ಸಾಕಷ್ಟು ಆಪರೇಷನ್‌ಗಳು ಮುಂದೂಡಿಕೆಯಾಗಿದೆ. ಇನ್ನು ಈ ಹಿಂದೆ ನಿಗದಿಯಾಗಿದ್ದ ವೈದ್ಯರ ಅಪಾಯಿಂಟ್​ಮೆಂಟ್​​ಗಳು ಕೂಡ ಸಿಗುತ್ತಿಲ್ಲ. ಇದರಿಂದ ಬೇರೆ ಬೇರೆ ಕಡೆಗಳಿಂದ ಬರುವ ಇತರೆ ರೋಗಿಗಳಿಗೆ ಚಿಕಿತ್ಸೆ ಮಾತ್ರ ಸರಿಯಾಗಿ ದೊರೆಯುತ್ತಿಲ್ಲ.

ಸಾಮಾನ್ಯ ದಿನಗಳಲ್ಲಿ ಒಪಿಡಿಯಲ್ಲಿ ಎರಡು ಸಾವಿರ ಜನರಿಗೆ ಸಿಗುತ್ತಿದ್ದ ಸೌಲಭ್ಯ, ಈಗ 800 ಜನರಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ದಿನಕ್ಕೆ ನೂರಾರು ಕೋವಿಡ್ ಕೇಸ್​ಗಳು ಕಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿರುವ ಕಾರಣ ಕಿಮ್ಸ್​ಗೆ ನಾನ್ ಕೋವಿಡ್ ಚಿಕಿತ್ಸೆ ಹೊರೆಯಾಗುತ್ತಿದೆ. ಆದರೂ ಕೂಡ ಎಲ್ಲವನ್ನೂ ನಿಭಾಯಿಸುತ್ತೇವೆ. ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಸಮಾನವಾಗಿ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಕಿಮ್ಸ್ ನಿರ್ದೇಶಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.