ETV Bharat / state

ಅವಳಿ ನಗರಗಳಲ್ಲಿ ಕರ್ನಾಟಕ ಬಂದ್​ಗೆ ಇಲ್ಲ ಬೆಂಬಲ

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್​ಗೆ ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

No Support for Karnataka Bandh in Hubli Dharwad
ಅವಳಿ ನಗರಗಳಲ್ಲಿ ಕರ್ನಾಟಕ ಬಂದ್​ಗೆ ಸಿಗದ ಬೆಂಬಲ
author img

By

Published : Feb 13, 2020, 10:29 AM IST

ಹುಬ್ಬಳ್ಳಿ/ಧಾರವಾಡ : ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್​ಗೆ ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ಅವಳಿ ನಗರಗಳಲ್ಲಿ ಕರ್ನಾಟಕ ಬಂದ್​ಗೆ ಸಿಗದ ಬೆಂಬಲ

ನಗರದ ವಿವಿಧ ಸಂಘಟನೆಗಳಾದ ಆಟೋ ಚಾಲಕರ ಸಂಘ,‌ ಬಸ್ ಚಾಲಕರ ಸಂಘ, ಹಮಾಲರ ಸಂಘ, ಹೋಟೆಲ್ ಮಾಲೀಕರ ಸಂಘ, ಕರವೇ ನಾರಾಯಣ ಗೌಡ, ಪ್ರವೀಣ ಶೆಟ್ಟಿ ಬಣ, ಕಟ್ಟಡ ಕಾರ್ಮಿಕರ ಸಂಘ, ದಲಿತಪರ ಸಂಘಟನೆಗಳು ಸೇರಿದಂತೆ ಯಾರೂ ಬಂದ್​ಗೆ ಬೆಂಬಲ ಸೂಚಿಸಿಲ್ಲ. ‌ಹೀಗಾಗಿ ನಗರದಲ್ಲಿ ಯಥಾ ಸ್ಥಿತಿಯಲ್ಲಿ ವಾಹನ ಸಂಚಾರವಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿಯೂ ಯಾವುದೇ ವ್ಯತ್ಯಯ ಆಗಿಲ್ಲ. ಎರಡೂ ನಗರಗಳ ಶಾಲಾ - ಕಾಲೇಜುಗಳು, ಅಂಗಡಿ -ಮುಂಗಟ್ಟುಗಳು ಎಂದಿನಂತೆ ತೆರೆದಿವೆ.

ಹುಬ್ಬಳ್ಳಿ ನಗರದಲ್ಲಿ ಮಾತ್ರ ಕರ್ನಾಟಕ ಸಂಗ್ರಾಮ ಸೇನೆ ಸಂಘಟನೆ‌ ಒಂದೆ ಬಂದ್​ಗೆ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್​ಗೆ ಮನವಿ ಸಲ್ಲಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.